ಮಂಗಳವಾರ, ಮಾರ್ಚ್ 27, 2018

ರೈಲ್ವೆ ಇಲಾಖೆ ಕೇಳಿದ ಈ ಪ್ರಶ್ನೆಗೆ ಉತ್ತರಿಸಿ - 10 ಲಕ್ಷ ಬಹುಮಾನ ಗೆಲ್ಲಿ..!

==============
ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಇದೀಗ ಒಂದು ಹೊಸ ಸ್ಪರ್ಧೆಯೊಂದನ್ನು ನೀಡಿದೆ. ಈ ಸ್ಪರ್ಧೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ.
=========
ಜನರಿಗೆ ಉತ್ತಮ ಸೇವೆಯನ್ನು ಒದಗಿಸಲು ರೈಲ್ವೆ ಇಲಾಖೆಯು ಹೆಚ್ಚು ಹಣವನ್ನು ಗಳಿಕೆ ಮಾಡುವುದು ಹೇಗೆ ಎಂದು ಪ್ರಶ್ನೆ ಕೇಳಲಾಗಿದೆ.
=========
ಜನ ಭಾಗಿದಾರಿ ಕಾರ್ಯಕ್ರಮದ ಮೂಲಕ ಜನರು ಇಲ್ಲಿ ತಮ್ಮ ಐಡಿಯಾಗಳನ್ನು ರೈಲ್ವೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಜನರು ತಮ್ಮ ಐಡಿಯಾಗಳನ್ನು ಹಂಚಿಕೊಂಡಿದ್ದಕ್ಕೆ ರೈಲ್ವೆ ಇಲಾಖೆ 10 ಲಕ್ಷದವರೆಗೂ ಬಹುಮಾನವನ್ನು ನೀಡುತ್ತಿದೆ. ಸೂಕ್ತ ಉತ್ತರಕ್ಕೆ ರೈಲ್ವೆ ಇಲಾಖೆ 10 ಲಕ್ಷ ಬಹುಮಾನವನ್ನು ನೀಡುತ್ತದೆ.
===========
ಆನ್ ಲೈನ್ ಮೂಲಕ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮೈ ಗವರ್ನಮೆಂಟ್ App ನಲ್ಲಿ ನಿಮ್ಮ ಐಡಿಯಾಗಳನ್ನು ನೀಡಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ