*##ಮಾಹಿತಿ ವೇದಿಕೆ##*
*2017ನೆ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ*
###############
*ಬನ್ನಂಜೆ ಗೋವಿಂದಾಚಾರ್ಯ, ಫಕೀರ್ ಮುಹಮ್ಮದ್ ಕಟ್ಪಾಡಿ, ಡಾ. ನಟರಾಜ ಹುಳಿಯಾರ್*
###############
*ಬೆಂಗಳೂರು, ಮಾ.1: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017 ಸಾಲಿನ ಸಾಹಿತ್ಯ ಪ್ರಶಸ್ತಿ ಪ್ರಕಟಗೊಂಡಿದ್ದು, ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಸೋಮಶೇಖರ ಇಮ್ರಾಪುರ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ಪ್ರೊ.ಎನ್.ಎಸ್. ಲಕ್ಷ್ಮಿನಾರಾಯಣಭಟ್ಟ, ಕಸ್ತೂರಿ ಬಾಯರಿಗೆ ಗೌರವ ಪ್ರಶಸ್ತಿ ನೀಡಲಾಗಿದೆ.*
################
*ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂ.ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.*
###############
*10 ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ: ಕನ್ನಡ ಸಾಹಿತ್ಯಕ್ಕೆ ನೀಡಿರುವ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೆ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ.*
################
*ಪ್ರೊ.ಧರಣೇಂದ್ರ ಕರಕುರಿ, ಫಕೀರ್ ಮುಹಮ್ಮದ್ ಕಟ್ಪಾಡಿ, ಡಾ.ವಿಜಯಶ್ರೀ ಸಬರದ, ಡಾ.ವಿ.ಮುನಿವೆಂಕಟಪ್ಪ, ಡಾ. ನಟರಾಜ ಹುಳಿಯಾರ್, ಡಾ.ಕೆ.ಕೇಶವ ಶರ್ಮ, ಡಾ.ಕರೀಗೌಡ ಬೀಚನಹಳ್ಳಿ, ಪ್ರೊ. ತೇಜಸ್ವಿ ಕಟ್ಟೀಮನಿ, ಡಾ.ಕಮಲಾ ಹೆಮ್ಮಿಗೆ, ಕಂಚ್ಯಾಣಿ ಶರಣಪ್ಪರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25ಸಾವಿರ ರೂ. ನಗದು, ಪ್ರಮಾಣಪತ್ರ ಒಳಗೊಂಡಿದೆ.*
*2016ನೆ ಸಾಲಿನ ಪುಸ್ತಕ ಬಹುಮಾನ:*
############
*ಕೃಷ್ಣಮೂರ್ತಿ ಬಿಳಿಗೆರೆ, 'ಗಾಯಗೊಂಡಿದೆ ಗರಿಕೆಗಾನ' (ಕಾವ್ಯ), ಬಸವರಾಜ ಹೃತ್ಸಾಕ್ಷಿ, 'ಕಸಬಾರಿಗೆ ಪಾದ' (ಯುವಕವಿಗಳ ಪ್ರಥಮ ಸಂಕಲನ), ರೇಖಾ ಕಾಖಂಡಕಿ 'ವೈವಸ್ವತ' (ಕಾದಂಬರಿ), ಜಯಪ್ರಕಾಶ ಮಾವಿನಕುಳಿ 'ಬ್ರಹ್ಮರಾಕ್ಷಸ' (ಸಣ್ಣಕತೆ), ಸುಧೀರ್ ಅತ್ತಾವರ್ 'ಬಕಾವಲಿಯ ಹೂ'(ನಾಟಕ), ಭಾರತಿ ಬಿ.ವಿ. 'ಮಿಸಳ್ ಭಾಜಿ'(ಲಲಿತ ಪ್ರಬಂಧ), ಡಾ. ಬಿ.ಎಸ್. ತಲ್ವಾಡಿ 'ಯುರೋಪ್ನ ಧಾರ್ಮಿಕ ನೆಲೆಗಳು'(ಪ್ರವಾಸ ಸಾಹಿತ್ಯ), ಪ್ರೀತಿ ನಾಗರಾಜ್ 'ಕಣ್ಣಾಮುಚ್ಚೇ ಕಾಡೇಗೂಡೆ'(ಜೀವನಚರಿತ್ರೆ), ಡಾ. ಎಸ್. ನಟರಾಜ ಬೂದಾಳ್ 'ಕನ್ನಡ ಕಾವ್ಯ ಮೀಮಾಂಸೆ'(ಸಾಹಿತ್ಯ ವಿಮರ್ಶೆ), ಡಾ. ವೀರೇಶ ಬಡಿಗೇರ 'ತಿಂತಿಣಿ ಮೌನೇಶ್ವರರ ವಚನಗಳು'(ಗ್ರಂಥ ಸಂಪಾದನೆ), ನಿರ್ಮಲಾ ಸುರತ್ಕಲ್ 'ಶ್ರಮಯೇವ ಜಯತೆ'(ಮಕ್ಕಳ ಸಾಹಿತ್ಯ), ಡಾ. ಎ.ಎಸ್.ಕುಮಾರ ಸ್ವಾಮಿ'ಅಂತರ್ಜಲ ಬಳಕೆ'(ವಿಜ್ಞಾನ ಸಾಹಿತ್ಯ), ಡಾ. ಸಣ್ಣರಾಮ 'ದಲಿತ ಚಳವಳಿ ನಿನ್ನೆ, ಇಂದು, ನಾಳೆ'(ಮಾನವಿಕ), ಡಾ.ಶರತ್ಚಂದ್ರಸ್ವಾಮಿಗಳು'ಬೌದ್ಧ ಧರ್ಮ ದರ್ಶನ' (ಸಂಶೋಧನೆ), ಎ.ಆರ್.ಮಣಿಕಾಂತ್, ಹ.ಚ.ನಟೇಶಬಾಬು'ಗಿಫ್ಟೆಡ್' (ಕತೆಗಳು) ಅನುವಾದ 1(ಸೃಜನಶೀಲ), ಎಂ. ಅಬ್ದುಲ್ರೆಹಮಾನ್ ಪಾಷ 'ಅಲ್ಲಾಹ್ನಿಂದ ನಿರಾಕೃತರು'ಅನುವಾದ 2( ಸೃಜನೇತರ), ರಾಜೇಶ್ವರಿ ತೇಜಸ್ವಿ 'ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು'(ಸಂಕೀರ್ಣ), ಶಾಂತಿ ಕೆ.ಅಪ್ಪಣ್ಣ 'ಮನಸು ಅಭಿಸಾರಿಕೆ' (ಲೇಖಕರ ಮೊದಲ ಕೃತಿ) ಆಯ್ಕೆಯಾಗಿದ್ದು, 25ಸಾವಿರ ರೂ.ಬಹುಮಾನ, ಪ್ರಮಾಣ ಪತ್ರ ಒಳಗೊಂಡಿರುತ್ತದೆ.*
#################
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ