=====≠===
ರಿಯಾದ್, ಮಾ. 24: ಕಿಂಗ್ ಸೌದ್ ವಿಶ್ವವಿದ್ಯಾನಿಲಯ (ಕೆಎಸ್‌ಯು)ದ ವೈದ್ಯಕೀಯ ತಂಡವೊಂದು, ಸ್ತನ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿರುವ ರೋಗಿಯೊಬ್ಬರಿಗೆ 'ಇಂಟ್ರಾಓಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ತೆರಪಿ (ಐಒಇಆರ್‌ಟಿ) ತಂತ್ರಜ್ಞಾನವನ್ನು ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
========
ಇಂತಹ ತಂತ್ರಜ್ಞಾನದ ಬಳಕೆ ಅರಬ್ ಜಗತ್ತಿನಲ್ಲಿ ಪ್ರಥಮವಾಗಿದೆ.
=======
ಶಸ್ತ್ರಚಿಕಿತ್ಸೆಯ ವೇಳೆ ಈ ತಂತ್ರಜ್ಞಾನದ ಮೂಲಕ ನೇರವಾಗಿ ಗಡ್ಡೆ ಅಥವಾ ಗಡ್ಡೆಯ ಬುಡಕ್ಕೆ ವಿಕಿರಣ ಹಾಯಿಸಲಾಗುತ್ತದೆ, ಆರೋಗ್ಯವಂತ ಅಂಗಾಂಶಗಳನ್ನು ಇದು ಸೋಕುವುದಿಲ್ಲ.
===========
ಯಶಸ್ವಿ ಶಸ್ತ್ರಚಿಕಿತ್ಸೆಯು ಕೆಎಸ್‌ಯುನ ತುರಾಯಿಯಲ್ಲಿ ಇನ್ನೊಂದು ಗರಿಯಾಗಿದೆ. ಸೌದಿ ಅರೇಬಿಯದಲ್ಲಿ ಶೈಕ್ಷಣಿಕ ಪ್ರಗತಿಯಲ್ಲಿ ಅದು ಎಲ್ಲರಿಗಿಂತ ಮುಂದಿದೆ.
=========
''ಮಾನವ ಕುಲಕ್ಕೆ ಒಳಿತಾಗುವ ಕೆಲಸವೊಂದನ್ನು ಅರಬ್ ಜಗತ್ತಿನಲ್ಲಿ ಮೊದಲು ಮಾಡಲು ನಮಗೆ ಸಾಧ್ಯವಾಗಿರುವುದು ಒಂದು ಶ್ರೇಷ್ಠ ಅನುಭವವಾಗಿದೆ'' ಎಂದು ಶಸ್ತ್ರಚಿಕಿತ್ಸೆ ನಡೆಸಿದ ತಂಡದ ಮುಖ್ಯಸ್ಥ ಪ್ರೊಫೆಸರ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಅಲ್-ಸೈಫ್ 'ಅರಬ್ ನ್ಯೂಸ್'ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.
===≠=========
ಶನಿವಾರ, ಮಾರ್ಚ್ 24, 2018
ನೂತನ ತಂತ್ರಜ್ಞಾನದ ಮೂಲಕ ಸೌದಿ ವಿವಿಯಲ್ಲಿ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ