*##ಮಾಹಿತಿ ವೇದಿಕೆ##*
*ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು*
################
*ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.*
*ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು”. ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.” ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ… ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…*
#################
*ವಿಭಕ್ತಿ ಪ್ರತ್ಯಯಗಳ ವಿಧಗಳು : ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..*
*ವಿಭಕ್ತಿಯ ಹೆಸರು ಪ್ರತ್ಯಯ*
*1)ಪ್ರಥಮವಿಭಕ್ತಿ – ಉ*
*2)ದ್ವಿತೀಯವಿಭಕ್ತಿ – ಅನ್ನು*
*3)ತೃತೀಯವಿಭಕ್ತಿ – ಇಂದ*
*4)ಚತುರ್ಥಿವಿಭಕ್ತಿ- ಗೆ, ಇಗೆ*
*5)ಪಂಚಮಿವಿಭಕ್ತಿ – ದೆಸೆಯಿಂದ*
*6)ಷಷ್ಠಿವಿಭಕ್ತಿ – ಅ*
*7)ಸಪ್ತಮಿವಿಭಕ್ತಿ – ಅಲ್ಲಿ*
*8)ಸಂಭೋಧನವಿಭಕ್ತಿ – ಮ ಏ,*
##################
*ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು, ವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು*
*1)ಪ್ರಥಮ ಕತೃರ್ಥ – ಉ*
*2)ದ್ವಿತೀಯ ಕರ್ಮಾರ್ಥ – ಅನ್ನು*
*3)ತೃತೀಯ ಕರಣಾರ್ಥ – ಇಂದ*
*4)ಚತುರ್ಥೀ ಸಂಪ್ರಧಾನ – ಗೆ*
*5)ಪಂಚಮಿ ಅಪಧಾನ – ದೆಸೆಯಿಂದ*
*6)ಷಷ್ಠಿ ಸಂಭಂಧ – ಅ*
*7)ಅಪ್ತಮಿ ಅಧಿಕರಣ – ಅಲ್ಲಿ*
*8)ಸಂಬೋಧನ – ಅಭಿಮುಖೀ ಏ. ಆಕರಣಹಳಗನ್ನಡ ವಿಭಕ್ತಿ ಪ್ರತ್ಯಯಗಳು*
##################
*ವಿಭಕ್ತಿ ಪ್ರತ್ಯಯಗಳ ಬಳಕೆ* *ಮತ್ತು ಅವು ಕೊಡುವ ಅರ್ಥ’*
*ಮನೆ ಎಂಬ ನಾಮಪದಕ್ಕೆ* *ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.*
################
*ಪ್ರಥಮಾ ವಿಭಕ್ತಿ: ಮನೆ + ಉ = ಮನೆಯು*
*ದ್ವಿತೀಯಾ ವಿಭಕ್ತಿ: ಮನೆ + ಅನ್ನು = ಮನೆಯನ್ನು*
*ತೃತೀಯಾ ವಿಭಕ್ತಿ: ಮನೆ + *ಇಂದ = ಮನೆಯಿಂದ*
*ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ*
*ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ*
*ಷಷ್ಠೀ ವಿಭಕ್ತಿ: ಮನೆ + ಅ = ಮನೆಯ*
*ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ*
*ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ*
#################
*1.ಪ್ರಥಮಾ : “ರಾಮನು ಬಂದನು”*
*ಇಲ್ಲಿ “ಬಂದನು” ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ ‘ರಾಮ'(ಕರ್ತೃ).*
*ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ “ರಾಮನು ಬಂದನು” ಎಂದು ಹೇಳಲು, “ರಾಮ ಬಂದ” ಎಂದು ಹೇಳುವುದು, ಬರೆಯುವುದು ಉಂಟು.*
################
*2.ದ್ವಿತೀಯಾ : “ರಾಮನನ್ನು ಕರೆದರು”*
*ಇಲ್ಲಿ “ಕರೆದರು” ಎಂಬ ಕ್ರಿಯೆಯನ್ನು ‘ರಾಮ’ ಎಂಬ ನಾಮಪದದ* *ಕುರಿತು( ನಾಮಪದದ ಮೇಲೆ ) ನಡೆಯಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.*
*ಸಂಸ್ಕೃತದಲ್ಲಿ “ಗ್ರಾಮಂ ಗತಃ” ಅಂದರೆ “ಗ್ರಾಮಕ್ಕೆ ಹೋದವನು” ಎಂದು. ಆದರೆ “ಗ್ರಾಮಂ” ದ್ವಿತೀಯಾ ವಿಭಕ್ತಿ, “ಗ್ರಾಮಕ್ಕೆ” ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ “ಗ್ರಾಮವನ್ನು ಹೋದನು” ಎಂದರೆ ತಪ್ಪು.*
################
*3.ತೃತೀಯಾ: “ರಾಮನು* *ಬಿಲ್ಲಿನಿಂದ ಹೊಡೆದನು”*
*ಇಲ್ಲಿ ‘ರಾಮ’ ಎಂದ* *ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೊಡೆದನು’ ಎಂಬ ಕ್ರಿಯೆಯನ್ನು ‘ಬಿಲ್ಲು’ ಎಂಬ ನಾಮಪದವನ್ನು ಬಳಸಿ ನಡೆಸಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.*
*1. “ರಾಮೇನ ಸಹ” ಅಂದರೆ “ರಾಮನ ಜೊತೆ” ಎಂದು, ಆದರೆ “ರಾಮೇನ” ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, “ರಾಮನ” ಷಷ್ಠೀ ವಿಭಕ್ತಿ. ಸಂಸ್ಕೃತದಂತೆ “ರಾಮನಿಂದ ಜೊತೆ” ಎಂದು ಕನ್ನಡದಲ್ಲಿ ಹೇಳಿದರೆ ಅದು ತಪ್ಪು.*
*2. “ಸಂಸ್ಕೃತೇನ ಭಾಷತಿ” ಅಂದರೆ “ಸಂಸ್ಕೃತದಲ್ಲಿ ಮಾತಾಡುತ್ತದೆ” ಎಂದು, ಆದರೆ “ಸಂಸ್ಕೃತೇನ” ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, “ಸಂಸ್ಕೃತದಲ್ಲಿ” ಇದು ಸಪ್ತಮೀ.*
###############
*4.ಚತುರ್ಥೀ : “ರಾಮನು ಮನೆಗೆ ಹೋದನು”*
*ಇಲ್ಲಿ ‘ರಾಮ’ ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ ‘ಮನೆ’ ಎಂಬ ನಾಮಪದ ತಿಳಿಸುವ ಜಾಗ.*
##############
*5.ಪಂಚಮೀ : “ರಾಮನ ದೆಸೆಯಿಂದ ಶಿವ ಹೋದನು”*
*ಇಲ್ಲಿ ‘ರಾಮ’ ಎಂಬ ನಾಮಪದದ ಪ್ರೇರಣೆಯಿಂದ ‘ಶಿವ’ ಎಂಬ* *ನಾಮಪದವು(ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ಮಾಡಿತು.*
##############
*6.ಷಷ್ಠೀ : “ರಾಮನ ಹೆಂಡತಿ ಸೀತೆ”*
*ಇಲ್ಲಿ ‘ರಾಮ’ ಎಂದ ನಾಮಪದಕ್ಕೆ ಮತ್ತು ‘ಸೀತೆ’ ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು ‘ಹೆಂಡತಿ’ ಎಂಬ ನಾಮಪದವು ತಿಳಿಸುವುದು.*
############
*ವಿಭಕ್ತಿ ಪ್ರತ್ಯಯ ರೂಪಗಳು : *
*1)ಪ್ರಥಮಾ ಮ್ ಮ್ ರಾಮಂ*
*2)ದ್ವಿತೀಯಾ ಅಮ್ ರಾಮನಂ*
*3)ತೃತೀಯ ಇಮ್ ರಾಮನಿಂ*
*4)ಚತುರ್ಥೀ ಗೆ ರಾಮಂಗೆ*
*5)ಪಂಚಮಿ ಅತ್ತಣಿಂ ರಾಮನತ್ತಣಿಂ*
*6)ಷಷ್ಠಿ ಅ ರಾಮನ*
*7)ಸಪ್ತಮಿ ಒಳ್ ರಾಮನೊಳ್*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ