*##ಮಾಹಿತಿ ವೇದಿಕೆ ##*
*ಸರಾವಾಕ್‌ದ ಗುನ್ನುಂಗ್ ಮುಲು ರಾಷ್ಟ್ರೀಯ ಉದ್ಯಾನ: *
###############
*ಇದು ಯುನೆಸ್ಕೋ ವಿಶ್ವ ಪರಂಪರಾ ಸ್ಥಳ. ಇಲ್ಲಿ ಗುನ್ನುಂಗ್ ಮುಲು, ಗುನ್ನುಂಗ್ ಲಿಪಿ ಹಾಗೂ ಗುನ್ನುಂಗು ಬೆನಾರತ್ ಎಂಬ 3 ಪರ್ವತಗಳಿವೆ. ಮುಲುದಲ್ಲಿ ವೇಗವಾಗಿ ಹರಿಯುವ ನದಿಗಳು, ಎತ್ತರದ ಬೆಟ್ಟದ ತುದಿಗಳು, ಅರಣ್ಯ ತೊರೆಗಳಿವೆ. ಇಲ್ಲಿಯ ಅತ್ಯಂತ ಆಕರ್ಷಕ ಸ್ಥಳ 300 ಕಿ.ಮಿ ಚಾಚಿಕೊಂಡಿರುವ ಹಾವಿನಂತಹ ದಾರಿಗಳು. ಇವು ಅರಣ್ಯ ಪರ್ವತಗಳ ಕೆಳಗೆ ಹೂತು ಹೋಗಿವೆ. ಇಲ್ಲಿ ಪ್ರಪಂಚದ ಅತ್ಯಂತ ವಿಶಾಲ ಕೋಣೆ ಸರಾವಾಕ್ ಚೆಂಬರ್ ಇದೆ. ಇಲ್ಲಿ 40 ಬೋಯಿಂಗ್ 747 ವಿಮಾನಗಳು ನಿಲ್ಲುವಷ್ಟು ದೊಡ್ಡದಾಗಿದೆ. 16 ಕಾಲು ಚೆಂಡಾಟ ಮೈದಾನಗಳಷ್ಟು ವಿಸ್ತಾರವಾಗಿದೆ. 45 ಮೀಟರ್ ಎತ್ತರದ ಶಿಖರಗಳು ಇವೆ. ಬ್ಲೇಡಿನಷ್ಟು ಹರಿತವಾದ ಸುಣ್ಣದ ಕಲ್ಲಿನ ಮೊನಚಾದ ತುದಿಗಳು ಗುನಂಗ್ ಅಪಿಯ ಇಳಕಲುಗಳ ಮುಂದಕ್ಕೆ ಚಾಚಿಕೊಂಡಿವೆ. 2377 ಮೀಟರ್ ಶೃಂಗ ಹೊಂದಿರುವ ಗುನ್ನುಂಗ್ ಮುಲು ಹಾಗೂ 1750 ಮೀಟರ್ ಎತ್ತರದ ಸುಣ್ಣದ ಕಲ್ಲಿನ ಗುನ್ನುಂಗ್ ಅಪಿ ಮಧ್ಯೆ ಅನೇಕ ಬಂಡೆ ಪರ್ವತಗಳಿದ್ದು ಆಳವಾದ ಕಮರಿಗಳಲ್ಲಿ ವೇಗವಾಗಿ ಹರಿಯುವ ನದಿಗಳು ಹಾಗೂ ಹೋಲಿಕಾತೀತ ವನ್ಯಜೀವಿಗಳಿವೆ. ಅನೇಕ ಅಪರಿಚಿತ ಕ್ರಿಮಿಗಳು, ಅಪಾರ ಸಂಖ್ಯೆಯ ಬಾವಲಿಗಳಿವೆ. ಸುತ್ತಲಿನ ಉಷ್ಣವಲಯ ಮಳೆ ಅರಣ್ಯದಲ್ಲಿ 20000ಕ್ಕಿಂತ ಹೆಚ್ಚು ಪ್ರಾಣಿಗಳು ಹಾಗೂ 3500 ಸಸ್ಯಗಳ ವಿವಿಧ ಪ್ರಭೇಧಗಳಿವೆ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ