*##ಮಾಹಿತಿ ವೇದಿಕೆ##*
*ಭಾರತದಲ್ಲಿ ಬಾಲ್ಯ ವಿವಾಹ ಇಳಿಕೆ*
############
*ನವದೆಹಲಿ: ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 18 ವರ್ಷದೊಳಗಿನ ಮಕ್ಕಳ ವಿವಾಹ ಪ್ರಮಾಣ ಶೇ 47ರಿಂದ ಶೇ 27ಕ್ಕೆ ಇಳಿದಿದೆ. ಹಿಂದೆ ಪ್ರತಿ ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದು ಮಗು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿತ್ತು. ಈಗ ಆ ಪ್ರಮಾಣ 5:1ಕ್ಕೆ ಇಳಿದಿದೆ ಎಂದು ಯುನಿಸೆಫ್ ಹೇಳಿದೆ.*
############
*ಈ ಪ್ರಮಾಣ ಜಾಗತಿಕ ಮಟ್ಟದಲ್ಲಿ ಬಾಲ್ಯ ವಿವಾಹದ ಪ್ರಮಾಣವನ್ನು ಕಡಿಮೆ ಮಾಡಲಿದೆ. ಒಂದು ದಶಕದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಶೇ 20ರಷ್ಟು ಇಳಿಕೆಯಾಗಿದೆ.*
############
*2005ರಿಂದ 2016ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 2.5 ಕೋಟಿ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಅದರಲ್ಲೂ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕೆ ಭಾರತೀಯರಲ್ಲಿ ಮೂಡಿರುವ ಜಾಗೃತಿಯೇ ಕಾರಣ ಎಂದು ಯನಿಸೆಫ್ನ ಪ್ರಕಟಣೆ ತಿಳಿಸಿದೆ.*
#########
*ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣದಲ್ಲಿ ಹೆಚ್ಚಳ, ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರಿ ಹೂಡಿಕೆ ಹೆಚ್ಚಿರುವುದು, ಬಾಲ್ಯ ವಿವಾಹದ ಅಪಾಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿರುವುದು ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಗುರುತಿಸಿದೆ.*
#############
*ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಿ ಹೆಣ್ಣುಮಕ್ಕಳಿಗೆ ಉತ್ತಮ ಜೀವನ ಸಿಗುವುದು ಒಳ್ಳೆಯ ಬೆಳವಣಿಗೆ. ಆದರೆ ನಾವು ಇನ್ನೂ ದೂರ ಸಾಗಬೇಕಿದೆ ಎಂದು ಯುನಿಸೆಫ್ನ ಸಲಹೆಗಾರ್ತಿ ಅಂಜು ಮಲ್ಹೋತ್ರಾ ಹೇಳಿದ್ದಾರೆ.*
#############
*2030ರ ವೇಳೆಗೆ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರತಿಜ್ಞೆ ಮಾಡಲಾಗಿದೆ. ಲಕ್ಷಾಂತರ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಿ, ಬಾಲ್ಯ ಅನುಭವಿ ಸುವಂತೆ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ.*
##############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ