*##ಮಾಹಿತಿ ವೇದಿಕೆ##*
*ಜಗತ್ತಿನ ಅತ್ಯುತ್ತಮ ದೇಶ ಯಾವುದು ಗೊತ್ತಾ..?*
==============
*ಜಗತ್ತಿನ ಅತ್ಯುತ್ತಮ ರಾಷ್ಟ್ರಗಳ ಹೊಸ ಪಟ್ಟಿ ಬಿಡುಗಡೆಯಾಗಿದೆ. ಇದು ಅಮೆರಿಕದ ಪಾಲಿಗೆ ನಿಜಕ್ಕೂ ನಿರಾಶಾದಾಯಕ. ಯಾಕಂದ್ರೆ ಅಗ್ರಸ್ಥಾನ ದೊಡ್ಡಣ್ಣನಿಗೆ ದಕ್ಕಿಲ್ಲ. ಪ್ರವಾಸಿಗರ ಸ್ವರ್ಗ ಸ್ವಿಡ್ಜರ್ಲೆಂಡ್ ವಿಶ್ವದ ಅತ್ಯುತ್ತಮ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.*
===========
*ಕೆನಡಾ ಎರಡನೇ ಸ್ಥಾನದಲ್ಲಿದ್ರೆ, ಬ್ರಿಟನ್ ಗೆ ಮೂರನೇ ಸ್ಥಾನ ಲಭಿಸಿದೆ. ಜರ್ಮನಿ, ಜಪಾನ್ ಮತ್ತು ಸ್ವೀಡನ್ ಗಿಂತಲೂ ಹಿಂದೆ ಬಿದ್ದಿರುವ ಅಮೆರಿಕ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.*
============
*2016ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಅಮೆರಿಕ ಈ ಬಾರಿ 7ನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ನಡೆಸಿದ ಸಮೀಕ್ಷೆ ಆಧರಿಸಿ ಅತ್ಯುತ್ತಮ ರಾಷ್ಟ್ರಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಸಮೀಕ್ಷೆಯಲ್ಲಿ ಬೇರೆ ಬೇರೆ ದೇಶದ 21,000 ಉದ್ಯಮಿಗಳು, ಗಣ್ಯರು ಮತ್ತು ಜನಸಾಮಾನ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ