ಶುಕ್ರವಾರ, ಮಾರ್ಚ್ 23, 2018

ನಿಮಗಿದು ಗೊತ್ತೆ

ಜಮೈಕಾದ ಪೋರ್ಟ್ ರಾಯಲ್ ನಗರ ಕೆಲ ನೂರು ವರ್ಷಗಳ ಹಿಂದೆ ಕೆಟ್ಟ ಕೆಲಸಗಳಿಂದಲೇ ವಿಶ್ವಾದ್ಯಂತ ಸುದ್ದಿಯಾದ ನಗರವಾಗಿತ್ತು. ಸಮುದ್ರ ದರೋಡೆ ಕೋರರ ಪ್ರಮುಖ ತಾಣವೆಂದೇ ಕರೆಸಿಕೊಳ್ಳುತ್ತಿತ್ತು. ಶರಾಬು ಮತ್ತು ವೇಶ್ಯಾವಾಟಿಕೆಗೆ ಜಗತ್ತಿನಲ್ಲಿ ಕುಖ್ಯಾತಿ ಪಡೆದಿತ್ತು. ಆದರೆ ಈ ನಗರ ದಿನ ಬೆಳಗಾಗುವುದರೊಳಗೆ ಸರ್ವನಾಶವಾಗಿ ಹೋಗಿತ್ತು. ಇದೀಗ ಈ ನಗರದ ಚಿತ್ರಗಳು ಹೊರಬಂದಿದ್ದು, ಆಗಿನ ಕಾಲದಲ್ಲಿ ಅಲ್ಲಿದ್ದ ವೈಭವಕ್ಕೆ ಇವುಗಳು ಸಾಕ್ಷಿಯಾಗಿವೆ.

1518ರಲ್ಲಿ ಸ್ಪೇನ್​ನ ಜನರಿಂದ ಈ ದ್ವೀಪವನ್ನು ಹುಡುಕಿದ್ದರು. ಆದರೆ ನಂತರದಲ್ಲಿ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು. ಬ್ರಿಟಿಷರು ಮತ್ತು ಸಮುದ್ರ ದರೋಡೆಕೋರರು ಇಲ್ಲಿ ಒಪ್ಪಂದ ಮಾಡಿಕೊಂಡು ದಂಧೆ ನಡೆಸುತ್ತಿದ್ದರು. ಮಾನವ ಒತ್ತೆಯಾಳು, ಶರಾಬು, ಚಿನ್ನ ಬೆಳ್ಳಿ ದರೋಡೆ ಮತ್ತು ವೇಶ್ಯಾವೃತ್ತಿ ಇಲ್ಲಿನ ಆದಾಯದ ಪ್ರಮುಖ ಮೂಲವಾಗಿತ್ತು. ಇಂತಹ ದಂಧೆಗಳ ಕಾರಣದಿಂದಲೇ ಇದಕ್ಕೆ ಸಿನ್ ಸಿಟಿ ಎಂದೂ ಕರೆಯಲಾಗುತ್ತಿತ್ತು. ಪಾಪಗಳ ನಗರ ಎನ್ನುವುದು ಇದರ ಅರ್ಥ.

ದರೋಡೆಕೋರನನ್ನೇ ಇಲ್ಲಿನ ಗವರ್ನರ್ ಆಗಿ ಬ್ರಿಟಿಷರು ನೇಮಕ ಮಾಡಿದ್ದರು. ಹೆನ್ರಿ ಮಾರ್ಗನ್ ಎಂಬ ಹೆಸರಿನ ಈತ 1675ರಲ್ಲಿ ಇಲ್ಲಿ ಅಧಿಕಾರ ಸ್ವೀಕರಿಸಿದ. ಆದರೆ 1692ರಲ್ಲಾದ ಭೂಕಂಪ ಇಡೀ ನಗರವನ್ನೇ ಆಪೋಷಣಗೈಯಿತು. ಇಲ್ಲಿದ್ದ ಲಕ್ಷಾಂತರ ಜನರು ಜಲಸಮಾಧಿಯಾದರು. ಇಂದಿಗೂ ಈ ನಗರದ ಹಲವು ಭಾಗಗಳು ಸಮುದ್ರದಾಳದಲ್ಲಿ ಸುರಕ್ಷಿತವಾಗಿದ್ದು, ವಿಜ್ಞಾನಿಗಳ ಅಂದಾಜಿನ ಪ್ರಕಾರ ಈ ನಗರ ಭೂಕಂಪದಿಂದ 40 ಅಡಿ ಆಳ ಸಮುದ್ರ ಸೇರಿದೆ. ಕೆಲ ಪ್ರವಾಸಿಗರ ಪ್ರಕಾರ 1990ರವರೆಗೂ ಈ ನಗರ ಸಮುದ್ರದ ಮೇಲ್ಭಾಗದಿಂದಲೇ ಕಾಣಿಸುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ