ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಹೊಂದಿರುವ ದುಬೈನ ಬುರ್ಜ್ ಖಲೀಫಾ ಇದೀಗ ಮತ್ತೊಂದು ದಾಖಲೆ ನಿರ್ವಿುಸಿದೆ. ದುಬೈನಲ್ಲಿ ಈ ತಿಂಗಳಪೂರ್ತಿ ನಡೆಯುವ ಲೇಸರ್ ಲೈಟ್ ಷೋ ‘ಲೈಟ್ ಅಪ್ 2018’ ಇದೀಗ ಗಿನ್ನೆಸ್ ವರ್ಲ್ಡ್
ರೆಕಾರ್ಡ್ ಪುಸ್ತಕ ಸೇರಿದೆ. ಕಳೆದ ಹೊಸ ವರ್ಷದ ದಿನ ಮಾಡಿದ ಲೇಸರ್ ಷೋ ಬಳಿಕ ಇಲ್ಲಿ ನಡೆದ ಮೊದಲ ಲೈಟ್ ಷೋ ಇದಾಗಿದೆ. ಬುರ್ಜ್ ಖಲೀಫಾದ ಪ್ರತಿಯೊಂದು ಕೋನಗಳಲ್ಲೂ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದು, ಇದನ್ನು ನೋಡಲು ನೂರಾರು ಜನರು ನೆರೆದಿದ್ದರು.
ಲೇಸರ್ ಷೋನಲ್ಲಿ ಗ್ರಾಫಿಕ್ಸ್ಗಳನ್ನೂ ಬಳಸಲಾಗಿತ್ತು. ಬುರ್ಜ್ ಖಲೀಫಾ ಮತ್ತು ಅಕ್ಕಪಕ್ಕದ ಕೆಲ ಕಟ್ಟಡಗಳು ಗ್ರಾಫಿಕ್ ಮತ್ತು ಲೇಸರ್ ಬೆಳಕಿಗೆ ಸಾಕ್ಷಿಯಾದವು. ಈ ಬಾರಿಯ ಷೋನ ಹೈಲೈಟ್ ಎಂದರೆ ಝಾಯೆದ್ 2018 ಎಂದು ಲೇಸರ್ ಬೆಳಕಿನಲ್ಲಿ ಬರೆದಿದ್ದು, ಮತ್ತು ಯುಎಇಯ ನಿರ್ವತೃ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಯಿಹಾನ್ರ
ಚಿತ್ರವನ್ನು ಬೆಳಕಿನಲ್ಲಿ ಬಿಡಿಸಿದ್ದು. ಈ ತಿಂಗಳ ಅಂತ್ಯದವರೆಗೂ ಇದನ್ನು ಕಣ್ತುಂಬಿಕೊಳ್ಳಲು ಅವಕಾಶವಿದ್ದು, ಮಂಗಳವಾರ, ಬುಧವಾರ ಮತ್ತು ಶನಿವಾರ ರಾತ್ರಿ 8ರಿಂದ ಷೋ ಆರಂಭವಾದರೆ, ಗುರುವಾರ ಮತ್ತು ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭವಾಗುತ್ತದೆ. ಭಾನುವಾರ ಲೇಸರ್ ಷೋ ಇರುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ