ಬುಧವಾರ, ಮಾರ್ಚ್ 28, 2018

ಭಾರತದಲ್ಲಿ ಘಜ್ನಿ ಮತ್ತು ಘೋರಿಯ ದಾಳಿಗಳು

===================
ಭಾರತಕ್ಕೆ ಮುಸಲ್ಮಾನರು
ಭಾರತ ಸಕಲ ಸಂಪತ್ತನ್ನು ಹೊಂದಿದ್ದ ರಾಷ್ಟ್ರವಾಗಿದ್ದರಿಂದ ಅರಬ್ಬರ ಕಣ್ಣು ಯಾವಾಗಲೂ ಭಾರತದ ಮೇಲೆ ಇರುತ್ತಿತ್ತು
ಸುಮಾರು - 7 ನೇ ಶತಮಾನದ ಹೊತ್ತಿಗೆ ಮಹಮ್ಮದ್ ಬಿನ್ ಕಾಸಿಂ ನ ನೇತೃತ್ವದಲ್ಲಿ ಕ್ರಿ.ಶ.712 ರಲ್ಲಿ ಧರ್ಮ ಪ್ರಚಾರದ ಹೆಸರಿನಲ್ಲಿ ದಂಡಯಾತ್ರೆಯನ್ನು ಕೈಗೊಂಡು ಬಲೂಚಿಸ್ಥಾನವನ್ನು ಗೆದ್ದು ಸಿಂಧ್ ಪ್ರಾಂತ್ಯದ ಮೇಲೆ ಧಾಳಿ ಮಾಡಿ ಜಯಗಳಿಸಿದನು ( 150 ವರ್ಷ ನೆಲೆನಿಂತರ
ಮಹಮ್ಮದ್ ಬಿನ್ ಖಾಸಿಂನು - ದಾಹಿರನನ್ನು ಗೆದ್ದು ಸೂರ್ಯದೇವಾಲಯವನ್ನು ನೆಲಸಮ ಮಾಡಿದ
ಪ್ರಾರಂಭದಲ್ಲಿ - ವ್ಯಾಪಾರ ಸಾಂಸ್ಕೃತಿಕ ಸಂಪರ್ಕ ಬೆಳೆಯಿತು
ಭಾರತದ ಜ್ಞಾನ ಭಂಡಾರವನ್ನು - ಯೂರೋಪಿಗೆ ಒಯ್ದರು
ವಿವಿಧ ಶಾಸ್ತ್ರಗಳ ಸಾಹಿತ್ಯ ಪುಸ್ತಕಗಳನ್ನು ತೆಗೆದುಕೊಂಡು ಹೋದರು
ಹಾಗೇಯೆ ಖಲೀಫ ಭಾರತದ ತಜ್ಞರನ್ನು ಆಮಂತ್ರಿಸಿ ಅವರಿಂದ ಸೇವೆಯನ್ನು ಮಾಡಿಸಿಕೊಂಡ
ಅರಬ್ಬರ ಭಾರತದ ರಕ್ತ ಸಂಬಂಧದಿಂದ ಬಾರತದಲ್ಲಿ ಮುಸ್ಲಿಮರು ಅಸ್ತಿತ್ವಕ್ಕೆ ಬಂದರು ಹಾಗೇಯೇ ಇಸ್ಲಾಂ ಧರ್ಮ ಪ್ರಚಾರದ ಪ್ರಾರಂಭವಾಯಿತು.
==========
ಟರ್ಕರು
ಅರಬ್ಬರಂತೆ ಕ್ರಿ.ಶ.10 ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಟರ್ಕರು ಕೂಡ ಭಾರತದ ಮೇಲೆ ಆಕ್ರಮಣವೆಸಗಿದರು ಎರಡು ಹಂತದಲ್ಲಿ ಭಾರತದ ಮೇಲೆ ಆಕ್ರಮಣ ಎಸಗುವರು ಅದರಲ್ಲಿ ಮೊದಲ ಹಂತದ ನೇತೃತ್ವವನ್ನು ಮಹಮ್ಮದ್ ಘಜ್ನಿ ಹೊಂದಿದ್ದರೆ ಎರಡನೇ ಹಂತದ ನೇತೃತ್ವವನ್ನು ಘೋರಿಮಹಮ್ಮದ್ ವಹಿಸಿದ್ದನು
ಇವರಿಬ್ಬರ ದಂಡಯಾತ್ರೆಗಳು ಭಾರತದಲ್ಲಿ ಮುಸ್ಲಿಂ ಅಧಿಪತ್ಯಕ್ಕೆ ತಳಹದಿಯನ್ನು ಹಾಕಿಕೊಟ್ಟತು.
=================
ಮಹಮ್ಮದ್ ಘಜ್ನಿ
ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು
ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ
ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು
ಇವನ ಸಂಬಂಧಿ - ಸಬಕ್ತಗೀನ್
ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ
ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ
ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು
ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030
ಈತನ ಜನನ - 971
ಈತನ ತಂದೆ - ಸಬಕ್ತಗೀನ್
ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ
ಶಿಕ್ಷಣ - ತಂದೆಯಿಂದ ಪಡೆದುಕೊಂಡ
ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997
ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ
ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ
ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ
ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ

ಕ್ರಿ.ಶ.1000 - ಖೈಬರ್
ಕ್ರಿ.ಶ. 1001 – 02 - ಜೈಪಾಲನ ವಿರುದ್ಧ
ಕ್ರಿ.ಶ. 1003 - ಭಾಟಿಯಾ ರಾಜ್ಯ
ಕ್ರಿ.ಶ. 1006 - ಮುಲ್ತಾನ
ಕ್ರಿ.ಶ. 1007 - ಸುಖ ಪಾಲನ ವಿರುದ್ಧ
ಕ್ರಿ.ಶ. 1008 - ಆನಂದ ಪಾಲನ ವಿರುದ್ಧ
ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )
ಕ್ರಿ.ಶ. 1010 - ಮುಲ್ತಾನ್
ಕ್ರಿ.ಶ. 1012 - ಕಾಶ್ಮೀರ
ಕ್ರಿ.ಶ.1014 - ಥಾಣೇಶ್ವರ
ಕ್ರಿ.ಶ. 1018 - ಕನೂಜ್
ಕ್ರಿ.ಶ. 1019 - ಕಲಿಂಜರ್
ಕ್ರಿ.ಶ. 1020 - ಕನೂಜ್
ಕ್ರಿ.ಶ. 1021 - ಗ್ವಾಲಿಯರ್
ಕ್ರಿ.ಶ. 1022 - ಕಲಿಂಜರ್
ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ
ಕ್ರಿ.ಶ. 1027 - ಗುಜರಾತಿನ ವಿರುದ್ಧ
ಕ್ರಿ.ಶ. 1000 - ಖೈಬರ್ :-
ಕ್ರಿ.ಶ. 1001 – 02 ಜಯಪಾಲನ ವಿರುದ್ಧ :- ಪೇಷಾವರದ ಮೇಲೆ ಧಾಳಿ ಮಾಡಿ ಅಲ್ಲಿನ ದೊರೆ ಜಯಪಾಲನನ್ನು ಸೋಲಿಸಿದನು . ಈ ಅವಮಾನವನ್ನು ತಾಳದೆ ಜಯಪಾಲನು ಆತ್ಮಹತ್ಯೆ ಮಾಡಿಕೊಂಡನು ( ಬೆಂಕಿಗೆ ಹಾರಿ ) ಈ ಯುದ್ಧದಲ್ಲಿ 250000 ದಿನಾರುಗಳನ್ನು ಹಾಗೂ 50 ಆನೆಗಳನ್ನು ಪಡೆದುಕೊಂಡನು .
ಕ್ರಿ.ಶ. 1003 ರ ಭಾಟಿಯಾ ರಾಜ್ಯದ ವಿರುದ್ಧ ದಂಡಯಾತ್ರೆ :- ಮುಲ್ತಾನ ನೈರುತ್ಯಕ್ಕಿದ್ದ ಈ ಸಾಮ್ರಾಜ್ಯಕ್ಕೆ ಧಾಳಿ ನೆಡಸಿದ ಅಲ್ಲಿನ ಬಿಜಾಯ್ ರಾಯ್ ನೊಂದಿಗೆ ಹೋರಾಡಿ ಆತನನ್ನು ಬಂಧಿಸಿದನು.ವಿಧಿಯಿಲ್ಲದೆ ಬಿಜಾಯ್ ರಾಯ್ ತನ್ನ ಚೂರಿಯಿಂದಲೇ ಇರಿದುಕೊಂಡು ಸಾವನ್ನಪ್ಪಿದ . ತದ ನಂತರ ಘಜ್ನಿ ಸಂಪತ್ತನ್ನು ಕೊಳ್ಳೆ ಹೊಡೆದದ್ದಲ್ಲದೇ ಹಲವು ಜನರನ್ನು ಕಗ್ಗೋಲೆ ಮಾಡಿ ಅಧಿಕ ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಬಲತ್ಕಾರ ಮಾಡಿದ
ಕ್ರಿ..ಶ. 1006 ರ ಮುಲ್ತಾನ್ ನ ದಂಡಯಾತ್ರೆ :- ಘಜ್ನಿಯ ಸೇನೆ ಮುಲ್ತಾನನ್ನು ಆಕ್ರಮಿಸಲು ಆನಂದ ಪಾಲನ ಪ್ರಭುತ್ವಕ್ಕೆ ಒಳಪಟ್ಟಿದ್ದ ಪ್ರದೇಶದ ಮೂಲಕ ಹೋಗಬೇಕಿತ್ತು ಿದಕ್ಕೆ ಆನಂದ ಪಾಲನು ಅವಕಾಶ ಮಾಡಿಕೊಡದಿದ್ದುದರಿಂದ ಟರ್ಕರ ಸೇನೆ ಆನಂದ ಪಾಲನ ವಿರುದ್ಧ ಆಕ್ರಮಣ ನಡೆಸಿ ಆತನನ್ನು ಸೋಲಿಸಿ ಜೈಪಾಲನ ಮೊಮ್ಮಗ ನವಾಜ್ ಷಾ ನನ್ನು ಇಸ್ಲಾಂ ಧರ್ಮಕ್ಕೆ ಸೇರಿಸಿ ಆತನ ಅಧೀನಕ್ಕೆ ಆ ಪ್ರದೇಶಗಳನ್ನು ಒಳಪಡಿಸಿ ಘಜ್ನಿಗೆ ಹಿಂತಿರುಗಿದನು . ಆ ಸುಸಂಧರ್ಭವನ್ನು ಬಳಸಿಕೊಂಡ ನವಾಜ್ ಷಾ ಇಸ್ಲಾಂ ಧರ್ಮವನ್ನು ತ್ಯಜಿಸಿ ಸ್ವತಂತ್ರ ಘೋಷಿಸಿಕೊಂಡನು . ಪರಿಣಾಮವಾಗಿ ಘಜ್ನಿ ಪುನಃ ಭಾರತಕ್ಕೆ ಧಾಳಿ ನಡೆಸಿದ
ಕ್ರಿ.ಶ. 1007 ನವಾಜ್ ಷಾ ( ಸುಖಪಾಲ )ನ ವಿರುದ್ಧ ದಂಡಯಾತ್ರೆ :- ಈ ದಂಡಯಾತ್ರೆಯಲ್ಲಿ ಸುಖಪಾಲನನ್ನು ಸೋಲಿಸಿ ಸಾಮ್ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡನು
ಕ್ರಿ.ಶ. 1008 ಆನಂದ ಪಾಲನ ವಿರುದ್ಧ ದಂಡಯಾತ್ರೆ :- ಆನಂದಪಾಲ ವಿಚಾರ ತಿಳಿದು ಉಜೈಯಿನಿ ಗ್ವಾಲಿಯರ್ ಕಲಿಂಜರ್ ಅಜ್ಮೀರ್ ಗಳ ಅರಸರ ಸಹಾಯ ಯಾಚಿಸಿ ಯುದ್ಧಕ್ಕೆ ಸನ್ನದ್ಧನಾದ , ಪ್ರತಿಯೊಬ್ಬ ಜನರೂ ಹೋರಾಟಕ್ಕೆ ಹಣ ನೀಡಿದರು , ಮಹಿಳೆಯೊಬ್ಬಳು ತನ್ನ ಆಭರಣ ಮಾರಿ ಹಣ ನೀಡಿದಳು , ಪಂಜಾಬಿನ ಬುಡಕಟ್ಟು ಜನಾಂಗ ಖೋಖರರು ಆನಂದ ಪಾಲನ ಪರ ಹೋರಾಟಕ್ಕೆ ಸಜ್ಜಾದರು , ವಾಹಿದ್ ಬಯಲು ಪ್ರದೇಶದಲ್ಲಿ 2 ನಡುವೆ ಭೀಕರ ಹೋರಾಟ ನಡೆಯಿತು , ಆನಂದ ಪಾಲ ಸೋಲನುಭವಿಸಿದ , 4000 ಸೇನಾನಿಗಳನ್ನು ಕಳೆದು ಕೊಂಡ , ಘಜ್ನಿಗೆ ಅಪಾರ ಸಂಪತ್ತು ಲಭ್ಯವಾಯಿತು , ಪಂಜಾಬ್ ಹಾಗೂ ವಾಯುವ್ಯ ಭಾರತದ ಪ್ರಭುತ್ವಕ್ಕಾಗಿ ಘಜ್ನಿ ಪರಿತಪಿತನಾದ
ಕಾಂಗ್ರಾ ಮುತ್ತಿಗೆ ಕ್ರಿ.ಶ.1009 :- ಲಾಹೋರಿನ ಬಳಿಯಿರುವ ಕಾಂಗ್ರಾಕ್ಕೆ ಮುತ್ತಿಗೆ ಹಾಕಿದ , ಕಾಂಗ್ರಾವನ್ನು ಹಿಂದೆ ನಗರ್ ಕೋಟ್ , ಭೀಮ್ ನಗರ್ ಎಂಬ ಹೆಹಸರಿನಿಂದ ಕರೆಯಲಾಗುತ್ತಿತ್ತು , ಸತತ ಮೂರು ದಿನ ಹೋರಾಡಿದ ನಂತರ ವಶಪಡಿಸಿಕೊಂಡ , ಎಷ್ಟು ಒಂಟೆಗಳು ಲಭ್ಯವಿದ್ದವೋ ಅಷ್ಟು ಒಂಟೆಗಳ ಮೇಲೆ ಹೇರುವಷ್ಟು ಸಂಪತ್ತು ಬೆಳ್ಳಿ , ಬಂಗಾರ ನಾಣ್ಯಗಳ ರೂಪದಲ್ಲಿ ಲಭ್ಯವಾಯಿತು
ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರ :- ಕ್ರಿ.ಶ. 1010 ರಿಂದ 1014 ರವರೆಗೆ ಭಾರತದ ಪ್ರಮುಖ ಪ್ರದೇಶಗಳಾದ ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರಗಳಿಗೆ ಮುತ್ತಿಗೆ ಹಾಕಿ ಅಪಾರ ಸಂಪತ್ತು ಲೂಟಿ ಮಾಡಿದ 1018 ರವರೆಗೆ ವಿವಿದೆಡೆ ಧ್ವಂಸ ಮಾಡಿದ
ಕನೂಜ್ ವಿರುದ್ಧ ದಡಯಾತ್ರೆ ಕ್ರಿ.ಶ. 1018 :- ಮಾರ್ಗ ಮಧ್ಯ ಮಹಮ್ಮದ್ ಬುಲಂದರ್ ಷಾಹಲ್ ನ ಹರದತ್ ನ್ನು ಸೋಲಿಸಿ 10000 ಜನರೊಡನೆ ಇಸ್ಲಾಂಗೆ ಸೇರಿಸಿದ ನಂತರ , ಮಥುರಾಕ್ಕೆ ಹೋಗಿ ಅಲ್ಲಿನ ದೇವಾಲಯ ನಾಶಗೊಳಿಸಿದ , ಅಂತಿಮವಾಗಿ ಕ್ರಿ.ಶ.1019 ರಲ್ಲಿ ಕನೂಜ್ ತಲುಪಿ ರಾಜ್ಯಾಪಾಲನನ್ನು ಸೋಲಿಸಿ ಅಲ್ಲಿನ ದೇವಾಲಯ ನಾಶಪಡಿಸಿದ
ಕಲಿಂಜರ್ ವಿರುದ್ಧ ದಂಡ ಯಾತ್ರೆ ಕ್ರಿ.ಶ.:- ಕಾರಣ ರಾಜ್ಯಪಾಲ ಘಜ್ನಿಗೆ ಶರಣಾಗಿದ್ದನ್ನು ಚಂದೇಲರು ಅರಸ ಗಂಡ ವಿರೋಧಿಸಿದ್ದ
ಸೋಮನಾಥ ದೇವಾಲಯಕ್ಕೆ ಮುತ್ತಿಗೆ ಕ್ರಿ.ಶ. 1024 :- ಈ ದೇವಾಲಯ ಹೊಂದಿದ್ದ ಅಪಾರ ಸಂಪತ್ತೆ ಈತನ ಧಾಳಿಗೆ ಕಾರಣ 80000 ಸೇನಾನಿಗಳೊಂದಿಗೆ ಆಕ್ರಮಣ ಕೈಗೊಂಡ ಈತನ ಧಾಳಿಯ ಮಹತ್ವ ತಳೆದಿದ್ದ ಸೋಲಂಕಿಅರಸ , ಇಮ್ಮಡಿ ಭೀಮದೇವ ಅಲ್ಲಿಂದ ಪಲಾಯನ ಮಾಡಿದ ,ಆದರೆ ್ಲ್ಲಿನ ಜನರು ಉಗ್ರವಾಗಿ ಪ್ರತಿಕ್ರಿಯಿಸಿದರು , ಈ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 50000 ಮೀರಿತ್ತು ಸೋಮನಾಥನ ಮೂರ್ತಿಯನ್ನು ಸ್ವತಃ ತಾನೇ ಭಗ್ನಗೋಳಿಸಿದ , ಇಲ್ಲಿ ಸಿಕ್ಕ ಮೌಲ್ಯ - 20000000 ದಿಮ್ರ್ ಹಾಮ್ಸ್ ಮೀರಿತ್ತು
ಗುಜರಾತಿನ ಮೇಲೆ ದಂಡಯಾತ್ರೆ ಕ್ರಿ.ಶ. 1027 :- ಇದು ಈತನ ಕೊನೆಯ ದಂಡಯಾತ್ರೆ
==================
ಸಂಘರ್ಷದ ಪರಿಣಾಮ
ಭಾರತದ ಆರ್ಥಿಕ ದಿವಾಳಿಯಾಯಿತು
ಅಪಾರ ಕಲಾ ಸಂಪತ್ತು ನಾಶವಾಯಿತು
ಮಹಮ್ಮದ್ ಘೋರಿಯ ಸುಲಭದ ಆಕ್ರಮಣಕ್ಕೆ ದಾರಿಯಾಯಿತು
ಇಸ್ಲಾಂ ಧರ್ಮ ಭಾರತಕ್ಕೆ ಬರಲು ಸಹಕಾರಿಯಾಯಿತು
ಘಜ್ನಿ ನಗರ ಆಧುನಿಕ ನಗರವಾಗಿ ಪರಿವರ್ತಿಸಲಾಯಿತು

ಸಾಮ್ರಾಜ್ಯ ವಿಸ್ತಾರ
ಪೂರ್ವ ಪಂಜಾಬಿನಿಂದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೆ ವ್ಯಾಪಿಸಿತ್ತು
ಗುಣಗಳು
ಭಾರತದಿಂದ ಒಯ್ದ ಸಂಪತ್ತನ್ನು ಮಸೀದಿ ಕಟ್ಟಲು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲು ಹಾಗೂ ಗ್ರಂಥಾಲಯದ ಉಪಯೋಗಕ್ಕೆ ಬಳಸಿದ
ಪರ್ಶಿಯಾದ ಹೋಮರ್ ಎಂದು ಪ್ರಸಿದ್ದಿಯಾದವನು - ಫಿರ್ ದೂಷಿ
============
ಈತನ ಆಸ್ಥಾನದಲ್ಲಿದ್ದವರು
ಫೀರ್ದೂಷಿ - ಆಸ್ಥಾನದ ಪಂಡಿತ
ಬೈಹರೆ , ಉಲ್ಪೆ - ಇತಿಹಾಸಕಾರರು
ಅಲ್ಬೆರೂನಿ - ಸಂಸ್ಕೃತ ವಿಧ್ವಾಂಸ ಹಾಗೂ ಗಣಿತಜ್ಞ
ಅನ್ಸಾರಿ - ಕವಿ
===========
Extra Tips
ಘಜ್ನಿಯು - ದೇವಾಲಯಗಳ ನಾಶ ವಿಗ್ರಹಗಳನ್ನು ಒಡೆಯುವುದೇ ಧರ್ಮವೆಂದು ತಿಳಿದಿದ್ದ
ರಜಪೂತರ ಅಂತಃ ಕಲಹದ ಲಾಭ ಪಡೆದು ದಾಳಿ ನಡೆಸಿದ
ಖೋಕರ್ - ಆನಂದ ಪಾಲನ ಪರವಾಗಿ ಘಜ್ನಿಯೊಂದಿಗೆ ಹೋರಾಡಿದ ಗಡ್ಡಗಾಡು ಜನಾಂಗ
ಈತ ತನ್ನ ಹೋರಾಟ - ಧರ್ಮಯುದ್ಧ ಎಂದು ತೋರಿಸಿಕೊಂಡಿದ್ದ
ಈತ ತನ್ನನ್ನು ತಾನು - ವಿಗ್ರಹ ಭಂಜಕ (ವಿನಾಶಕ ) ಎಂದು ಕರೆದುಕೊಂಡ
ಇವನ ಕಾಲದಲ್ಲಿ ಭಾರತಕ್ಕೆ ಬಂದ ಇತಿಹಾಸಕಾರ - ಅಲ್ಬೇರೂನಿ
ಅಲ್ಬೆರೂನಿಯ ಕೃತಿ - ತಾರೀಕ್ - ಉಲ್ - ಹಿಂದ್
ಸೋಮನಾಥ ದೇವಾಲಯ - ಕಾಥೇವಾಡ ದಕ್ಷಿಣದ ತುದಿಯಲ್ಲಿದೆ
ಈತ ನಡೆಸಿದ ಕೊನೆಯ ದಂಡಯಾತ್ರೆ - ಪಂಜಾಬಿನ ಜಾಟರ ಮೇಲೆ
ಕ್ರಿ.ಶ.1030 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ಘಜ್ನಿ ತೀರಿಕೊಂಡನು
==============
ಮಹಮ್ಮದ್ ಘೋರಿ
ಈತನ ಪೂರ್ಣ ಹೆಸರು - ಮುಜಾಹಿದ್ದೀನ್ ಮಹಮ್ಮದ್ ಬಿನ್ ಸಾಮ್
ಭಾರತದ ಮೇಲೆ ದಾಳಿಯ ಉದ್ದೇಶ - ಧರ್ಮಪ್ರಾಚಾರ ಹಾಗೂ ಸಾಮ್ರಾಜ್ಯದ ಸ್ಥಾಪನೆ
ಅಧಿಕಾರಾವಧಿ - 1175 ರಿಂದ 1206
ಘೋರಿ ವಂಶದ ಸ್ಥಾಪಕ - ಸೈಫುದ್ದೀನ್ ಘೋರ್
ಈ ವಂಶದ ಪ್ರಸಿದ್ದ ದೊರೆ - ಘೀಯಾಸುದ್ಧೀನ್ ಮಹಮ್ಮದ್
ಇವನ ತಮ್ಮನೆ - ಶಹಾಬುದ್ದೀನ್
ಈ ಸಹಾಬುದ್ದೀನ್ - ಮಹಮ್ಮದ್ ಘೋರಿಯಾಗಿ ಪ್ರಸಿದ್ದಿಯಾದ
ಪ್ರಾರಂಭದಲ್ಲಿ ಈತ - ಘಜ್ನಿಯ ಗವರ್ನರ್ ನಾಗಿದ್ದ
ಭಾರತದ ಮೇಲಿನ ದ್ವೀತಿಯ ಹಂತದ - ನಾಯಕತ್ವ ವಹಿಸಿಕೊಂಡಿದ್ದ
ಭಾರತದ ಮೇಲಿನ ಪ್ರಮುಖ ಧಾಳಿ
ಅನಿಲವಾಡದ ಯುದ್ಧ
ಕ್ರಿ.ಶ.1178 ರಲ್ಲಿ ಗುಜರಾತ್ ನ ಅನಿಲವಾಡ ಕ್ಕೆ ಮುತ್ತಿಗೆ ಹಾಕಿದ ಅರಸ ಇಮ್ಮಡಿ ಭೀಮದೇವನ ಈತನ ಮೇಲೆ ಧಾಳಿ ನಡೆಸಿದಾಗ ಆತನಿಂದ ಸೋಲನುಭವಿಸಿದ
ಮೊದಲ ತರೈನ್ ಕದನ ಕ್ರಿ.ಶ.1191 :- ಕ್ರಿ.ಶ.1191 ರಲ್ಲಿ ಪೃಥ್ವಿರಾಜನ ಭಟಿಂಡಾ ಎಂಬ ಪ್ರದೇಶವನ್ನು ಆಕ್ರಮಿಸಲು ಮುಂದಾದ ಗೋವಿಂದ ರಾಜ ಚಾಕುವಿನಿಂದ ಇರಿದ , ಎರಡೂ ಸೇನೆ ಥಾಣೇಶ್ವರದ ಮೇಲೆ ಇರುವ ತರೈನ್ ಎಂಬಲ್ಲಿ ಸಂಧಿಸಿತು , ಈ ಯುದ್ಧದಲ್ಲಿ ಘೋರಿ ಗಾಯಗೊಂಡು ಸೋತು ರಣರಂಗದಿಂದ ಪಲಾಯನ ಮಾಡಿದ , ಪೃಥ್ವಿರಾಜ ಘೋರಿಯ ಸೈನ್ಯವನ್ನು 40000 ಮೈಲು ಬೆನ್ನಟ್ಟಿದ
ದ್ವೀತಿಯ ತರೈನ್ ಕದನ ಕ್ರಿ.ಶ. 1192 :- ಈ ಯುದ್ಧಕ್ಕೆ ಘೋರಿ 1,20,000 ಸೇನೆಯೊಂದಿಗೆ ಧಾಳಿನಡೆಸಿದ , ವಿಷಯ ತಿಳಿದ ಚೌಹಾಮ್ ್ರಸ ರಡಪೂತರನ್ನು ಒಟ್ಟುಗೂಡಿಸಿದ , ಫಲಕಾರಿಯಾಗದೆ ಪೃಥ್ವಿರಾಜ ಸೋಲನುಭವಿಸಿದ ಹಾಗೂ ಯುದ್ಧರಂಗದಲ್ಲಿ ಮಡಿದ , ಘೋರಿ ಪಡೆದ ರಾಜ್ಯವನ್ನು ಕುತುಬ್ - ಉದ್ - ದೀನ್ ಐಬಕ್ ನ ಅಧೀನಕ್ಕೆ ಒಳಪಡಿಸಿ ಗಜ್ನಿಗೆ ಮರಳಿದ , ನಂತರ ಐಬಕ್ ದೆಹಲಿಯನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡ
ಜಯಚಂದ್ರನ ವಿರುದ್ಧ ಧಾಳಿ ಕ್ರಿ.ಶ.1194 :- ಕನೌಜ್ ಹಾಗೂ ಬನಾರಸನ ಅರಸ ಜಯಚಂದ್ರನಾಗಿದ್ದ , ಐಬಕ್ ನ ಸಹಾಯದೊಂದಿಗೆ ಚಾಂದ್ ವಾರ್ ಎಂಬಲ್ಲಿ ಹೋರಾಡಿದ ,ಜಯಚಂದ್ರ ಹೋರಾಟದಲ್ಲಿ ಮಡಿದ , ನಂತರ ಬನಾರಸನ್ನು ವಶವಡಿಸಿಕೊಂಡ ಅಾರ ದೇವಾಲಯ ನಾಶಪಡಿಸಿ ಸಂಪತ್ತನ್ನು ಕೊಳ್ಳೆ ಹೊಡೆದ ( 1400 ಒಂಟೆಗಳ ಮೇಲೆ ಸಾಗಿಸಿದ ) , ಆ ಪ್ರದೇಶ ಜಯಚಂದ್ರನ ವಂಶಜರಿಗೆ ಹಿಂದಿರುಗಿಸಿದ
ಅನಿಲ್ ವಾರಾ ಹಾಗೂ ಕಲಿಂಜರ್ ಆಕ್ರಮಣ ಕ್ರಿ.ಶ. 1196 -97 :- ಇಮ್ಮಡಿ ಭೀಮದೇವನ ಮೇಲೆ ಪುನಃ ಎರಗಿ ಸೋಲಿಸಿದ
ಪರಮಾರ ದೇವನ ರಾಜ್ಯಕ್ಕೆ ಆಕ್ರಮಣ :- ಕ್ರಿ.ಶ. 1202 ಕಲಿಂಜರ ಮೇಲೆ ಧಾಳಿ ನಡೆಸಿ ಚಂದೇಲ ಅರಸ ಪರಮಾರ ದೇವನನ್ನು ಸೋಲಿಸಿದ ಈ ಯುದ್ಧದಲ್ಲಿ ಘೋರಿಯ ಪರವಾಗಿ ಐಬಕ್ ಹೋರಾಡಿ ಕಲಿಂಜರ್ ಮಹೋಬ ಹಾಗೂ ಖಜುರಹೋಗಳನ್ನ ಪಡೆದ 1195 - ಬಯಾನಾ ಗ್ವಾಲಿಯರ್ ವಶ , 1196 ಹಾಗೂ 1197 - ಭೀಮದೇವನನ್ನು ಸೋಲಿಸಿದ , 1202 ಬುಂದೇಲ್ ಖಂಡ ವಶಪಡಿಸಿಕೊಂಡ , 1206 ರಲ್ಲಿ ಘೋರಿಯು ಹತ್ಯೆಯಾದ
ಟರ್ಕರ ಯಶಸ್ಸಿಗೆ ಕಾರಣಗಳು
ಭಾರತೀಯರಲ್ಲಿದ್ದ ರಾಜಕೀಯ ಏಕತೆಯ ಅಭಾವ
ಸಮರ್ಥ ಮುಖಂಡತ್ವದ ಕೊರತೆ
ಊಳಿಗ ಮಾನ್ಯ ವ್ಯವಸ್ಥೆ
ಸಾಮಾಜಿಕ ಕಂದಾಚಾರ
ಧಾರ್ಮಿಕ ಅಸಮಾನತೆ
ನೈತಿಕ ಹಾಗೂ ಸಾಂಸ್ಕೃತಿಕ ಅವನತಿ
ಅಸಮರ್ಥ ಮಿಲಿಟರಿ ವ್ಯವಸ್ಥೆ
================
Extra Tips
ಬಾರತದಲ್ಲಿ ಪ್ರಬಲ ಮುಸ್ಲಿಂ ಸಾಮ್ರಾಜ್ಯ ಕಟ್ಟಲು ಕಾರಣನಾದ ವ್ಯಕ್ತಿ - ಮಹಮ್ಮದ್ ಘೋರಿ
ಒಂದು ಸಾಮ್ರಾಜ್ಯದ ವ್ಯಕ್ತಿ ಎಂದು ಕರೆಸಿಕೊಂಡವರು - ಮಹಮ್ಮದ್ ಘೋರಿ
ಎರಡನೇ ತರೈನ್ ಯುದ್ಧದ ಸಂಧರ್ಭದಲ್ಲಿ - ಸುಮಾರು 150 ರಜಪೂತರ ಒಕ್ಕೂಟ ರಚನೆಯಾಯಿತು
ಮಹಮ್ಮದ್ ಘೋರಿಯ ನಿಷ್ಠಾವಂತ ಗುಲಾಮ - ಐಬಕ್
ಘೋರಿಯ ಇನ್ನೋಬ್ಬ ದಂಡನಾಯಕ - ಭಕ್ತಿಯಾರ್ ಖಿಲ್ಜಿ
ಈತನ ಮುಖಾಂತರ ಬಂಗಾಳ ಹಾಗೂ ಬಿಹಾರಗಳನ್ನು ಗೆದ್ದುಕೊಂಡನು
ಗಜ್ನಿಯ ಧಾಳಿಯ 150 ವರ್ಷದ ಬಳಿಕ ಘೋರಿ ಭಾರತಕ್ಕೆ ಧಾಳಿ ಮಾಡಿದ

ಘೋರಿ ಮಹಮ್ಮದ್ ನ ಭಾರತದ ಮೇಲಿನ ಧಾಳಿ
1173 ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ
1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ
1178- ಅನಿಲವಾಡದ ಭೀಮ ದೇವನಿಂದ ಸೋಲು
1181 ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ
1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ
1191 - ಮೊದಲ ತರೈನ್ ಯುದ್ಧದಲ್ಲಿ ಸೋಲು
1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು
1193 ದೆಹಲಿಯ ವಶ
1194 ಜಯಚಂದ್ರನ ವಿರುದ್ಧ ಗೆಲುವು
1202 ಬುಂದೇಲ್ ಖಂಡದ ವಶ
1206 - ಘೋರಿಯ ಹತ್ಯೆ
 =============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ