ಶುಕ್ರವಾರ, ಮಾರ್ಚ್ 2, 2018

ಆರೋಗ್ಯ ಕರ್ನಾಟಕ' ಯೋಜನೆಗೆ ಮೊಹಮ್ಮದ್ ಸಲಾಂ ರಚಿಸಿದ ಲಾಂಛನ ಆಯ್ಕೆ*

*##ಮಾಹಿತಿ ವೇದಿಕೆ##*

*ಆರೋಗ್ಯ ಕರ್ನಾಟಕ' ಯೋಜನೆಗೆ ಮೊಹಮ್ಮದ್ ಸಲಾಂ ರಚಿಸಿದ ಲಾಂಛನ ಆಯ್ಕೆ*
##############
*ಬೆಂಗಳೂರು, ಮಾ.2: ಎಲ್ಲರಿಗೂ ಅರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಜಾರಿಗೆ ತಂದಿರುವ ವಿನೂತನ ಯೋಜನೆ 'ಆರೋಗ್ಯ ಕರ್ನಾಟಕ'ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. ದೇಶದಲ್ಲೇ ಪ್ರಪ್ರಥಮ ಸಾರ್ವತ್ರಿಕ ಅರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಶೇಷ ಯೋಜನೆಗೆ ಲಾಂಛನವನ್ನು ರಚಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿಯ ಯುವ ಡಿಸೈನರ್ ಮೊಹಮ್ಮದ್ ಸಲಾಂ.*
##############
*ಯೋಜನೆಗೆ ಲಾಂಛನ ರಚಿಸಿ ಕೊಡುವಂತೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಹ್ವಾನ ನೀಡಿತ್ತು. ಇದನ್ನು ಗಮನಿಸಿದ ಸಲಾಂ ಲಾಂಛನ ರಚಿಸಿ ಕಳಿಸಿದ್ದರು. ಇದೀಗ ಸಲಾಂ ರಚಿಸಿದ ಲಾಂಛನವೇ ಆಯ್ಕೆಯಾಗಿ ಶುಕ್ರವಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅನಾವರಣಗೊಂಡಿದೆ.*
################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ