*##ಮಾಹಿತಿ ವೇದಿಕೆ##*
*ಧ್ರುವ ಸುಳಿ ಎಂದರೇನು?*
*ಭೂಮಿಯ ದಕ್ಷಿಣ ಮತ್ತು ಉತ್ತರ ಧ್ರುವಗಳ ಮೇಲಿರುವ ಅಗಾಧ ಪ್ರಮಾಣದ ತಂಪಾದ ಗಾಳಿಯನ್ನು ಧ್ರುವ ಸುಳಿ ಎಂದು ಕರೆಯಲಾಗುತ್ತದೆ. ಈ ದಟ್ಟವಾದ ಶೀತಯುಕ್ತ ಗಾಳಿ ಕಡಿಮೆ ಒತ್ತಡದಿಂದ ನಿಯಂತ್ರಿತವಾಗಿರುತ್ತದೆ. ಅದು ಉತ್ತರ ಧ್ರುವದಲ್ಲಿ ಬಲದಿಂದ ಎಡಕ್ಕೆ(ಅಪ್ರದಕ್ಷಿಣಾಕಾರವಾಗಿ) ಸುತ್ತುತ್ತಿರುತ್ತದೆ ಮತ್ತು ದಕ್ಷಿಣ ಧ್ರುವದಲ್ಲಿ ಎಡದಿಂದ ಬಲಕ್ಕೆ(ಪ್ರದಕ್ಷಿಣಾಕಾರವಾಗಿ) ಸುತ್ತುತ್ತಿರುತ್ತದೆ. ಈ ಧ್ರುವ ಸುಳಿಯ ಶಕ್ತಿ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತದೆ. ಅದು ಶಕ್ತಿಶಾಲಿಯಾಗಿದ್ದಾಗ, ಅದರ ಪ್ರಭಾವ ಆರ್ಕ್‌ಟಿಕ್ ಅಥವಾ ಅಂಟಾರ್ಕ್‌ಟಿಕ್‌ನಲ್ಲಿ ಹೆಚ್ಚಿರುತ್ತದೆ. ಆದರೆ, ಯಾವಾಗ ಅದು ದುರ್ಬಲಗೊಳ್ಳತ್ತದೆಯೋ ಆಗ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುಂಟರಗಾಳಿಯಾಗಿ ಮಾರ್ಪಡುತ್ತದೆ. ಈ ರೀತಿಯಾಗುವುದು ಸಾಮಾನ್ಯ. ಈ ರೀತಿಯ ವಿದ್ಯಮಾನವು ಸಾಮಾ ನ್ಯವಾಗಿ ಚಳಿಗಾಲದೊಂದಿಗೆ ಬೆಸೆದುಕೊಂಡಿರುತ್ತದೆ ಮತ್ತು ಇದನ್ನು ಸಡನ್ ಸ್ಟ್ರಾಟೊಸ್ಪೇರಿಕ್ ವಾರ್ಮಿಂಗ್ ಎಂದು ಕರೆಯಲಾಗುತ್ತದೆ. ಇದು ಬೃಹತ್ ಪ್ರದೇಶವನ್ನು ವ್ಯಾಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ದಕ್ಷಿಣದಿಂದ ಕೆನಡಾ, ಅಮೆರಿಕ ಮತ್ತು ಯುರೋಪ್‌ಗೆ ವಿಸ್ತರಿಸಬಹುದು. ಜತೆಗೆ, ತೀರಾ ಅಪಾಯಕಾರಿ ಮಟ್ಟ ಎನ್ನುವ ಸ್ಥಿತಿಯವರೆಗೂ ತಾಪಾಮಾನ ಕುಸಿದು ಬಿಡಬಹುದು.*
###############
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ