================
ಮೊದಲ ದೇಶೀಯ ನಿರ್ಮಿತ ಜಲಾಂತರ್ಗಾಮಿ (ಸಬ್ ಮೆರಿನ್) ಸ್ಕಾರ್ಪಿಯನ್ ವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ಸೋಮವಾರ ಮಜಗಾಂವ ಹಡಗುಕಟ್ಟೆಯಲ್ಲಿ ನೌಕಾಪಡೆಗೆ ಹಸ್ತಾಂತರಿಸಿದರು.
ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ 'ಜಲಾಂತರ್ಗಾಮಿ 75 ಯೋಜನೆಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ 23,000 ಕೋಟಿ ರೂ ವೆಚ್ಚದಲ್ಲಿ ಒಟ್ಟು ಆರು ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.
ಡೀಸೆಲ್-ವಿದ್ಯುತ್ ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳಲ್ಲಿ ಮೊದಲನೆಯದಾಗಿದ್ದು 2018 ರ ವೇಳೆಗೆ ಇನ್ನೂ ಐದು ಸ್ಲಾರ್ಪಿಯನ್ ಜಲಾಂತರ್ಗಾಮಿಗಳು ಸೇರ್ಪಡೆಯಾಗಲಿವೆ.
ಫ್ರಾನ್ಸಿನ ಡಿಸಿಎನ್ ಎಸ್ ಕಂಪನಿಯು ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ.
ಮಜಗಾಂವ್ ಹಡಗುಕಟ್ಟಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಕೆ ದೊವನ, ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಪಡ್ನವಿಸ್ ಪಾಲ್ಗೊಂಡಿದ್ದರು.
==============
ಜಲಾಂತರ್ಗಾಮಿಯ ವೈಶಿಷ್ಟ್ಯಗಳು
============
✔ ಪ್ರಾಯೋಗಿಕವಾಗಿ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್ ಸೆಪ್ಟೆಂಬರ್ 2016 ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
✔ 5 ಸಾವಿರ ಕೋಟಿ ಬಜೆಟ್ಟಿನ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ
✔ ಸ್ಕಾರ್ಪಿಯನ್ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಟೆಂಡರು ಕರೆದಿದೆ.
✔ ಸಾಗರದಲ್ಲಿ ಪರೀಕ್ಷೆ ನಡೆಸುತ್ತಿರುವ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಜ್ಜಿತ ಐಎನ್ ಎಸ್ ಅರಿಹಂತ ಅಧಿಕೃತವಾಗಿ 2016 ಕ್ಕೆ ಸೇರ್ಪಡೆ.
✔ ಲಾರ್ಸೆನ್ ಹಾಗೂ ಟರ್ಬೋ ಕಂಪನಿಗಳಿಗೆ ಇನ್ನೆರಡು ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಿಸುವ ಗುತ್ತಿಗೆ ನೀಡಲಾಗಿದೆ.
✔ ನೌಕಾದಾಳದಲ್ಲಿ ಸದ್ಯ 30 ವರ್ಷದಷ್ಟು ಹಳೆಯ ರಷ್ಯಾ ನಿರ್ಮಿತ 10 ಮತ್ತು ಜರ್ಮನ್ ನಿರ್ಮಿತ 4 ಸಾಂಪ್ರದಾಯಿಕ ಡೀಸೆಲ್ ವಿದ್ಯುತ್ ಚಾಲಿತ ಜಲಾಂತರ್ಗಾಮಿಳಿದ್ದು ಅವುಗಳ ಪೈಕಿ ಅರ್ಧದಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ.
✔ ಪ್ರತಿ ತಿಂಗಳಿಗೆ ಒಂದರಂತೆ ಒಟ್ಟು ಇನ್ನೂ ಐದು ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳು ಸೇರ್ಪಡೆಯಾಗಲಿವೆ
===============
ಸೋಮವಾರ, ಮಾರ್ಚ್ 26, 2018
ಸ್ಕಾರ್ಪಿಯನ್ ಜಲಾಂತರ್ಗಾಮಿ ಸ್ಕಾರ್ಪಿಯನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ