ಸೋಮವಾರ, ಮಾರ್ಚ್ 26, 2018

ನೈಸರ್ಗಿಕ ಸಂಪನ್ಮೂಲಗಳು

=================
ನೈಸಗರ್ಿಕ ಸಂಪನ್ಮೂಲಗಳು
1  ಪ್ರಕೃತಿಯಲ್ಲಿ ದೊರಕುವ ನಮಗೆ ಉಪಯುಕ್ತವಾಗುವ ವಸ್ತುಗಳನ್ನು 'ನೈಸಗರ್ಿಕ ಸಂಪನ್ಮೂಲಗಳು' ಎನ್ನುವರು.
2  ಬಹುತೇಕ ನೈಸಗರ್ಿಕ ಸಂಪನ್ಮೂಲಗಳು ಜೀವಿಗಳು ಇಲ್ಲವೇ ಜೈವಿಕ ಉತ್ಪನ್ನಗಳಾಗಿವೆ.
3  ಅರಣ್ಯ ಹಾಗೂ ಜೀವಿಗಳು ಜೀವಂತ ನೈಸಗರ್ಿಕ ಸಂಪನ್ಮೂಲಗಳಿಗೆ ಉದಾಹಣೆ.
4 ನೆಲ, ನೀರು, ಗಾಳಿ ಮತ್ತು ಖನಿಜಗಳು, ಅಧಿರುಗಳು ನಿಜರ್ಿವ ಸಂಪನ್ಮೂಲಗಳಿಗೆ ಉದಾಹರಣೆ.
5  ಸೌರಶಕ್ತಿ, ಗಾಳಿ, ನೀರು, ವನ್ಯಜೀವಿಗಳು, ಅರಣ್ಯಗಳು ಹಾಗೂ ಕೃಷಿ ಬೆಳೆಗಳು ನವೀಕರಣಗೊಳ್ಳುವ ನೈಸಗರ್ಿಕ ಸಂಪನ್ಮೂಲಗಳು. 
6  ಸೌರಶಕ್ತಿ ಹಾಗೂ ಗಾಳಿ ಬರಿದಾಗದ ಸಂಪನ್ಮೂಲಗಳು.
7  ಅರಣ್ಯಗಳು ಮತ್ತು ವನ್ಯಜೀವಿಗಳಂತಹ ಸಂಪನ್ಮೂಲಗಳು ನಿರಂತರ ಬಳಕೆಯಿಂದಾಗಿ ಅಥವಾ ಮಾನವನ ಹಸ್ತಕ್ಷೇಪದಿಂದಾಗಿ ಕ್ಷೀಣಿಸಬಹುದು, ಆದರೆ ಇವುಗಳನ್ನು ಪುನರುತ್ಪತ್ತಿ ಮಾಡಬಹುದು. (ಇವುಗಳನ್ನು ಬರಿದಾಗುವ ಸಂಪನ್ಮೂಲಗಳು ಎನ್ನುವರು.)
8  ಒಮ್ಮೇ ಕ್ಷೀಣಿಸಿ ಪುನಃಭತರ್ಿ ಮಾಡಲಾಗದ ಸಂಪನ್ಮೂಲಗಳನ್ನು ನವೀಕರಣಗೊಳ್ಳದ ಸಂಪನ್ಮೂಲಗಳು ಎನ್ನುವರು. 
9  ನೀರು ಜೀವಿಗಳ ಉಳುವಿಗೆ ಅಗತ್ಯವಾದ ಒಂದು ಅನನ್ಯ ಹಾಗೂ ಅಪೂರ್ವ ನೈಸಗರ್ಿಕ ಸಂಪನ್ಮೂಲವಾಗಿದೆ.
10  ಭೂಮಿಯ ಮೇಲಿರುವ ನೀರಿನ ಒಟ್ಟು ಪ್ರಮಾಣದ ಶೇ 97 ರಷ್ಟು ಸಾಗರ ಸಮುದ್ರ ಹಾಗೂ ಇತರ ಬೃಹತ ನೀರಿನ ಸಂಗ್ರಹಗಳಲ್ಲಿ ಹಂಚಿ ಹೋಗಿದೆ. 
11  ವಾತಾವರಣದಲ್ಲಿ ನೀರಾವಿಯ ರೂಪದಲ್ಲಿ ಶೇ 0.001 ರಷ್ಟು ನೀರಿದೆ. 
12  ಶೇ 2.4 ರಷ್ಟು ನೀರು ಹಿಮಾವೃತ ಹಾಗೂ ದೃವ ಪ್ರದೇಶದ ಮಂಜುಗಡ್ಡೆಗಳಲ್ಲಿ ಸೇರಿದೆ.
13  ಉಳಿದ ನೀರಿನ ಪ್ರಮಾಣ ನದಿಗಳು ಸರೋವರಗಳು ಕೊಳಗಳು ಮುಂತಾದ ಜಲ ಸಂಗ್ರಹಗಳಲ್ಲಿದೆ. 
14  ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವುದು, ಕೃಷಿ ರಂಗದಲ್ಲಿ.
15 ನಮ್ಮ ದೇಶದ ವಾಷರ್ಿಕ ಮಳೆಯ ಪ್ರಮಾಣ ಸುಮಾರು 400 ಮಿಲಿಯನ್ ಹೆಕ್ಟರ್ ಮೀಟರಗಳು. ಸುಮಾರು 20 ಮಿಲಿಯನ್ ಹೆಕ್ಟೆರ್ ಮೀಟರಗಳಷ್ಟು ನೀರು ಭೂಮಿಯ ಮೈಲ್ಮೈಲ್ಲಿ ಹರಿಯುತ್ತದೆ. 
16 ಪ್ರತಿ ವರ್ಷ ಮಾರ್ಚ 22 ರಂದು ವಿಶ್ವದಾದ್ಯಂತ ವಿಶ್ವ ಜಲ ದಿನ ಎಂದು ಆಚರಿಸಲಾಗುತ್ತಿದೆ. 
17 ಮಣ್ಣು ಎಲ್ಲಾ ನೆಲ ಸಸ್ಯಗಳಿಗೆ ನೀರು ಮತ್ತು ಖನಿಜಾಂಶಗಳನ್ನು ಒದಗಿಸುವ ನೈಸಗರ್ಿಕ ಸಂಪನ್ಮೂಲ. ನೀರು ಮಣ್ಣಿನಲ್ಲಿ ಜಿನುಗುತ್ತಿದ್ದಂತೆ ಶುದ್ದವಾಗುತ್ತದೆ. 
18 ಮಣ್ಣಿನಲ್ಲಿರುವ ನೀರಿನ ಬಳಕೆಯ ಪ್ರಮಾಣಕ್ಕಿಂತ ಅಧಿಕ ನೀರನ್ನು ಸೇರಿಸಿದರೆ ನೀರಿನ ಮಟ್ಟ ಮೇಲೆರುವುದರಿ ಲವಣಿಕರಣವಾಗಿ ಮಣ್ಣು ಹಾಳಾಗುವುದನ್ನು ಜೌಗುವಿಕೆ ಎನ್ನುವರು.
19 ಜೌಗುವಿಕೆ ಮತ್ತು ಲವಣಿಕರಗಳು ಒಮ್ಮೆ ಫಲವಾತ್ತಾಗಿದ್ದ ಭೂಮಿಯನ್ನು ಬರಡಾಗಿ ನಿಷ್ಪ್ರಯೋಜಕವಾಗುವಂತೆ ಮಾಡುವುದನ್ನು ಮರೂಭೂಮೀಕರಣ ಎನ್ನುವರು.
20 ಅರಣ್ಯನಾಶ ಹಾಗೂ ಮಿತಿಮೀರಿದ ಮೆಯುವಿಕೆಯಿಂದ ಮಣ್ಣಿನ ಸವಕಳಿಯಾಗುತ್ತದೆ.
21 ನೈಸಗರ್ಿಕ ಕ್ರಿಯೆಯಾದ ಬಂಡೆಗಳ ಶಿಥಿಲೀಕರಣವೆಂಬ ಪ್ರಕ್ರಿಯೆಯಿಂದ ಮಣ್ಣು ರೂಪಗೊಳ್ಳುತ್ತದೆ. 
22 ಅರಣ್ಯಗಳು ನವೀಕರಿಸಬಹುದಾದ ಸಂಪನ್ಮೂಲಗಳಾಗಿದ್ದು ಚಲಚಕ್ರವನ್ನು ಉಳಿಸುತ್ತವೆ. ಇವುಗಳು ದೇಶದ ನೈಸಗರ್ಿಕ ಶ್ರೀಮಂತಿಕೆಯ ಸೂಚಕಗಳಾಗಿವೆ
23 ಪ್ರತಿ ವರ್ಷ ಮಾರ್ಚ 21 ರಂದು ವಿಶ್ವದಾದ್ಯಂತ ವಿಶ್ವ ಅರಣ್ಯದಿನ ಆಚರಿಸಲಾಗುತ್ತದೆ.
24 ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ನೈಸಗರ್ಿಕ ಅನಿಲಗಳನ್ನು ಪಳೆಯುಳಿಕೆ ಇಂಧನಗಳು ಎನ್ನುವರು. ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಹಸಿರು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯ ಪಲವೇ ಈ ಇಂಧನಗಳು.
25 ಕಲ್ಲಿದ್ದಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ ಇರುವ ನೈಸಗರ್ಿಕ ಸಂಪನ್ಮೂಲ. 
26 ಕಲ್ಲಿದ್ದಲಿನಲ್ಲಿ 3 ಪ್ರಕಾರಗಳು 1] ಅಂಥ್ರಸೈಟ ಸುಮಾರು 80% ಕಾರ್ಬನ್ 2] ಲಿಗ್ನೈಟ 50 ರಿಂದ 60% ಕಾರ್ಬನ್ 3] ಬಿಟುಮಿನಸ್ 40% ಗಿಂತ ಕಡಿಮೆ ಕಾರ್ಬನ ಹೊಂದಿದೆ. 
27 ಪ್ರೆಟ್ರೋಲ್,ಡಿಸೇಲ್, ಸೀಮೆಎಣ್ಣೆ, ಕೀಲೆಣ್ಣೆ, ನಾಪ್ತಾ ಇವು ಪೆಟ್ರೋಲಿಯಂ ಉತ್ಪನ್ನಗಳು. ಇವು ಇಂದನದ ಶೇ 40 ರಷ್ಟನ್ನು ಪ್ರತಿನಿಧಿಸುತ್ತವೆ.
28 ಭೂಮಿಯ ಹೊರಪದರದಲ್ಲಿ ಸ್ವಾಭಾವಿಕವಾಗಿ ದೊರಕುವ, ಜೀವರಾಶಿಯಿಂದ ಉತ್ಪತ್ತಿ ಆಗದ ಅಜೈವಿಕ ಮೂಲದ ವಸ್ತುವನ್ನು ಖನಿಜ ಎನ್ನುತ್ತೇವೆ. 
29 ಖಜಿಗಳನ್ನು ಹೊರತೆಗೆದು ಸಂಸ್ಕರಿಸುವ ಕ್ರಿಯೆಗೆ ಗಣಿಗಾರಿಕೆ ಎನ್ನುವರು. 
30 ಪ್ರಪಂಚದಲ್ಲಿರುವ ಅರಣ್ಯದ ಪ್ರಮಾಣ ಶೇ 20 ರಷ್ಟು ಮಾತ್ರ ಇದೆ.
========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ