ಬಹುತೇಕ ಯುವಜನರಿಗೆ ಗ್ರಾಮೀಣ ಪ್ರದೇಶ ಎಂದರೆ ಅಸಡ್ಡೆ. ಉನ್ನತ ವಿದ್ಯಾಭ್ಯಾಸ ಮಾಡಿದವರು ಹಳ್ಳಿಯತ್ತ ಮುಖ ಮಾಡುವುದು ಕಡಿಮೆಯೇ. ಆದರೆ ಇದಕ್ಕೆ ಅಪವಾದಗಳೂ ಇವೆ. ರಾಜಸ್ಥಾನದ ಭರತ್ಪುರದ ಗರ್ಹಾಝುನ್ ಗ್ರಾಮದ ಸರಪಂಚ್ ಆಗಿ 24 ವರ್ಷದ ಶಹನಾಝå್ ಖಾನ್ ಆಯ್ಕೆಯಾಗಿದ್ದಾರೆ. ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ಇವರು ಉತ್ತರ ಪ್ರದೇಶದ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ. ಆ ಗ್ರಾಮದ ಇತಿಹಾಸದಲ್ಲೇ ಇವರು ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದವರು ಮತ್ತು ಅತ್ಯಂತ ಕಿರಿಯ ಸರ್ಪಂಚ್ ಕೂಡ. ಹೆಣ್ಣುಮಕ್ಕಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಎಚ್ಚರ ಮೂಡಿಸುವುದು ಇವರ ಗುರಿಯಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ