*##ಮಾಹಿತಿ ವೇದಿಕೆ##*
*ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..*
÷÷÷÷÷÷÷÷÷÷÷÷÷÷÷÷
*ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಳೆದ 5 ವರ್ಷಗಳಿಂದ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪರಿಣಾಮ ರೈಲುಗಳ ವೇಗ, ಪ್ರಯಾಣಿಕರ ಸೌಲಭ್ಯಗಳಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದು ಹೋಗಿರುವ ರೈಲ್ವೆ ಇಲಾಖೆಯು ಹೈ ಪವರ್ ಲೋಕೋಮೋಟಿವ್ ಎಂಜಿನ್ ಪರಿಚಯಿಸುತ್ತಿದೆ.*
=================
*ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗಕ್ಕೆ 12,000 ಹೆಚ್‌ಪಿ ಸಾಮರ್ಥ್ಯದ ಹೈ ಪವರ್ ಲೋಕೋಮೋಟಿವ್ ಪರಿಚಯಿಸಿರುವ ಇಲಾಖೆಯು, ಎಂಜಿನ್ ಕಾರ್ಯಕ್ಷಮತೆ ಕುರಿತು ಪ್ರಾತಿಕ್ಷಿತೆ ನಡೆಸುತ್ತಿದೆ. ಹೀಗಾಗಿ ಹೊಸ ಮಾದರಿಯ ಎಂಜಿನ್ ಇದೀಗ ರೈಲ್ವೆ ವಿಭಾಗದಲ್ಲೇ ಹೊಸ ಸಂಚಲನ ಮೂಡಿಸಿದೆ.*
=============
*ಸದ್ಯ ರೈಲ್ವೆ ಇಲಾಖೆ 10,000 ಹೆಚ್‌ಪಿ ಸಾಮರ್ಥ್ಯದ ಲೋಕೋಮೋಟಿವ್ ಎಂಜಿನ್‌ಗಳೇ ಹೆಚ್ಚಿನ ಮಟ್ಟದ ಎಂಜಿನ್ ಮಾದರಿಗಳಾಗಿದ್ದು, ಇದೀಗ 12,000 ಸಾಮರ್ಥ್ಯದ ಲೋಕೋಮೋಟಿವ್ ಪರಿಚಯಿಸಲು ಸಿದ್ದತೆ ನಡೆಸಲಾಗುತ್ತಿದೆ.*
=============
*ಸುಧಾರಿತ ಮಾದರಿಯ ವಾಗಾ 9 ಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿರುವ ಈ ಹೊಸ ಲೋಕೋಮೋಟಿವ್, ಗಂಟೆಗೆ 100ರಿಂದ 120 ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.*
===============
*ಭಾರತೀಯ ರೈಲ್ವೆ ಇಲಾಖೆ ಮತ್ತು ಫ್ರಾನ್ಸ್ ಮೂಲದ ಬಹುರಾಷ್ಟ್ರೀಯ ಕಂಪನಿ ಆಲ್‌ಸ್ಟಾಮ್ ಜಂಟಿ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಮೊದಲ ಸುಧಾರಿತ ವಿದ್ಯುತ್ ಲೋಕೋಮೋಟಿವ್ ಇದಾಗಿದೆ ಎನ್ನಲಾಗಿದೆ.*
=====≠=======
*ಇನ್ನು ಭಾರತೀಯ ರೈಲ್ವೆ ಇಲಾಖೆಯು ಲೋಕೋಮೋಟಿವ್ ರೈಲ್ವೆ ಎಂಜಿನ್‌ಗಳನ್ನು ಉನ್ನತಿಕರಿಸುವ ಉದ್ದೇಶದಿಂದ ಆಲ್‌ಸ್ಟಾಮ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 3.3 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಈ ಯೋಜನೆಗಾಗಿ ವೆಚ್ಚ ಮಾಡಲಾಗುತ್ತಿದೆ.*
==============
*ಹೀಗಾಗಿ ಮುಂಬರುವ ದಿನಗಳಲ್ಲಿ ಆಲ್‌ಸ್ಟಾಮ್ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆ 800 ಸುಧಾರಿತ ಮಾದರಿಯ ಲೋಕೋಮೋಟಿವ್ ಎಂಜಿನ್‌ಗಳನ್ನು ತಯಾರಿಸಿಕೊಡಲಿದ್ದು, ಈ ಮೂಲಕ ಲೋಕೋಮೋಟಿವ್ ಪ್ರಯಾಣವನ್ನು ಮತ್ತಷ್ಟು ತ್ವರಿತಗೊಳಿಸಲಿವೆ.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ