*##ಮಾಹಿತಿ ವೇದಿಕೆ##*
*ವಿಶ್ವ ವನ್ಯಜೀವಿ ದಿನ*
*WORLD WILDLIFE DAY*
===============
*ಸಾಕುಪ್ರಾಣಿಗಳೆಂದರೆ ಎಲ್ಲರಿಗೂ ಪ್ರೀತಿಯೇ. ಅದರಲ್ಲೂ ಬೆಕ್ಕೆಂದರೆ ಹೆಚ್ಚು ಮುದ್ದು. ಬೆಕ್ಕಿನ ಜಾತಿಗೇ ಸೇರಿದ, ಬಿಗ್ ಕ್ಯಾಟ್ಗಳೆಂದು ಕರೆಸಿಕೊಳ್ಳುವ ಹುಲಿ, ಚಿರತೆಗಳೆಂದರೆ?! ಕೈಕಾಲುಗಳು ನಡುಗುತ್ತವೆ. ಆದರೆ, ಮಾನವನ ಸ್ವಾರ್ಥ, ದುರಾಸೆ, ಕ್ರೌರ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ ಮನುಷ್ಯನನ್ನು ನೋಡಿ ಈ ಕ್ರೂರ ಪ್ರಾಣಿಗಳೇ ಹೆದರಬೇಕು! ಸಾಕಿದ ಬೆಕ್ಕು ಕೊಂಚ ಮಂಕಾದರೂ ನಾವು ಆರೈಕೆ ಮಾಡುತ್ತೇವೆ. ಆದರೆ, ಕಾಡಿನಲ್ಲಿ ಸಾವು-ಬದುಕಿನ ನಡುವೆ ನಲುಗುತ್ತಿರುವ ವನ್ಯಮೃಗಗಳ ರಕ್ಷಣೆಗೆ ಯಾರಿದ್ದಾರೆ?*
#################
*ವಿಶ್ವಾದ್ಯಂತ ವನ್ಯಜೀವಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಮಾರ್ಚ್ 3ನ್ನು ವಿಶ್ವ ವನ್ಯಜೀವಿ ದಿನ ಎಂದು ಘೋಷಿಸಿದೆ. ಈ ಬಾರಿ ವಿನಾಶದಂಚಿನಲ್ಲಿರುವ ಹುಲಿ, ಸಿಂಹ, ಚಿರತೆ ಸೇರಿದಂತೆ ಬೆಕ್ಕಿನ ಜಾತಿಗೆ ಸೇರಿದ ಎಂಟು ಜಾತಿಯ ವನ್ಯಮೃಗಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುತ್ತಿದೆ. ಅಪಾಯದಂಚಿನಲ್ಲಿ ಬಿಗ್ ಕ್ಯಾಟ್ಸ್ ಎಂಬುದು ಈ ವರ್ಷದ ಥೀಮ್*
=============
*ಮೂಲ ವಾಸಸ್ಥಳದ ನಾಶ, ಮಾನವನೊಂದಿಗೆ ಸಂಘರ್ಷ ಮೊದಲಾದ ಕಾರಣಗಳಿಂದ ಇವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ 100 ವರ್ಷಗಳಲ್ಲಿ ಜಗತ್ತಿನಾದ್ಯಂತ ಹುಲಿಗಳ ಸಂಖ್ಯೆ ಶೇ.95ರಷ್ಟು ಇಳಿಕೆಯಾಗಿದೆ. ಆಫ್ರಿಕಾ ಸಿಂಹಗಳ ಸಂಖ್ಯೆ 20 ವರ್ಷಗಳಲ್ಲಿ ಶೇ.40ರಷ್ಟು ಇಳಿದಿದೆ. ಇದು ಹೀಗೆಯೇ ಮುಂದುವರಿದರೆ, ಗರ್ಜನೆ, ಗಾಂಭೀರ್ಯ, ವೇಗಕ್ಕೆ ಹೆಸರಾಗಿರುವ ಸಿಂಹ, ಹುಲಿ ಚಿರತೆಗಳ ವಂಶವೇ ಪೂರ್ಣ ನಾಶವಾಗಬಹುದು. ಹೀಗಾಗಬಾರದೆಂದೇ ಈ ಬಾರಿಯ ವನ್ಯಜೀವಿ ದಿನದಂದು ವಿಶೇಷವಾಗಿ ಈ ಎಂಟು ವನ್ಯಜೀವಿಗಳ ಸಂರಕ್ಷಣೆಗೆ ಜಾಗೃತಿ ಮೂಡಿಸಲಾಗುತ್ತಿದೆ.*
================
*ಪರಿಸರ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುವಲ್ಲಿ ಬಿಗ್ ಕ್ಯಾಟ್ ಜಾತಿಗೆ ಸೇರಿದ ನೀರ್ಗಲ್ಲು ಚಿರತೆ, ಜಾಗ್ವಾರ್, ಚೀತಾ, ಲೀಪರ್ಡ್, ಸಿಂಹ, ಹಿಮಚಿರತೆ, ಹುಲಿ ಮತ್ತು ಪೂಮಾ ಸೇರಿ ಒಟ್ಟು 8 ಬಗೆಯ ಪ್ರಾಣಿಗಳು ಮುಖ್ಯ ಪಾತ್ರ ವಹಿಸುತ್ತವೆ. ಈ ಪೈಕಿ ಹುಲಿ, ಸಿಂಹ ಹೊರತುಪಡಿಸಿ ಉಳಿದೆಲ್ಲವೂ ಮೇಲ್ನೋಟಕ್ಕೆ ಚಿರತೆಯಂತೆಯೇ ಕಾಣುತ್ತವೆ. ಆದರೆ ಸ್ವಲ್ಪ ಭಿನ್ನತೆ ಹೊಂದಿವೆ.*
===≠==========
*ವನ್ಯಜೀವಿ ದಿನವನ್ನೇಕೆ ಆಚರಿಸುತ್ತಾರೆ?:*
===============
*ವನ್ಯಜೀವಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ಉಗುರು, ಕೊಂಬು, ದಂತಗಳನ್ನು ಮಾರುವ ದಂಧೆ ಅವ್ಯಾಹತವಾಗಿ ಸಾಗಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿಗೆ ಸಾಗುತ್ತಿದೆ. ಅರಣ್ಯ ಪ್ರದೇಶದ ಒತ್ತುವರಿ, ಮರ ಕಡಿಯುವುದು ಮತ್ತು ಅರಣ್ಯನಾಶದಂತಹ ಚಟುವಟಿಕೆಯಿಂದಾಗಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳ ಕಡೆ ನುಗ್ಗುತ್ತಿವೆ. ಮಾನವ- ಮೃಗಗಳ ಸಂಘರ್ಷ ಹೆಚ್ಚುತ್ತಿದೆ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಹೆಚ್ಚಿ ಮತ್ತೊಂದು ಸಾಮೂಹಿಕ ನಾಶಕ್ಕೂ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ 2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್ 3ನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೂಷಿಸಲಾಗಿದೆ. ಈ ದಿನದಂದು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ