ಶನಿವಾರ, ಮಾರ್ಚ್ 24, 2018

ಸ್ಪರ್ಧಾತ್ಮಕ ಪರೀಕ್ಷೆಯ ಉಪಯುಕ್ತ POINTS

===========
ಅಮೃತಸರದಿಂದ ದೆಹಲಿಯ ಮೂಲಕ ಕಲ್ಕತ್ತಾಕ್ಕೆ ಸಾಗುವ  ರಾಷ್ಟ್ರೀಯ ಹೆದ್ದಾರಿಯನ್ನು 'ರಾಷ್ಟ್ರೀಯ ಹೆದ್ದಾರಿ - 2' ಎಂದು ಕರೆಯಲಾಗುತ್ತದೆ. ಇದನ್ನು 'ಗ್ರ್ಯಾಂಡ್ ಟ್ರಂಕ್ ರಸ್ತೆ' (Grand Trunk Road) ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಶೇರ್ ಷಾ ಸೂರಿಯು ನಿರ್ಮಿಸಿದನು.
=============
ಉತ್ತರ-ಪಶ್ಚಿಮ ಬಯಲು ಪ್ರದೇಶ(north-western plains)ಗಳಲ್ಲಿ ತೀವ್ರವಾದ ಕಡಿಮೆ ಒತ್ತಡದ ಪಟ್ಟಿಗಳ ಕಾರಣದಿಂದಾಗಿ, ನೈಋತ್ಯ ಮಾನ್ಸೂನ್ ಮಾರುತವು ಭಾರತ ಉಪಖಂಡಕ್ಕೆ ಪ್ರವೇಶಿಸುತ್ತದೆ. ಇದು ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಿಂದ ಬೀಸುವುದು.
===========
52ನೇ ವಿಧಿಯು ಭಾರತಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೇಳಿದೆ. ಭಾರತದ ರಾಷ್ಟ್ರಪತಿಗಳು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ,
===========
ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ.
==========≠=
ಜಸ್ಟಿಸ್‌ ಎಂ.ಎನ್‌.ವೆಂಕಟಾಚಲಯ್ಯ ಕಮಿಷನ್‌: ಈ ಹಿಂದಿನ ಎನ್‌ಡಿಎ ಸರಕಾರ ಈ ಆಯೋಗವನ್ನು ನೇಮಕ ಮಾಡಿತ್ತು. ಕೊಲಿಜಿಯಮ್‌ ವ್ಯವಸ್ಥೆಗೆ ಬದಲಿಯಾಗಿ 'ನ್ಯಾಷನಲ್‌ ಜುಡಿಷಿಯಲ್‌ ಅಪಾಯಿಂಟ್‌ಮೆಂಟ್ಸ್‌ ಕಮಿಷನ್‌(ಎನ್‌ಜೆಎಸಿ)' ರಚನೆ ಬಗ್ಗೆ ಆಯೋಗ ಒಲವು ತೋರಿತ್ತು.
— ಈ ಆಯೋಗಕ್ಕೆ ಸಿಜೆಐ, ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಹಾಗೂ ಸಿಜೆಐ ಜತೆ ಸಮಾಲೋಚಿಸಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿ ಸದಸ್ಯರಾಗಬೇಕು ಎಂದು ಅದು ಶಿಫಾರಸು ಮಾಡಿತ್ತು.
============
'ಕಿಶೆನ್ ಗಂಗಾ ನದಿ'ಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 'ನೀಲಂ ನದಿ' ಎಂದು ಕರೆಯಲಾಗುತ್ತದೆ.
- ಗಂಗಾ ನದಿಯು ಉತ್ತರಾಖಂಡದ 'ಗಂಗೋತ್ರಿ ಹಿಮನದಿ'ಯಿಂದ ಹುಟ್ಟಿಕೊಂಡಿದೆ.
- ಮಧ್ಯಪ್ರದೇಶದ ಸಾತ್ಪುರಾದ ದಕ್ಷಿಣದ ಇಳಿಜಾರಿನ ಸಿಯೋನಿ ಜಿಲ್ಲೆಯ ಮುಂಡಾರಾ ಹಳ್ಳಿಯಿಂದ 12 ಕಿಮೀ ದೂರದಲ್ಲಿ 'ವೆನಗಂಗಾ ನದಿ'ಯು ಉಗಮಿಸುತ್ತದೆ.
- 'ಪೆನಗಂಗಾ ನದಿ'ಯು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
=============
ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯು ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ. ಟರ್ಮ್ ವಿಮಾ ಯೋಜನೆಯ ಪ್ರಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು 18-50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ.
— ವಿಮಾದಾರ ಸ್ವಇಚ್ಛೆಯ ಪ್ರಕಾರ ಈ ಯೋಜನೆಯಿಂದ ಹೊರ ಹೋಗುವ ಅವಕಾಶವೂ ಇದೆ. ಭವಿಷ್ಯದಲ್ಲಿ ಯಾವಾಗಲಾದರೂ ಮತ್ತೆ ಈ ಪಾಲಿಸಿಯಲ್ಲಿ ಸೇರಿಕೊಳ್ಳಬಹುದು.
===========
— ಈ ಸ್ಕೀಂನ ಪ್ರಕಾರ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಒಂದು ನವೀಕರಣ (renewal) ಮಾಡಬಹುದಾದ ಪಾಲಿಸಿಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ ರೂ. 2,00,000 ವನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. 330 ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ.
============
ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
=============
— ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲದಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ-ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೇಲ್ಲ ಅಂತರ್ಜಾಲದ ಮೂಲಕ ಮಾತ್ರ ನಡೆಯುತ್ತದೆ.
=========
— ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ.
============
ಕಾಲಗಣನೆಗೆ ಸಂಬಂಧಿಸಿದ ಭಾರತದ ಪಂಚಾಂಗಗಳು ಸೂರ್ಯ–ಚಂದ್ರರ ತೋರಿಕೆಯ ಚಲನೆಯನ್ನು ಆಧರಿಸಿವೆ. ಈ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೂ ಸೂರ್ಯನನ್ನು ಕುರಿತದ್ದೆ ಆಗಿದ್ದು ಮಕರ ‘ರಾಶಿ’ಗೆ ಅಥವಾ ನಕ್ಷತ್ರಪುಂಜಕ್ಕೆ (ಕೇಪ್ರಿಕಾರ್ನ್‍ಸ್ ಕಾನ್ಸ್ಟಲೇಷನ್) ಸೂರ್ಯನ ‘ಪ್ರವೇಶ’ವನ್ನು ಸೂಚಿಸಿ ಒಂದು ದೃಷ್ಟಿಯಿಂದ ಹೆಚ್ಚು ಬೆಳಕಿರುವ ದಿನಗಳ ಪ್ರಾರಂಭವನ್ನು (ಉತ್ತರಾಯಣ) ಸಾರುತ್ತದೆ.
==========
ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ.
===========
ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಇರುತ್ತಾರೆ.ಒಬ್ಬ ಉಪಾಧ್ಯಕ್ಷ,ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ.
=========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ