ಶನಿವಾರ, ಮಾರ್ಚ್ 24, 2018

ಮಾಹಿಳಾ ವಿಶೇಷತೆ

==========≠======
ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ 14ನೇ ಮಹಿಳೆ ರಷ್ಯಾದ ಪತ್ರಕರ್ತೆ ಸ್ವೆಟ್ಲಾನಾ ಅಲೆಕ್ಸಿಯೆವಿಚ್. ಹುಟ್ಟಿದ್ದು ಉಕ್ರೇನಿನ ಚಿಕ್ಕ ಪಟ್ಟಣದಲ್ಲಿ. ಅಲ್ಲಿಯೇ ಶಾಲಾಭ್ಯಾಸ ಮುಗಿಸಿದ ಸ್ವೆಟ್ಲಾನಾಗೆ ಕತೆ, ಕವನ, ವರದಿಗಳನ್ನು ಬರೆಯುವ ಹವ್ಯಾಸವಿತ್ತು. ಅವರ ‘ವಾಯ್್ಸ್ ಫ್ರಮ್ ಚನೋಬಿಲ್: ದಿ ಓರಲ್ ಹಿಸ್ಟರಿ ಆಫ್ ಎ ನ್ಯೂಕ್ಲಿಯರ್ ಡಿಸಾಸ್ಟರ್’ ಕೃತಿ 1986ರಲ್ಲಿ ಉಕ್ರೇನ್​ನ ಚೆರ್ನೇಬಿಲ್​ನಲ್ಲಿ ಸಂಭವಿಸಿದ್ದ ಪರಮಾಣು ದುರಂತವನ್ನು ಕಟ್ಟಿಕೊಡುತ್ತದೆ. ‘ಐ ಹ್ಯಾವ್ ಲೆಫ್ಟ್ ಮೈ ವಿಲೇಜ್, ದಿ ಅನ್​ವುಮನ್ಲಿ ಫೇಸ್ ಆಫ್ ದಿ ವಾರ್, ದಿ ಅನ್​ವಿಮನ್ಲಿ ಫೇಸ್ ಆಫ್ ದಿ ವಾರ್ ಮಾಸ್ಕೋ ಮತ್ತು ಮಿನ್ಸ್, ದಿ ಲಾಸ್ಟ್ ವಿಟೆಲಿಸ್: 100 ಅನ್​ಚೈಲ್ಡ್​ಲೈಕ್ ಸ್ಟೋರೀಸ್, ಬಾಯ್್ಸ ಇನ್ ಜಿಂಕ್: ಆಫ್ಗನ್, ದಿ ಚರ್ನೇಬಿಲ್ ಪ್ರೇಯರ್: ದಿ ಕ್ರಾನಿಕಲ್ಸ್ ಆಫ್ ದಿ ಫ್ಯೂಚರ್’ ಅವರ ಕೆಲವು ಕೃತಿಗಳು. ಸ್ವೆಟ್ಲಾನಾರ ಪುಸ್ತಕಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕೃತಿಗಳನ್ನು ಆಧರಿಸಿ ಹಲವು ರಂಗಪ್ರಯೋಗ, ಸಿನಿಮಾ ತಯಾರಾಗಿವೆ.
==========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ