ಶನಿವಾರ, ಮಾರ್ಚ್ 24, 2018

ಕ್ಷಯರೋಗ ಪಾತ್ತೆಯಲ್ಲಿ ಪ್ರಥಮ ಸ್ಥಾನ ಯಾವ ಜಿಲ್ಲೆ? ಕೊನೆಯ ಸ್ಥಾನ ಯಾವ ಜಿಲ್ಲೆ?


=============
ಕೊಪ್ಪಳ: ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ತೀವ್ರತರದ ಕ್ಷಯ ರೋಗ ಪತ್ತೆಹಚ್ಚುವ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆರಂಭಿಸಿದೆ.
=============
2017ರ ಜುಲೈ 15ರಿಂದ 31ರ ವರೆಗೆ ಮೊದಲ ಹಂತದ‌ಲ್ಲಿ ಕಾರ್ಯಕ್ರಮ 11 ಜಿಲ್ಲೆಗಳಲ್ಲಿ ಮಾಡಲಾಗಿತ್ತು. ಈಗ 2ನೇ ಹಂತದ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮವೂ ಡಿ. 4ರಿಂದ ಆರಂಭವಾಗಿ 18ರಂದು ಮುಕ್ತಾಯವಾಗಿದೆ. ಈ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಬೆಳಗಾವಿಯಲ್ಲಿ. ಆದರೆ ಜನಸಂಖ್ಯೆಯನ್ನು ಆಧರಿಸಿ ನೋಡುವುದಾದರೆ ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
°=============
ಈ ಪ್ರಕಾರ ಬೆಳಗಾವಿಯಲ್ಲಿ 7,06,911 ಜನಸಂಖ್ಯೆಯಲ್ಲಿ 490 ಪ್ರಕರಣ ಪತ್ತೆಯಾಗಿವೆ.
============
ಆದರೆ ಕೊಪ್ಪಳದಲ್ಲಿ ಕೇವಲ 2,28,508 ಜನಸಂಖ್ಯೆಯಲ್ಲಿ 222 ಪ್ರಕರಣಗಳು ಪ‍ತ್ತೆಯಾಗಿವೆ. ಹಾಗಾಗಿ ಜನಸಂಖ್ಯೆ ಆಧರಿಸಿದರೆ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ರಾಮನಗರದಲ್ಲಿ ಕೇವಲ 18 ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಈ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
================
ಈ ಸಮೀಕ್ಷೆಯೂ ಮೂರು ಹಂತದಲ್ಲಿ ನಡೆದಿದೆ. ಮೊದಲು ಮೈಕ್ರೋಸ್ಕೋಪ್‌, 2ನೇ ಎಕ್ಸ್‌ರೇ, ಮೂರನೆಯದಾಗಿ ಸಿಬಿನೆಟ್‌ ಯಂತ್ರದ ಮೂಲಕ ಪತ್ತೆ ಹಚ್ಚಲಾಗಿದೆ. ಪತ್ತೆಯಾದ ರೋಗಿಗಳಿಗೆ 6ರಿಂದ 9 ತಿಂಗಳ ಕಾಲ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎರಡು ದಿನಗಳಿಗೊಮ್ಮೆ ಔಷಧಿ ನೀಡಲಾಗುತ್ತಿತ್ತು. ಆದರೆ ಈಗ ದಿನಾಲೂ ಔಷಧ ನೀಡಲಾಗುತ್ತದೆ. ಅಲ್ಲದೆ ಔಷಧಿಯನ್ನು ಆಶಾ ಕಾರ್ಯಕರ್ತೆಯರ ಮುಂದೆ 6 ತಿಂಗಳು ಕಾಲ ಸೇವಿಸಿದರೆ ಕಾರ್ಯಕರ್ತೆಯರಿಗೆ ಗೌರವಧನ ನೀಡಲಾಗುತ್ತದೆ.
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ