ಕೇಂದ್ರ ಸರ್ಕಾರವು 161 ಜಿಲ್ಲೆಗಳಿಂದ ಭಾರತದಲ್ಲಿನ ಎಲ್ಲಾ 640 ಜಿಲ್ಲೆಗಳಿಗೆ "ಭೇಟಿ ಬಚಾವೋ ಭೇಟಿ ಪಡಾವೋ" ಕಾರ್ಯಕ್ರಮವನ್ನು ವಿಸ್ತರಿಸಿದೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣ, ಲಿಂಗ ಅನುಪಾತ, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವುದರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ ಬೇಟಿ ಬಚಾವೋ- ಬೇಟಿ ಪಡಾವೋ(ಹೆಣ್ಣು ಮಗುವನ್ನು ಉಳಿಸಿ-ಹೆಣ್ಣು ಮಗುವನ್ನು ಓದಿಸಿ)ಎಂಬ ಘೋಷ ವಾಕ್ಯದೊಂದಿಗೆ ಈ ಯೋಜನೆಯನ್ನು ಆರಂಭಿಸಿತು. ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನಕ್ಕೆ ಜ.22, 2015ರಂದು ಚಾಲನೆ ನೀಡಿದ್ದು, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರತೆಗಳನ್ನು ಉತ್ತೇಜಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪುರುಷರಿಗೆ ಸರಿಸಮನಾಗಿ ಬೆಳೆಸುವಂತೆ ನೋಡಿಕೊಳ್ಳುವುದು, ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ಧೋರಣೆಯನ್ನು ಹೋಗಲಾಡಿಸುವುದು, ಅವರನ್ನು ಸಬಲೆಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ.
ಅಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣ, ಅವರ ರಕ್ಷಣೆ, ಭ್ರೂಣ ಹತ್ಯೆ ತಡೆ ಸೇರಿದಂತೆ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವನ್ನು ಹಮ್ಮಿಕೊಂಡಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಸಚಿವಾಲಯಗಳಾ ಜಂಟಿ ಪ್ರಯತ್ನವಾಗಿದೆ. ಹರ್ಯಾಣ ಮತ್ತು ಪಂಜಾಬ್ ನಂತಹ ಮುಂತಾದ ರಾಜ್ಯಗಳು, ಲಿಂಗ ಅನುಪಾತದಲ್ಲಿ ಹಲವಾರು ದಶಕಗಳಿಂದ ಹಾನಿಗೊಂಡಿವೆ, ಇಂತಹ ರಾಜ್ಯಗಳಲ್ಲಿ "ವಧುವಿನ ಕಳ್ಳಸಾಗಣೆ"( bride trafficking ) ನಡೆಯುತ್ತಿದೆ. ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ