ಮಂಗಳವಾರ, ಮಾರ್ಚ್ 6, 2018

ತ್ರಪುರಕ್ಕೆ ಬಿಪ್ಲಬ್ ಕುಮಾರ್ ದೆಬ್ ಮುಖ್ಯಮಂತ್ರಿ*

*##ಮಾಹಿತಿ ವೇದಿಕೆ##*
    
  *ತ್ರಪುರಕ್ಕೆ ಬಿಪ್ಲಬ್ ಕುಮಾರ್ ದೆಬ್ ಮುಖ್ಯಮಂತ್ರಿ*
######₹₹₹₹₹₹
*ನವದೆಹಲಿ: ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿಪ್ಲಬ್​ ಕುಮಾರ್​ ದೆಬ್ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಮಂಗಳವಾರ ಘೋಷಿಸಿದರು.*
#########₹₹#
*ಜಿಶ್ನು ದೆಬ್​ ಬರ್ಮನ್​ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದ ಬಿಪ್ಲಬ್​ ಕುಮಾರ್​ ದೆಬ್​, ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾ.9ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದ್ದು, ಪ್ರಧಾನ ಮಂತ್ರಿ ಹಾಗೂ ಎಲ್ಲ ಬಿಜೆಪಿ ಸರ್ಕಾರ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.*
===============
*ಬಿಜೆಪಿಯ ಚುನಾವಣಾ ಮೈತ್ರಿ ಪಕ್ಷ ಇಂಡಿಜಿನಸ್ ಪೀಪಲ್ಸ್​ ಫ್ರಂಟ್​ ಆಫ್​ ತ್ರಿಪುರಾ, ಬುಡಕಟ್ಟು ಜನಾಂಗದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಒತ್ತಾಯ ಮಾಡಿದ ನಿಮಿತ್ತ ಬಿಪ್ಲಬ್​ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ.*

*ತ್ರಿಪುರಾ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಳೆದ 25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಎಂ ನ್ನು ಮಣಿಸಿ ಬಿಜೆಪಿ ಒಕ್ಕೂಟ ವಿಜಯ ಸಾಧಿಸಿದೆ. ಸಿಪಿಎಂ ಸೋಲಿನ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ರಾಜ್ಯದ ಅನೇಕ ಪ್ರದೇಶಗಳಲ್ಲಿ ಸೆಕ್ಷನ್​ 144 ಜಾರಿಯಾಗಿದೆ.*
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ