ಭಾನುವಾರ, ಫೆಬ್ರವರಿ 25, 2018

ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ*

*==ಜ್ಞಾನ ಮಂದಿರ==*

*ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ*
=================
*ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು ಹೀಗೆ ಕಾಲಕಾಲಕ್ಕೆ ಕೈಗೊಂಡ ಕಾನೂನು ಮತ್ತು ನಿಯಮಗಳು ಇಂದಿನ ಭಾರತೀಯ ಸಂವಿಧಾನದ ಬೆಳವಣಿಗೆಗೆ ಹಿನ್ನಲೆಯಾದವು.*
#############
# *ರೆಗ್ಯುಲೇಂಟಿಂಗ ಶಾಸನ (1773) :*
÷÷÷÷÷÷÷÷÷÷÷÷÷÷
*ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ಈ ಶಾಸನದಿಂದ ರಾಬರ್ಟ ಕ್ಲೈವ್ ಜಾರಿಗೊಳಿಸಿದ ದ್ವಿಮುಖ ಸರ್ಕಾರ ಪದ್ದತಿ ರದ್ದಾಯಿತು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ನಿಯಂತ್ರಿಸಲು ಅನೇಕ ನಿಬಂಧನೆಗಳನ್ನು ಜಾರಿಗೊಳಿಸಿತು.*
*(1) ಬಂಗಾಳದ ಗವರ್ನರ್ ಅನ್ನು ಭಾರತದ ಗವರ್ನರ್ ಜನರಲ್ ಎಂದು ಕರೆಯಲಾಯಿತು ಮದ್ರಾಸ್, ಬೊಂಬಾಯಿ, ಪ್ರಾಂತಗಳು ಇವನ ಅದೀನವಾದವು, ವಾರನ್ ಹೇಸ್ಟಿಂಗ್ ಭಾರತದ ಮೊದಲ ಗವರ್ನರ್ ಜನರಲ್ ಆದನು.*
*(2) ಗವರ್ನರ್ ಜನರಲ್‍ನ ಸಹಾಯಕ್ಕಾಗಿ ಸಲಹಾ ಸಮಿತಿಯಲ್ಲಿ 4 ಜನ ಸದಸ್ಯರನ್ನು ನೇಮಿಸಲಾಯಿತು.*
*(3) ಸರ್ವೋಚ್ಚ ನ್ಯಾಯಾಲಯವನ್ನು ಕಲ್ಕತ್ತೆಯಲ್ಲಿ ಸ್ಥಾಪಿಸಲಾಯ್ತು. (1773)*
*(4) ಸೆಕ್ರಟರಿ ಆಫ್ ಸ್ಟೇಟ್ ಎಂಬ ಭಾರತ ಮಂತ್ರಿಯನ್ನು ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಜವಾಬ್ದಾರನಾಗಿರುವಂತೆ ಕಂಪನಿಯ ಉಸ್ತುವಾರಿಗೆ ನೇಮಿಸಿತು.*
÷÷÷÷÷÷÷÷÷÷÷÷÷÷÷÷
# *ಕ್ರಿ.ಶ. 1784ರ ಪಿಟ್ಸ್ ಇಂಡಿಯಾ ಶಾಸನ:*
*############
*(1) ಇಂಗ್ಲೇಂಡ್‍ನಲ್ಲಿ ಆರು ಜನ ಸದಸ್ಯರ ಒಂದು ಬೋರ್ಡ್ ಆಫ್ ಕಂಟ್ರೋಲ್ ಸ್ಥಾಪನೆಯಾಗಿ ಕಂಪನಿಯ ಆಡಳಿತದ ಮೇಲೆ ಹತೋಟಿ ಹೊಂದಿತು.*
*(2) ಗರ್ವನರ್ ಜನರಲ್‍ನ ಸಲಹಾ ಸಮಿತಿಯ ಸದಸ್ಯರನ್ನು ಮೂರಕ್ಕೆ ಇಳಿಸಲಾಯಿತು.*
*(3) ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ಸರ್ಕಾರದ ನಿಯಮಗಳಿಗೆ ಒಳಪಡುವಂತಾಯಿತು.*
÷÷÷÷÷÷÷÷÷÷÷÷÷÷÷÷÷
# *ಕ್ರಿ..ಶ. 1813 ರ ಶಾಸನ:*
#################
*ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಬ್ರಿಟಿಷ್ ಸರ್ಕಾರ ನೀಡಿದ್ದ ಸನ್ನದನ್ನು ಆಗಾಗ ನವೀಕರಿಸುತಿತದ್ದರು. ಇದರಿಂದ ಕ್ರಿ.ಶ. 1813ರಲ್ಲಿ ಸನ್ನದನು ನವೀಕರಿಸಿದಾಗ ಹೊಸ ನಿಯಮಗಳನ್ನು ರೂಪಿಸಿದರು.*
*(1) ಭಾರತ ಬ್ರಿಟಿಷ್ ಸಾಮ್ರಾಜ್ಯವು ಬ್ರಿಟಿಷ್ ಸಾರ್ವಭೌಮರ ಅದೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು.*
*(2) ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧವನ್ನು ತೆಗೆದು ಹಾಕಿ ಇಲ್ಲಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಮತ ಪ್ರಚಾರಕರಿಗೆ ಸಾಧ್ಯವಾಯಿತು.*
*(3) ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಿತು.*
÷÷÷÷÷÷÷÷÷÷÷÷÷÷÷÷÷
# *ಕ್ರಿ.ಶ. 1833ರ ಶಾಸನ;*
################
*(1) ಕಂಪನಿಯು ವ್ಯಾಪಾರ ಮಾಡದಂತೆ ನಿಷೀಧಿಸಲಾಯಿತು. ಕಂಪನಿಯು ರಾಜಕೀಯ ಅಧಿಕಾರವನ್ನು ಮಾತ್ರ ಚಲಾಯಿಸುವಂತಾಯಿತು*
*(2) ಸರ್ಕಾರಿ ಸೇವೆಯಲ್ಲಿ ವ್ಯಕ್ತಿಯ ಯೋಗ್ಯತೆ ಮತ್ತು ಅರ್ಹತೆಗನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವ ಅವಕಾಶ ನೀಡಿತು.*
*(3) ಗರ್ವನರ್ ಜನರಲ್‍ನ ಸಲಹಾ ಸಮಿತಿಗೆ ಕಾನೂನು ಸದಸ್ಯನ ಸೇರ್ಪಡೆಯಾಯಿತು. ಥಾಮಸ್ ಬ್ಯಾಂಟಿಂಗ್‍ಟನ್ ಮೆಕಾಲೆ ಮೊದಲ ಕಾನೂನು ಸಲಹೆಗಾರನಾದನು. ಹೀಗೆ ಸದಸ್ಯರ ಸಂಖ್ಯೆ ಮತ್ತೆ ನಾಲ್ಕಾಯಿತು.*
÷÷÷÷÷÷÷÷÷÷÷÷÷
# *ಕ್ರಿ.ಶ. 1853 ರ ಶಾಸನ*
################
*ಈ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಪರಿಣಾಮಕಾರಿ ಶಾಸಕಾಂಗವನ್ನು ಸೃಷ್ಟಿಸಿತು.*
*(1) ಕೆಂದ್ರದಲ್ಲಿ ಶಾಸನ ಸಭೆಯ ಸ್ಥಾಪನೆಯಾಯಿತು. ಗವರ್ನರ್ ಜನರಲ್‍ನ ಸಲಹಾ ಮಂಡಳಿಗೆ ಆರು ಜನ ಶಾಸಕ ಸದಸ್ಯರ ಸೇರ್ಪಡೆಯಾಯಿತು.(ಇದು ಇಂದಿನ ಪಾರ್ಲಿಮೆಂಟಿನ್ ಮೂಲ ರೂಪವಾಯಿತು)*
*(2) ಸರ್ಕಾರಿ ಸೇವೆ (ಸಿವಿಲ್ ಸರ್ವೀಸ್)ಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ನೀಡಲಾಯಿತು.*
÷÷÷÷÷÷÷÷÷÷÷÷÷÷÷÷÷
# *ಕ್ರಿ.ಶ. 1858 ರ ಭಾರತ ಸರ್ಕಾರದ ಕಾನೂನು:*
################
*ಕ್ರಿ.ಶ. 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಆಡಳಿತ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು. ಈ ಶಾಸನ ಭಾರತದ ಉತ್ತಮ ಆಳ್ವಿಕೆಗೆ ಮಹತ್ವದ ಕೊಡುಗೆ ನೀಡಿದೆ.*
*(1) ಭಾರತದ ವ್ಯವಹಾರಗಳ ಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯರನ್ನೊಳಗೊಂಡ ಭಾರತೀಯ ಸಮಿತಿಯ ಸ್ಥಾಪನೆಯಾಯಿತು.*
*(2) ಗವರ್ನರ್ ಜನರಲ್‍ನು ವೈಸರಾಯ್ ಎಂಬ ಪದನಾಮವನ್ನು ಹೊಂದಿ ರಾಣಿಯ ಅಧಿಕಾರದ ಪ್ರತಿನಿದಿಯಾದನು.*
*(3) ಕ್ರಿ.ಶ. 1858 ರಲ್ಲಿ ಬ್ರಿಟನ್ ವಿಕ್ಟೋರಿಯಾ ರಾಣಿ ಒಂದು ಗೋಷಣೆ ಹೊರಡಿಸಿ ದೇಶೀಯ ರಾಜರಿಗೆ ಮತ್ತು ಭಾರತದ ಜನತೆಗೆ ಬ್ರಿಟಿಷ್ ಸರ್ಕಾರದಿಂದ ನಿಷ್ಪಕ್ಷಪಾತ ನಡಾವಳಿಯ ಆಶ್ವಾಸನೆ ಇತ್ತಳು.*
÷÷÷÷÷÷÷÷÷÷÷÷÷÷÷÷÷
# *ಕ್ರಿ.ಶ. 1909 ರ ಭಾರತದ ಕೌನ್ಸಿಲ್ ಆಕ್ಟ್(ಮಿಂಟೋ-ಮಾರ್ಲೆ ಸುಧಾರಣೆ) :*
###############
*ಕ್ರಿ.ಶ. 1861 ಮತ್ತು ಕ್ರಿ.ಶ. 1891 ರ ಕೌನ್ಸಿಲ್ ಆಕ್ಟ್‍ಗಳು ಶಾಸಕಾಂಗದ ಅಧಿಕಾರವನ್ನು ಹೆಚ್ಚಿಸಿದವು ಸ್ಥಳೀಯ ಮಟ್ಟದಲ್ಲಿ ಚುನಾಯಿತ ನಗರಸಭೆಗಳನ್ನು ಆರಂಭಿಸಿವದವು. ಬ್ರಿಟಿಷ್ ಸರ್ಕಾರವು ಚುನಾಯಿತ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ನೀಡಲು ಕ್ರಿ.ಶ. 1909 ರ ಶಾಸನ ಜಾರಿಗೆ ತಂದಿತು. ಭಾರತದ ವೈಸರಾಯ್ ಮಿಂಟೋ ಹಾಗೂ ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾರ್ಲೆ ಈ ಶಾಸನವನ್ನು ರೂಪಿಸಿದರು. ಆಗ ಭಾರತದಲ್ಲಿ ನಡೆದಿದ್ದ ಚಳವಳಿಗಳಿಂದಾಗಿ ಈ ಬದಲಾವಣೆ ಬಂದಿತು.*
*1. ಇದು ಕೇಂದ್ರ ಶಾಸಕಾಂಗದ ವಿಸ್ತರಣೆಗ ಅವಕಾಶ ನೀಡಿತು. ಇದರ ಸದಸ್ಯರ ಸಂಖ್ಯೆ 16 ರಿಂದ 60 ಕ್ಕೆ ಏರಿತು.*
*2. ಪ್ರಾಂತಗಳ ಶಾಸನಸಬೆಯ ವಿಸ್ತಾರವಾಯಿತು. ಇಲ್ಲಿ ಚುನಾಯಿತರಿಗೂ ಅವಕಾಶವಾಯಿತು.*
*3. ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಏರ್ಪಡಿಸಿ ಪರಿಚಯಿಸಲಾಯಿತು.*
################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ