*==ಜ್ಞಾನ ಮಂದಿರ==*
*ಮಹಿಳಾ ವಿಶೇಷತೆ*
*****************
*2016ರಲ್ಲಿ ಚೀನಾದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ ಆಫ್ ಮೆಮರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದವರು ಶ್ರೀವೈಷ್ಣವಿ ಯಾರ್ಲಗಡ್ಡ. 1995ರ ಡಿಸೆಂಬರ್ 6ರಂದು ಹೈದರಾಬಾದ್ನಲ್ಲಿ ಜನಿಸಿದ ಅವರು ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ ಮನಶ್ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2016ರಲ್ಲಿ ಅಂದಿನ ರಾಷ್ಟ್ರಪತಿಯವರಿಂದ 100 ಅಗ್ರ ಮಹಿಳಾ ಸಾಧಕರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟವರು ವೈಷ್ಣವಿ. 15 ವರ್ಷದವರಿದ್ದಾಗ ಮೊದಲ ಬಾರಿ ಮೆಮೊರಿ ಚಾಂಪಿಯನ್ಶಿಪ್ ವಿಜೇತರಾಗಿದ್ದ ಶ್ರೀವೈಷ್ಣವಿ, ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯ ಭಾರತೀಯ ಮಹಿಳೆ ಎನಿಸಿದ್ದಾರೆ. ಈ ತನಕ 16 ಚಿನ್ನದ ಪದಕ, 19 ಬೆಳ್ಳಿ, 10 ಕಂಚಿನ ಪದಗಕಗಳನ್ನು ಗೆದ್ದಿರುವ ಅವರು, ತಮ್ಮ ಕೌಶಲವನ್ನು ಇತರರಿಗೂ ಕಲಿಸಲು ತರಬೇತಿ ಸಂಸ್ಥೆ ಪ್ರಾರಂಭಿಸುವ ಆಶಯ ಹೊಂದಿದ್ದಾರೆ.*
============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ