*==ಜ್ಞಾನ ಮಂದಿರ==*
######
*ಮನೋವಿಜ್ಞಾನ ಒಂದು ಇಣುಕು ನೋಟ*#####
================
*ಮನೋವಿಜ್ಞಾನ ಮಾನವನಷ್ಟೇ ಹಳೆಯದಾದರೂಅದು ಒಂದು ಸ್ವತಂತ್ರ ವೈಜ್ಞಾನಿಕ ಪ್ರಕಾರವಾಗಿ ಅಸ್ಥಿತ್ವಕ್ಕೆಬಂದದ್ದು ಇತ್ತೀಚೆಗೆ, ಸುಮಾರು 125 ವರ್ಷಗಳ ಹಿಂದೆ.ಪುರಾತನ ಗ್ರೀಕ್ ದಾರ್ಶನಿಕರು ಮನಸ್ಸನ್ನು ಕುರಿತುಹಲವಾರು ವ್ಯಾಖ್ಯಾನಗಳನ್ನು ಮಾಡಿದ್ದರು. ಅವರು ಕೆಲವುಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ,ನಾನಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೇನೆ?ಇಲ್ಲೇನು ಮಾಡುತ್ತಿದ್ದೇನೆ? ಏಕೆ ಮಾಡುತ್ತಿದ್ದೇನೆ? ಇಂತಹದಾರ್ಶನಿಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈಪ್ರಶ್ನೆಗಳಿಗೆ ಇಂದು ಕೂಡಾ ಸಮರ್ಪಕವಾಗಿ ಉತ್ತರಹೇಳುವುದು ಸಾಧ್ಯವಾಗಿಲ್ಲ; ಅದು ಬೇರೆ ಮಾತು. ಇಂದುಮನೋವಿಜ್ಞಾನ ವಿಫುಲವಾಗಿ ಬೆಳೆದಿದೆ. ಅಮೆರಿಕಾದಂತಹಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಬಹಳ ಪ್ರಗತಿಸಾಧಿಸಿದೆ. ಒಂದು ಅಂದಾಜಿನ ಪ್ರಕಾರ ಇಂದು ಜಗತ್ತಿನಲ್ಲಿಸುಮಾರು ಆರು ಲಕ್ಷ ಮನೋವಿಜ್ಞಾನಿಗಳಿದ್ದಾರೆ. ಅವರಲ್ಲಿನಾಲ್ಕು ಲಕ್ಷ ಅಮೆರಿಕದಲ್ಲಿದ್ದಾರೆ; ಉಳಿದವರು ವಿಶ್ವದಇತರೆಡೆಗಳಲ್ಲಿ ಹಂಚಿ ಹೋಗಿದ್ದಾರೆ. ಭಾರತದಲ್ಲೂಸಾವಿರಾರು ಮಂದಿ ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿನಿರತರಾಗಿದ್ದಾರೆ; ಮಾನಸಿಕ ಚಿಕಿತ್ಸೆ, ಆಪ್ತ ಸಲಹೆ ಮುಂತಾದಪರಿಣತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.*
============
*ಮನೋವಿಜ್ಞಾನಿಗಳು ಮಾನವನ ವರ್ತನೆ ಮತ್ತುಸಾಮಾಜಿಕ ವ್ಯವಹಾರಗಳ ಬಗ್ಗೆ ಸಾಕಷ್ಟು ವಿಷಯ ಸಂಗ್ರಹಮಾಡಿದ್ದಾರೆ. ಸ್ವಾರಸ್ಯಕರವಾದ ಸಂಶೋಧನೆಗಳ ಮೂಲಕಕುತೂಹಲಕಾರಿಯಾದ ವಿಷಯಗಳನ್ನು ಹೊರಗೆಡವಿದ್ದಾರೆ.ಹಲವಾರು ಕ್ಲಿಷ್ಟ ಸಮಸ್ಯೆಗಳಿಗೆ ಉತ್ತರಿಸುವಲ್ಲಿಸಫಲರಾಗಿದ್ದಾರೆ. ಉದಾಹರಣೆಗೆ, ನಮ್ಮ ವರ್ತನೆಗಳಿಗೆಮೂಲ ಪ್ರೇರಣೆಗಳಾವುವು? ನಾವೇಕೆಕೋಪಿಸಿಕೊಳ್ಳುತ್ತೇವೆ? ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ,ಹೊಡೆದಾಡುತ್ತೇವೆ? ನಾವೇಕೆ ಇತರರಿಗೆ ಸಹಾಯಮಾಡುತ್ತೇವೆ ಅಥವಾ ಮಾಡುವುದಿಲ್ಲ? ನಾವು ನೈತಿಕವಾಗಿಅಥವಾ ಅನೈತಿಕವಾಗಿ ನಡೆದುಕೊಳ್ಳಲು ಕಾರಣಗಳೇನು?ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸಲು ಉತ್ತಮವಿಧಾನಗಳಾವುವು? ಕಲಿತ ಪಾಠಗಳನ್ನುನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಪರೀಕ್ಷೆಯ ಭಯವನ್ನುತಪ್ಪಿಸುವುದು ಹೇಗೆ? ಮಕ್ಕಳನ್ನು ತಿದ್ದುವಾಗ ಅವರನ್ನುಶಿಕ್ಷಿಸುವುದು ಸರಿಯೆ? ತಂದೆ ತಾಯಿಗಳು ಮಕ್ಕಳ ಜತೆಯಲ್ಲಿಹೇಗೆ ವ್ಯವಹರಿಸಬೇಕು? ವೈವಾಹಿಕ ಜೀವನದಲ್ಲಿಏರುಪೇರುಗಳು ಹೇಗೆ ಹುಟ್ಟಿಕೊಳ್ಳುತ್ತವೆ? ಅವುಗಳಿಗೆಪರಿಹಾರಗಳಿವೆಯೇ? ವಿವಾಹ ವಿಚ್ಛೇಧನಕ್ಕೆಕಾರಣಗಳೇನು? ಅವುಗಳನ್ನು ತಡೆಯಬಹುದೆ?ಕಾರ್ಮಿಕರನ್ನು ಹೆಚ್ಚು ಉತ್ಪಾದಿಸುವಂತೆ ಪ್ರೇರೇಪಿಸಲುಸಾಧ್ಯವೆ? ಮೇಲ್ವಿಚಾರಕರು ಕೆಲಸಗಾರರನ್ನು ಹೇಗೆನಡೆಸಿಕೊಳ್ಳಬೇಕು? ಮುಷ್ಕರಗಳಿಗೆ ಕಾರಣಗಳೇನು?ಅವನ್ನು ತಪ್ಪಿಸಬಹುದೇ? ನಿತ್ಯ ಜೀವನದಲ್ಲಿಒತ್ತಡ(Stress)ವನ್ನು ಪರಿಹರಿಸಿಕೊಳ್ಳುವುದು ಹೇಗೆ?ನಾಯಕರ ಲಕ್ಷಣಗಳಾವುವು? ಅವರನ್ನು ನಿರ್ಮಾಣಮಾಡಲು ಸಾಧ್ಯವೇ? ರಾಜಕಾರಣಿಗಳು ಮತದಾರರನ್ನುಒಲಿಸಿಕೊಳ್ಳುವುದು ಹೇಗೆ? ಪ್ರಚಾರವನ್ನುಪರಿಣಾಮಕಾರಿಯಾಗಿಸುವುದು ಹೇಗೆ? ಪೊಲೀಸರನ್ನುಜನಾನುರಾಗಿಗಳಾಗಿರುವಂತೆ ತರಬೇತು ಮಾಡುವುದುಹೇಗೆ? ಬುದ್ಧಿ ಶಕ್ತಿ ಎಂದರೇನು? ಅದನ್ನು ಅಳೆಯುವುದುಹೇಗೆ? ಕನಸುಗಳು ಏಕೆ ಬೀಳುತ್ತವೆ, ಅವುಗಳಿಗೆಅರ್ಥವಿದೆಯೇ? ಜನರು ಆತ್ಮಹತ್ಯೆಗೆ ಏಕೆಶರಣುಹೋಗುತ್ತಾರೆ? ಅದನ್ನು ತಡೆಯಲು ಸಾಧ್ಯವಿಲ್ಲವೇ?ಮಾದಕ ದ್ರವ್ಯಗಳ ಸೇವನೆಗೆ ಕಾರಣಗಳೇನು? ಅವುಗಳಸೇವನೆಯನ್ನು ತಡೆಯುವುದು ಸಾಧ್ಯವಿಲ್ಲವೇ? ಬೀಡಿ,ಸಿಗರೇಟು ಸೇದುವುದು, ಮದ್ಯಪಾನ ಮುಂತದದುಶ್ಚಟಗಳನ್ನು ಬಿಡಿಸುವುದು ಹೇಗೆ? ಶಿಕ್ಷೆಗೊಳಗಾಗಿಸೆರೆವಾಸದಲ್ಲಿರುವವರಲ್ಲಿ ಮಾರ್ಪಾಡು ತಂದು ಅವರನ್ನುನಾಗರಿಕ ಪ್ರಜೆಗಳಾಗಿ ಬಾಳುವಂತೆ ಮಾಡುವುದು ಸಾಧ್ಯವೆ?ಅತ್ಯಾಚಾರಕ್ಕೊಳಗಾದವರಿಗೆ ಸಾಂತ್ವನ ನೀಡುವುದು ಹೇಗೆ?ಭಯೋತ್ಪಾದಕರು ಹೇಗೆ ಸೃಷ್ಟಿಯಾಗುತ್ತಾರೆ? ಅವರನ್ನುಸರಿದಾರಿಗೆ ತರುವುದು ಸಾಧ್ಯವಿಲ್ಲವೇ? ಮಾನಸಿಕವೈಪರೀತ್ಯಗಳಿಗೆ ಕಾರಣಗಳೇನು? ಅವುಗಳಿಗೆ ಸೂಕ್ತಚಿಕಿತ್ಸೆಗಳಾವುವು? ಅನವಶ್ಯಕ ಕೋಪತಾಪಗಳು,ಭಯಭೀತಿಗಳು, ವಿಷಣ್ಣತೆ(Depression) ನಿದ್ರಾಹೀನತೆ,ಚಿಂತೆ, ಆತಂಕ ಮುಂತಾದವನ್ನು ಹೋಗಲಾಡಿಸಬಹುದೇ?ಇಂಥ ನೂರಾರು, ಸಾವಿರಾರು ಸಮಸ್ಯೆಗಳಿಗೆಮನೋವಿಜ್ಞಾನ ಉತ್ತರ ಹೇಳಬಲ್ಲದು. ಆದರೆಮನೋವಿಜ್ಞಾನಿಗಳ ಈ ಪ್ರಯತ್ನಗಳಿಗೆ ಸರ್ಕಾರದಿಂದ,ಶೈಕ್ಷಣಿಕ ಸಂಸ್ಥೆಗಳಿಂದ, ಸಾರ್ವಜನಿಕರಿಂದ ಸಾಕಾದಷ್ಟುಪ್ರೋತ್ಸಾಹ ದೊರಕದಿರುವುದು ದುರಾದೃಷ್ಟ. ಇಂದು ನಮ್ಮಗಮನವಿರುವುದೆಲ್ಲ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತುತಾಂತ್ರಿಕ ವಿಜ್ಞಾನಗಳೆಡೆಗೆ; ಮಾನವಿಕ ವಿಜ್ಞಾನಗಳೆಡೆಗಲ್ಲ.ಒಂದು ಮೂಲದ ಪ್ರಕಾರ ಅಮೆರಿಕದಂಥ ಮುಂದುವರೆದದೇಶದಲ್ಲಿ ಮೊದಲ ಗುಂಪಿನವಕ್ಕೆ ಖರ್ಚು ಮಾಡುವ ಹಣದ 1/20 ಭಾಗ ಮಾತ್ರ ಮಾನವಿಕಗಳಿಗೆ ಖರ್ಚಾಗುತ್ತಿದೆಯಂತೆ !ಇದರ ಪರಿಣಾಮವಾಗಿ ಮೂಲಭೂತ ವಿಜ್ಞಾನಗಳುವಿಫುಲವಾಗಿ ಬೆಳೆದಿವೆ, ಬೆಳೆಯುತ್ತಿವೆ. ಅವುಗಳಪರಿಶೋಧನೆಗಳು ಅದ್ಭುತವಾಗಿವೆ. ಅವು ಕಾಲ ದೇಶಗಳ(Space and Time) ಮೇಲೆ ವಿಜಯ ಸಾಧಿಸಿವೆ. ನಮ್ಮಯಾಂತ್ರಿಕ ಬೆಳವಣಿಗೆ ಊಹಿಗೆ ಮೀರಿದುದು. ಹುಚ್ಚುಹೊಳೆಗಳಿಗೆ ಅಡ್ಡಗಟ್ಟೆ ಕಟ್ಟಿ ಪ್ರವಾಹದಿಂದ ಪಾರುಮಾಡುವುದರ ಜತೆಗೆ ಹೆಚ್ಚು ಬೆಳೆ ಬೆಳೆಯಲು ಅನುವುಮಾಡಿಕೊಟ್ಟಿವೆ; ಬಾಹ್ಯ ಪರಿಸರದ ಮೇಲೆ ನಿಯಂತ್ರಣಸಾಧಿಸಲಾಗಿದೆ; ಹವೆಯನ್ನು ನಿಯಂತ್ರಿಸಿ ಹಿತಕರವಾದಜೀವನ ನಡೆಸಲು ಸಹಾಯ ಮಾಡಲಾಗಿದೆ. ವಾಹನಸೌಕರ್ಯಗಳು ಎಷ್ಟಾಗಿವೆಯೆಂದರೆ ನಾವುನಡೆಯುವುದನ್ನೇ ಮರೆಯುತ್ತಿದ್ದೇವೆ. ದೂರವಾಣಿ ಕ್ಷೇತ್ರದಲ್ಲಿಆಗಿರುವ ಕ್ರಾಂತಿ ಎಲ್ಲರಿಗೂ ತಿಳಿದ ವಿಷಯ. ಅಣುವಿನಅಂತರಾಳವನ್ನು ಅರಿತು ಅಭೇದ್ಯನಿಸಿದ್ದ ಅದನ್ನು ವಿಭಜಿಸಿದೈತ್ಯಶಕ್ತಿಯನ್ನು ಹೊರಗೆಡವಲಾಗಿದೆ. ಅಣುವಿಜ್ಞಾನದಬೆಳವಣಿಗೆ ಆತಂಕದ ಮಟ್ಟವನ್ನು ಮುಟ್ಟಿದೆ*
================
*ಆದರೆ ಎಲ್ಲವನ್ನು ಅರಿತ ಮಾನವನಿಗೆ ತನ್ನನ್ನುತಾನು ಅರಿಯಲಾಗಿಲ್ಲ; ಎಲ್ಲವನ್ನು ನಿಯಂತ್ರಿಸಿದವನಿಗೆತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗುತ್ತಿಲ್ಲ. ಬಾಹ್ಯಪ್ರಪಂಚವನ್ನು ಅರ್ಥೈಸಿಕೊಂಡ ಮನುಷ್ಯನಿಗೆ ತನ್ನ ಆಂತರಿಕಪ್ರಪಂಚ ಅರ್ಥವಾಗದಿರುವುದು ಒಂದು ವೈಜ್ಞಾನಿಕವಿಪರ್ಯಾಸ. ಮಾನವನಿಗೆ ಎಲ್ಲವೂ ತಿಳಿದಿದೆ-ತನ್ನನ್ನುಬಿಟ್ಟು.*
===============
*ಇಂದು ವೈಜ್ಞಾನಿಕ ಆವಿಷ್ಕಾರಗಳು ರಾಜಕಾರಣಿಗಳನಿಯಂತ್ರಣಕ್ಕೊಳಪಟ್ಟಿವೆ. ಅದರಿಂದಾಗಿ ಹಲವು ವೇಳೆಅವು ದುರುಪಯೋಗಕ್ಕೊಳಗಾಗುತ್ತಿವೆ. ಅಣು ವಿಭಜನೆ ಇದಕ್ಕೊಂದು ನಿದರ್ಶನ. ವಿಜ್ಞಾನಿಗಳು ಅಣು ಬಾಂಬನ್ನೇನುಮಾಡಬೇಕೆಂದುಕೊಂಡಿರಲಿಲ್ಲ. ಅದನ್ನು ಮಾಡಿಸಿದವರುರಾಜಕಾರಣಿಗಳು. ಅದ್ದರಿಂದ ಆಗಿರುವ ಅನಾಹುತಗಳುಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಕೆಲವುಆವಿಷ್ಕಾರಗಳು ತಾಂತ್ರಿಕ ನಿಪುಣರ ಮತ್ತು ಲಾಭಕೋರಕೈಗಾರಿಕೋದ್ಯಮಿಗಳ ಕೈಗೆ ಸಿಕ್ಕು ಜನರಶೋಷಣೆಯಾಗುತ್ತಿದೆ; ಕಾಡುಗಳು ನಾಶವಾಗುತ್ತಿವೆ;ಕುಡಿಯುವ ನೀರು ಕೊಳಕಾಗುತ್ತಿದೆ; ಪರಿಸರಕಲುಷಿತವಾಗುತ್ತಿದೆ. ಒಳ್ಳೆಯ ಗಾಳಿ ಬೆಳಕು ದೊರಕುವುದುಕಷ್ಟವಾಗುತ್ತಿದೆ. ನಮ್ಮ ನಗರಗಳಲ್ಲಿ ಆಮ್ಲಜನಕವನ್ನುಮಾರುವ ಅಂಗಡಿಗಳನ್ನು ತೆರೆಯುವ ದಿನ ದೂರವಿಲ್ಲ.*
=============
*ನಮ್ಮ ಸಮಾಜ ಕೂಡಾ ರೋಗಗ್ರಸ್ಥವಾಗುತ್ತಿದೆ.ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಸಂಬಂಧಗಳುಸವಕಲಾಗುತ್ತಿವೆ. ಸ್ವಾರ್ಥ ಕೇಂದ್ರಿತವಾದ ವ್ಯಕ್ತಿತ್ವಗಳುಹೇರಳವಾಗುತ್ತಿದ್ದಾರೆ. ಜನತೆಯನ್ನು ಬಾಧಿಸುತ್ತಿರುವಯಾವೊಂದು ಸಮಸ್ಯೆಗೂ ನಿಶ್ಚಿತ ಪರಿಹಾರಕಂಡುಬರುತ್ತಿಲ್ಲ. ಎಂದಾದರೊಂದು ದಿನ ಈ ಸಮಸ್ಯೆಗಳುಬಗೆಹರಿಯಬಹುದೆಂಬ ಆಶಾಭಾವನೆ ಕೂಡಾ ಜನರಲ್ಲಿಲ್ಲ.ಅಧಿಕಾರ ಹಿಡಿಯುವವರ ಸ್ವಾರ್ಥ, ಹಣದಾಹ,ಅಧಿಕಾರವನ್ನು ಉಳಿಸಿಕೊಳ್ಳಲು ಅವರು ಮಾಡುತ್ತಿರುವಕಸರತ್ತು, ಮುಂತಾದವು ತಮ್ಮ ದುಸ್ಥಿತಿಗೆ ಬಹುಮಟ್ಟಿಗೆಕಾರಣವೆಂದು ತಿಳಿದಿದ್ದರೂ ಜನರು ಏನೂಮಾಡಲಾರದವರಾಗಿದ್ದಾರೆ. ಸರ್ಕಾರರಿಂದ ತಮ್ಮಸಮಸ್ಯೆಗಳಿಗೆ ಪರಿಹಾರ ದೊರಕಲಾರದೆಂಬನಿರಾಶಾಭಾವನೆ ಪ್ರಜೆಗಳಲ್ಲಿ ಬೆಳೆದು ಬರುತ್ತಿದೆ. ಆಡಳಿತವ್ಯವಸ್ಥೆಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲದಿರುವುದು ಶುಭಸೂಚನೆಯಲ್ಲ. ಅಧಿಕಾರದಲ್ಲಿರುವವರು ಮಾತ್ರ ತಮಗೆಮತ್ತು ತಮ್ಮ ಮುಂದಿನ ಪೀಳಿಗೆಗೆ, ಸಾಕಾಗುವಷ್ಟನ್ನುಕೂಡಿಡಬಲ್ಲರು. ಅದಕ್ಕೆ ಯಾವ ಮಾರ್ಗವಾದರೂ ಸರಿ,ಎನ್ನುವ ಧೋರಣೆ ಜನರಲ್ಲಿ ಬೆಳೆದು ಬಂದು, ಸಾಮಾಜಿಕಮೌಲ್ಯಗಳು ಅಧೋಗತಿಗಿಳಿಯುತ್ತಿವೆ. ಸಾಮಾಜಿಕವ್ಯವಸ್ಥೆಯಲ್ಲಿ ಅಪಮಾರ್ಗಗಳು ಮೇಲ್ಗೈಯಾಗುತ್ತಿದೆ.ಇದನ್ನು ಬದಲಾಯಿಸುವ ಪ್ರವೃತ್ತಿಯಾಗಲೀ, ಅದಕ್ಕಾಗಿಪ್ರಯತ್ನಿಸುವ ನಾಯಕತ್ವವಾಗಲೀ ಕಂಡುಬರದಿರುವುದುನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಬಹುದೊಡ್ಡ ಕೊರತೆ.*
=============
* ಇಂದು ಧಾರ್ಮಿಕ ವ್ಯವಸ್ಥೆಗಳು ಕೂಡಾ ನಮ್ಮನ್ನುದಾರಿ ತಪ್ಪಿಸುತ್ತಿವೆ. ಧರ್ಮದ ಹೆಸರಿನಲ್ಲಿ ರಕ್ತದ ಹೊಳೆಹರಿಯುತ್ತಿದೆ. ಮತಾಂಧರು ಹೆಚ್ಚುತ್ತಿದ್ದಾರೆ. ಸಾಮಾನ್ಯಜನರು ತಾವು ಹಿಂದುಗಳೆಂದು, ಮುಸಲ್ಮಾನರೆಂದು,ಕ್ರೈಸ್ತರೆಂದು ಗುರುತಿಸಿಕೊಳ್ಳುವಷ್ಟು ಸರಳವಾಗಿ ತಾವುಮನುಷ್ಯರೆಂದು ಗುರುತಿಸಿಕೊಳ್ಳುತ್ತಿಲ್ಲ. ದಯೆಯಿಲ್ಲದಧರ್ಮಗಳು ಹೆಚ್ಚಾಗಿ ಬೆಳೆಯುತ್ತಿವೆ. ಸುಳ್ಳು, ಮೋಸ,ವಂಚನೆ, ಕ್ರೌರ್ಯಗಳು ಕಾಣಸಿಗುವಷ್ಟು ಸುಲಭವಾಗಿ ಸತ್ಯ,ದಯೆ, ಪರೋಪಕಾರ, ಅಹಿಂಸೆಗಳು ಕಂಡುಬರುತ್ತಿಲ್ಲ.ಇದನ್ನೆಲ್ಲ ನೋಡಿದರೆ ಮಾನವ ವಿನಾಶದ ಹಾದಿ ಹಿಡಿಯುತ್ತಿದ್ದಾನೇನೊ ಅನ್ನಿಸುತ್ತದೆ. ಹೀಗಾಗಲುಕಾರಣಗಳೇನು ಎಂದು ಯಾರೂ ಆಲೋಚಿಸುವಂತೆಯೂಕಾಣುತ್ತಿಲ್ಲ. ಇದು ನಮ್ಮ ದೌರ್ಭಾಗ್ಯ.*
*ಈ ಪರಿಸ್ಥಿತಿಯನ್ನುಂಟುಮಾಡಿರುವ ಹಲವಾರುಕಾರಣಗಳಲ್ಲಿ ನಾವು ಮಾನವಿಕ ವಿಜ್ಞಾನಗಳ ಮತ್ತುಸಂಶೋಧನೆಗಳ ವಿಚಾರವಾಗಿ ತೋರುವ ನಿರ್ಲಕ್ಷ್ಯವೂಒಂದು. ಮಾನವಿಕಗಳು ಮಾನವನ ವರ್ತನೆಗಳಿಗೆಪ್ರೇರಣಗಳನ್ನು ಕಂಡುಹಿಡಿಯುವಲ್ಲಿ ತಕ್ಕಮಟ್ಟಿಗೆಜಯಶಾಲಿಯಾಗಿವೆ. ಉದಾಹರಣೆಗೆ, ಆಧುನಿಕಮನೋವಿಜ್ಞಾನ ಮಾನವನ ವೈಯುಕ್ತಿಕ ಹಾಗೂ ಸಾಮಾಜಿಕಜೀವನವನ್ನು ಉತ್ತಮಗೊಳಿಸಬಲ್ಲ ಕೆಲವು ಉಪಯುಕ್ತಸಲಹೆಗಳನ್ನು ಸಂಶೋಧನೆಗಳಿಂದ ಕಂಡುಕೊಂಡಿದೆ.ಮಕ್ಕಳನ್ನು ಸಾಕುವ ಉತ್ತಮ ವಿಧಾನಗಳು, ವಿದ್ಯಾರ್ಥಿಗಳಿಗೆಪಾಠ ಕಲಿಸಲು ಅನುಸರಿಸಬೇಕಾದ ಪರಿಣಾಮಕಾರಿಸೂತ್ರಗಳು, ಮಕ್ಕಳಲ್ಲಿ ನೈತಿಕತೆಯನ್ನು ವಿಕಾಸಗೊಳಿಸಬಲ್ಲಮಾರ್ಗಗಳು, ಕೋಪತಾಪಗಳೇ ಮೊದಲಾದಭಾವೋದ್ವೇಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವಬಗೆಗಳು, ಸಾಮಾಜಿಕ ಮತ್ತು ಕೌಟುಂಬಿಕ ವಿರಸಗಳನ್ನುಪರಿಹರಿಸುವ ವಿಧಾನಗಳು, ಪರಸ್ಪರರಲ್ಲಿಪ್ರೀತಿವಿಶ್ವಾಸಗಳನ್ನು ಬೆಳೆಯಲು ಸಹಾಯಕವಾಗಬಲ್ಲಪರಿಸರದ ನಿರ್ಮಾಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕಮಾರ್ಗದರ್ಶನ, ಔದ್ಯೋಗಿಕ ಮಾರ್ಗದರ್ಶನ, ಶಿಶುಮಾರ್ಗದರ್ಶನ, ಮಾನಸಿಕ ವೈಪರೀತ್ಯಗಳನ್ನುಪರಿಹರಿಸಬಲ್ಲ ಆಪ್ತಸಲಹೆಯೇ, ಮುಂತಾದ ಮನಶ್ಚಿಕಿತ್ಸಾವಿಧಾನಗಳು, ಮಾದಕ ದ್ರವ್ಯಗಳ ಸೇವನೆಯಿಂದ ಬಿಡುಗಡೆಹೊಂದುವ ಬಗೆಗಳು, ಹೀಗೆ ನೂರಾರು ಉಪಯುಕ್ತಸಲಹೆಗಳನ್ನು ನಮ್ಮ ಮುಂದಿಟ್ಟಿದೆ.*
==============
*ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಪ್ರಾದ್ಯಾಪಕರಾಗಿದ್ದ ಎ ಪಿಟಿರಿಮ್ ಸೊರೊಕಿನ್ (Pitirim A Sorokin 1889-1968) ಹೇಳಿದ ಕೆಲವು ಮಾತುಗಳು ಇಲ್ಲಿಬಹಳ ಪ್ರಸ್ತುತ. ಅವರ ಪ್ರಕಾರ ಇಂದು ನಮ್ಮ ವಿಜ್ಞಾನಸತ್ಯಶೋಧನೆಯಲ್ಲಿ ಬಹಳ ಪ್ರಗತಿ ಸಾಧಿಸಿದೆ; ಜನರಬಾಳನ್ನು ಸುಂದರವಾಗಿರಿಸಲು ಬಹಳ ಶ್ರಮ ವಹಿಸಿದೆ;ಆದರೆ, ಮಂಗಳಕರವಾದುದನ್ನು ಮಾಡುವಲ್ಲಿ ಸೋತಿದೆ.ಅಂದರೆ, ಬಾರತೀಯರು ಹೇಳುವ ಸತ್ಯಂ ಶಿವಂಸುಂದರಂಗಳಲ್ಲಿ ಶಿವಂನ್ನು ಮರೆತಿದೆ; ಇದು ನಮ್ಮದೌರ್ಭಾಗ್ಯ. ಇಂದು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕರೋಗರುಜಿನಗಳಿಗೆ ಪರಮೌಷಧ ಪ್ರೇಮ. ನಿಸ್ವಾರ್ಥಸೃಜನಶೀಲ ಪ್ರೇಮ (selfless creative love), ಎಂಬುದುಸೊರೊಕಿನ್ನರ ನಂಬಿಕೆ. ಪ್ರೇಮ ನಮ್ಮ ದೈಹಿಕ, ಮಾನಸಿಕ,ನೈತಿಕ ವಿಕಾಸಕ್ಕೆ ಅವಶ್ಯಕವಾದ ಮೂಲ ಶಕ್ತಿ. ನಮ್ಮನ್ನುಕಾಡುವ ದ್ವೇಷಾಸೂಯೆಗಳಿಗೆ, ವ್ಯಾಧಿಗ್ರಸ್ಥ ಭಾವನೆಗಳಿಗೆದುಷ್ಕರ್ಮಗಳಿಗೆ ಆತ್ಮಹತ್ಯೆಯ ಅಭಿವೃತ್ತಿಗಳಿಗೆಭಯಭೀತಿಗಳಿಗೆ ಮನೋರೋಗಗಳಿಗೆ ಪ್ರೇಮವೇಏಕಮೇವ ಮದ್ದು. ಮಾನವನ ಔನ್ನತ್ಯಕ್ಕೆ, ನೈತಿಕ ವಿಕಾಸಕ್ಕೆಇರುವ ಒಂದೇ ಮಾರ್ಗ ಪ್ರೇಮದ್ದು. ಇಂದು ನಮ್ಮಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವ್ಯವಸ್ಥೆಗಳು ನಮಗೆಜನರನ್ನು ಪ್ರೀತಿಸುವುದನ್ನು ಕಲಿಸುತ್ತಿಲ್ಲ; ಸಾಮಾಜಿಕಆಸಕ್ತಿಯನ್ನು ಬೆಳಸಿಕೊಳ್ಳಲು ಸಹಾಯ ಮಾಡುತ್ತಿಲ್ಲ:ಏನಾದರೊಂದು ಮಹತ್ತಾದುದನ್ನು ಸಾಧಿಸುವುದನ್ನುಹೇಳಿಕೊಡುತ್ತಿಲ್ಲ; ಏನಾದರೂ ಹೆಮ್ಮೆ ಪಡುವಂತಹ ಕೆಲಸಮಾಡಲು ನಮಗೆ ಅವಕಾಶವೇ ಸಿಗುತ್ತಿಲ್ಲ. ಇಂದಿನದಿನಗಳಲ್ಲಿ ನಮ್ಮ ಆಸಕ್ತಿಯೆಲ್ಲಾ ಇರುವುದು ತಿನ್ನುವುದು,ಕುಡಿಯುವುದು, ಲೈಂಗಿಕತೆ ಇವುಗಳೆಡೆಗೆ. ನಮ್ಮಶಾಲಾಕಾಲೇಜುಗಳು ಬೀಜಗಣಿತದ ಜತೆಗೆಪ್ರೇಮಿಸುವುದನ್ನೂ, ರಸಾಯನಶಾಸ್ತ್ರದ ಜತೆಗೆ ಕೊಂಚರಸಗ್ರಹಣ ಪ್ರಜ್ಞೆಯನ್ನು ಕಲಿಸಿದರೆ ಈ ಭೂಮಿ ಹೆಚ್ಚು ವಾಸಯೋಗ್ಯವಾಗುವುದರಲ್ಲಿ ಸಂದೇಹವಿಲ್ಲ. ಇದೇ ಮಾತನ್ನಮನೋವಿಜ್ಞಾನಿ ಎರಿಕ್ ಫ್ರಾಮ್ (Erich Fromm 1900-1980) ಕೂಡ ಹೇಳಿದ್ದಾರೆ. ಅವರ ಪ್ರಕಾರ, ಇಂದು ನಾವುಒಂದು ರೋಗಿಷ್ಟ ಸಮಾಜದಲ್ಲಿ ವಾಸಿಸುತ್ತಿದ್ದೇವೆ; ಹಳೆಯಮೌಲ್ಯಗಳು ನಾಶವಾಗಿ, ಹೊಸವನ್ನು ಬೆಳಸಿಕೊಳ್ಳಲಾಗದೆನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ; ಚುಕ್ಕಾಣಿಯಿಲ್ಲದ ನಾವೆಯಲ್ಲಿ ಪ್ರಯಾಣಿಸುತ್ತಿದ್ದೇವೆ. ಇಲ್ಲಿನಾವು ಎಲ್ಲವನ್ನು ಹೆಚ್ಚಾಗಿ ಉತ್ಪಾದಿಸುವುದು, ಹೆಚ್ಚಾಗಿಅನುಭೋಗಿಸುವುದು, ಇವುಗಳಲ್ಲಿ ನಿರತರಾಗಿದ್ದೇವೆ- ಪ್ರೇಮಒಂದನ್ನು ಬಿಟ್ಟು. ಪ್ರೀತಿ, ಪ್ರೇಮ, ವಿಶ್ವಾಸ, ಅಹಿಂಸೆ,ಪರೋಪಕಾರ, ತಾಳ್ಮೆ, ಮುಂತಾದ ಉದಾತ್ತ ಮಾನವೀಯಮೌಲ್ಯಗಳನ್ನು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಅಳವಡಿಸಿಕೊಳ್ಳಲಾಗದಿರುವುದು ನಿಜವಾಗಿಯೂವಿಷಾದನೀಯ.*
===============
*ಅಮೆರಿಕಾದ ಪಸಿದ್ಧ ಭೌತ ವಿಜ್ಞಾನಿ ಓಪನ್ಹೀಮರ್(Oppenheimer, 1904-1967) ಒಂದು ಸಾರಿಅಮೆರಿಕಾದ ಮನೋವಿಜ್ಞಾನ ಸಂಸ್ಥೆಯ ಸದಸ್ಯರನ್ನುದ್ದೇಶಿಸಿಮಾತನಾಡುತ್ತಾ, ಜಗತ್ತಿನ ಅಳಿವು ಉಳಿವುಗಳನ್ನುನಿರ್ಧರಿಸುವುದು ಭೌತವಿಜ್ಞಾನವಲ್ಲ, ಮನೋವಿಜ್ಞಾನಎಂದು ಹೇಳಿದರು. ಈ ಮಾತಿನಲ್ಲಿ ಕೊಂಚಉತ್ಪ್ರೇಕ್ಷೆಯಿದ್ದರೂ ಅದು ಸತ್ಯದೂರವಲ್ಲ. ನಮ್ಮಸಮಾಜದ, ನಮ್ಮ ಶೈಕ್ಷಣಿಕ ತಜ್ಞರು ಮಾನವಿಕಗಳಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳನ್ನು ಕುರಿತುಕೊಂಚ ಗಂಭೀರವಾಗಿ ಆಲೋಚಿಸಬೇಕಾದ ಕಾಲ ಬಂದಿದೆ.ಕೇವಲ ಮೆಡಿಸನ್, ಇಂಜಿನಿಯರಿಂಗ್, ಐಟಿ, ಬಿಟಿ,ಮುಂತಾದವುಗಳ ಮೇಲೆ ಮಾತ್ರ ಈ ಜಗತ್ತು ನಿಂತಿಲ್ಲ.ಜಗತ್ತು ಉದ್ಧಾರವಾಗಬೇಕಾದರೆ ಮಾನವ ತನ್ನ ತಾನರಿದು,ತಾನಾರೆಂಬುದ ತಿಳಿಯಬೇಕು. ಅವನಿಗೆ ಅವನಲ್ಲಿರುವದುರ್ಗುಣಗಳ ಅರಿವು ಮಾಡಿಕೊಟ್ಟು, ಅವುಗಳನ್ನುಹತೋಟಿಯಲ್ಲಿಡುವ ವಿಧಾನಗಳನ್ನು ಕಲಿಯಬೇಕು;ಸದ್ಗುಣಗಳನ್ನು ಪ್ರೋತ್ಸಾಯಿಸಿ ಅವುಗಳನ್ನುಹೊರಗೆಡವಬೇಕು. ಆಲ್ಫ್ರೆಡ್ ಆಡ್ಲರ್ (Alfred Adler) ಪ್ರಕಾರ, ಮನುಷ್ಯನಲ್ಲಿ ಸಾಮಾಜಿಕ ಹಿತಾಸಕ್ತಿ. (Social interest) ಅನುವಂಶಿಕವಾಗಿ ಬಂದಿರುತ್ತದೆ. ಅದನ್ನುಹೊರಗೆಡುವಂತಹ ಶಿಕ್ಷಣ ವ್ಯವಸ್ಥೆ ನಮಗೆ ಬೇಕು. ಕಾರ್ಲ್ಯೂಂಗ್ (Carl Jung) ಹೇಳುವಂತೆ ಮನುಷ್ಯನಿಗೆಸ್ವಯಂ ಸಾಕ್ಷಾತ್ಕಾರ (Self-realization) ಆಗಬೇಕು;ಅವನಲ್ಲಿ ಹುದುಗಿರುವ ಆಂತರಿಕ ಶಕ್ತಿ ಹೊರಬರಬೇಕು.ಆಗ ಜಗತ್ತಿನಲ್ಲಿ ಸುಖಶಾಂತಿಗಳು ನೆಲೆಸುತ್ತವೆ; ಮಾನವಪರಿಪೂರ್ಣ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಅಂದಮಾತ್ರಕ್ಕೆ ಮಾನವಿಕ ವಿಜ್ಞಾನಗಳ ಅಧ್ಯಯನದಿಂದ ಇವೆಲ್ಲಾಖಂಡಿತಾ ಜರುಗುತ್ತವೆಂದು ಹೇಳಬರುವುದಿಲ್ಲ, ಮಾನವನವರ್ತನೆಗಳ ಮೂಲ ಬಹಳ ಸಂಕೀರ್ಣವಾದುದು; ಅದನ್ನುಅರಿಯುವುದು ಸುಲಭವಲ್ಲ. ಆದರೆ, ಈ ಪ್ರಯತ್ನದಿಂದಕೆಡಕಂತೂ ಆಗುವುದಿಲ್ಲ! ಏಕೆ ಪ್ರಯತ್ನಿಸಬಾರದು?*
================
*ಮನೋವೈಜ್ಞಾನಿಕ ಸಾಹಿತ್ಯ ಜಗತ್ತಿನಲ್ಲಿ ಇಂದುವಿಫುಲವಾಗಿ ಬೆಳೆದಿದೆ. ಅದೇ ಮಟ್ಟದಲ್ಲಿ ಭಾರತೀಯಭಾಷೆಗಳಲ್ಲಿ ಬೆಳೆದಿಲ್ಲ. ಕನ್ನಡದಲ್ಲಿ ಆಗಿರುವುದು ಸಾಲದು.ನಮ್ಮ ಜನ ಮನೋವಿಜ್ಞಾನವನ್ನು ಹೆಚ್ಚು ಹೆಚ್ಚು ಅಧ್ಯಯನಮಾಡಬೇಕು; ಅದನ್ನು ಕುರಿತು ಬರೆಯಬೇಕು; ಅದುಜನರಿಗೆ ತಲುಪಬೇಕು.*
/
==================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ