*==ಜ್ಞಾನ ಮಂದಿರ==*
*ದೇಶದ ಅತೀ ಕಿರಿಯ ಐಪಿಎಸ್ ಅಧಿಕಾರಿ ನೂರುಲ್ ಹಸನ್*
==============
*ಹೈದರಾಬಾದ್, ಫೆ.19: ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ನೂರುಲ್ ಹಸನ್ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಧರ್ಮಮಾಬಾದ್ ವಿಭಾಗದ ಎಸಿಪಿ ಆಗಿ ನೇಮಕಗೊಂಡಿದ್ದಾರೆ.*
================
*22 ವರ್ಷ ವಯಸ್ಸಿನ ನೂರುಲ್ ಹಸನ್ ಉತ್ತರ ಪ್ರದೇಶದ ಪೀಲಿಬೆತ್ ಜಿಲ್ಲೆಯವರಾಗಿದ್ದಾರೆ. ಅವರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿ ವರೆಗೆ ವಿದ್ಯಾರ್ಜನೆ ಮಾಡಿ, ನಂತರ ತಮ್ಮ ತಂದೆ ಜೊತೆಗೆ ರಾಯ್ಬರೇಲಿಗೆ ಹೋದರು ಮತ್ತು ಅಲ್ಲಿ ಹಿಂದಿ ಮಾಧ್ಯಮದ ಮೂಲಕ ಇಂಟರ್ಮೀಡಿಯೇಟ್ ಅನ್ನು ಅಧ್ಯಯನ ಮಾಡಿದರು. ನಂತರ, ಬಿ.ಟೆಕ್ ಗಾಗಿ 2009 ರಲ್ಲಿ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯವನ್ನು ಸೇರಿದರು. AMU ನಲ್ಲಿ ನಡೆಸಿದ ಅಧ್ಯಯನದ ಸಮಯದಲ್ಲಿ ಅವರು ಇಂಗ್ಲೀಷ್ ಭಾಷೆಯಲ್ಲಿ ಅವರ ಕುಶಲತೆಯನ್ನು ಸುಧಾರಿಸಿದರು. ಈ ಸಮಯದಲ್ಲಿ ನೂರುಲ್ ಹಸನ್ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಕುರಿತಾದ ಅಭಿಪ್ರಾಯಗಳನ್ನು ವಿನಿಮಯ ಮಾಡಲು ಅವರ 10 ಸ್ನೇಹಿತರ ಜೊತೆಗೆ ಸೇರಿ ಫೋರಂ ಒಂದನ್ನು ಸ್ಥಾಪಿಸಿದರು. ಇದರಲ್ಲಿ ಅವರು ಅಣಕು ಸಂದರ್ಶನಗಳನ್ನು ನಡೆಸುತ್ತಿದ್ದರು.*
=============
*ತದನಂತರ ನೂರುಲ್ ಹಸನ್ 14 ತಿಂಗಳುಗಳ ಕಾಲ ಸೀಮೆನ್ಸ್ ಕಂಪನಿಯಲ್ಲಿ ಪರಮಾಣು ಶಕ್ತಿ ಆಯೋಗದಲ್ಲಿ ಸೇವೆ ಸಲ್ಲಿಸಿದರು.*
=============
*2013 ರಲ್ಲಿ ಅವರು ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಗೆ (ಸಿಎಸ್ಇ) ಸಿದ್ಧತೆಗಳನ್ನು ಪ್ರಾರಂಭಿಸಿದರು. ನೂರುಲ್ ಹಸನ್ ಯುಪಿಎಸ್ಸಿ ಸಿಇಇ-2014 ರಲ್ಲಿ 625 ನೇ ರ್ಯಾಂಕ್ ಪಡೆದರು.*
==============
*ಹಿಂದಿ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದರೂ ಕೂಡ ನೂರುಲ್ ಹಸನ್ ಈಗ ಇಂಗ್ಲೀಷನ್ನು ನಿರರ್ಗಳವಾಗಿ ಮಾತನಾಡ ಬಲ್ಲರು. ಇಂಗ್ಲೀಷ್ ಗೊತ್ತಿಲ್ಲ ಎಂದು ಆತ್ಮ ವಿಶ್ವಾಸ ಕೈ ಬಿಡುವ ಯುವಕರಿಗೆ ನೂರುಲ್ ಹಸನ್ ಆದರ್ಶ ಮಾದರಿ.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ