ಶುಕ್ರವಾರ, ಫೆಬ್ರವರಿ 16, 2018

ಬ್ಯಾಕ್ಟೀರಿಯಾ ಮತ್ತು ವೈರಸ್‍ ಗಳ ನಡುವಿನ ವ್ಯತ್ಯಾಸವೇನು.. ?*

*==ಜ್ಞಾನ ಮಂದಿರ==*

*ಬ್ಯಾಕ್ಟೀರಿಯಾ ಮತ್ತು ವೈರಸ್‍ ಗಳ ನಡುವಿನ ವ್ಯತ್ಯಾಸವೇನು.. ?*
*=============*
*ನಾವು ಬ್ಯಾಕ್ಟೀರಿಯಾ ಅಥವಾ ವೈರಸ್ ಬಗ್ಗೆ ಮಾತನಾಡಿದಾಗ ಆ ಮಾತು ಯಾವುದೋ ರೋಗಕ್ಕೆ ಸಂಬಂಧಿಸಿದುದೆಂದು ತೆಗೆದುಕೊಳ್ಳಲಾಗುತ್ತದೆ. ಆದರೆ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳು ಒಂದಕ್ಕೊಂದು ಸಂಪೂರ್ಣವಾಗಿ ಭಿನ್ನವಾಗಿವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ರೋಗವನ್ನುಂಟು ಮಾಡುವುದಿಲ್ಲ. ಆದರೆ ಕೆಲವು ರೋಗವನ್ನುಂಟು ಮಾಡುತ್ತವೆ. ಕನಿಷ್ಟ ಎರಡು ಸಾವಿರ ಜಾತಿಯ ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ತಿಳಿದಿದೆ. ಅವುಗಳಲ್ಲಿ ಹೆಚ್ಚಿನವು ಸಹಾಯಕವೂ ಅಲ್ಲ ಅಥವಾ ಹಾನಿಕಾರಕವೂ ಅಲ್ಲ.*
================
*ಒಂದು ಬ್ಯಾಕ್ಟೀರಿಯಾಕ್ಕೆ ಒಂದೇ ಕೋಶವಿರುತ್ತದೆ. ಒಂದು ತೊಟ್ಟು ಹಾಲಲಲ್ಲಿ 1,0,000,000 ಬ್ಯಾಕ್ಟೀರಿಯಘಳು ಇರುತ್ತವೆಯೆಂದರೆ ನಿಮಗೆ ಆಶ್ಚರ್ಯವಾಗಬಹುದು. ಬ್ಯಾಕ್ಟೀರಿಯಾಗಳು ಎಲ್ಲೆಲ್ಲಿಯೂ ಇವೆ. ಏಕೆಂದರೆ ಬ್ಯಾಕ್ಟೀರಿಯಾಗಳು ಸಸ್ಯಗಳ ಸ್ವಲ್ಪ ಗುಣಗಳನ್ನೂ, ಪ್ರಾಣಿಗಳ ಸ್ವಲ್ಪ ಲಕ್ಷಣವನ್ನೂ ಹೊಂದಿರುತ್ತವೆ. ಅವುಗಳನ್ನು ಹೇಗೆ ವಗೀಕರಿಸಬೇಕೆಂಬುದರ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಬ್ಯಾಕ್ಟೀರಿಯಾವು ಅದರದೇ ಆದ ವರ್ಗಕ್ಕೆ ಸೇರಿದೆ. ಅನೇಕ ಬ್ಯಾಕ್ಟೀರಿಯಾಗಲೂ ವಿದಳನದಿಂದ ಪ್ರತ್ಯುತ್ಪಾದನೆ ಮಾಡುತ್ತವೆ. ಕೀಶವು ಅದೇ ಬಹಳ ಚಿಕ್ಕದಾಗಿದ್ದು ಎರಡಾಗಿ ಭಾಗವಾಗುತ್ತದೆ.*
================
*ವೈರಸ್‍ಗಳು ಬಹಳ ಸೂಕ್ಷ್ಮ ಜೀವಿಗಳಾಗಿದ್ದು ಬರೀ ಕಣ್ನಿನಿಂದ ನೋಡಲಾಗುವುದಿಲ್ಲ ಅವುಗಳನ್ನು ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದಿಂದ ನೋಡಬಹುದು, ಜೀವಂತ ಕೋಶಗಳೊಳಗೆ ಇದ್ದಾಗ ಮಾತ್ರ ವೈರಸ್‍ಗಳು ದ್ವಿಗುಣಗೊಂಡು ವೃದ್ದಿಸುತ್ತವೆ. ಜೀವಂತ ಕೊಶಗಳ ಹೊರಗಡೆ, ಅವುಗಳು ಯಾವುದೇ ರೀತಿಯಲ್ಲಿ ಬದಲಾವಣೆಯಾಗದೆ ಜೀವವಿಲ್ಲದಂತೆ ಕಾಣುತ್ತವೆ. ಮನುಷ್ಯ ಮತ್ತು ಪ್ರಾಣಿಗಳನ್ನು ಆಕ್ರಮಣ ಮಾಡುವ ವೈರಸ್‍ಗಳಿಗೆ ಪ್ರಾಣಿ ವೈರಸ್‍ಗಳೆಂದು ಹೆಸರು. ಸಸ್ಯ ವೈರಸ್‍ಗಳು ಸಸ್ಯಗಳನ್ನು ಆಕ್ರಮಿಸುತ್ತವೆ. ಮನುಷ್ಯ ಅಥವಾ ಪ್ರಾಣಿಗಳನ್ನು ಆಕ್ರಮಿಸುವ ವೈರಸ್‍ಗಳನ್ನು ಉಸಿರಾಟದಿಂದ ಎಳೆದುಕೊಳ್ಳಬಹುದು ಅಥವಾ ನುಂಗಬಹುದು ಅವುಗಳು ಚರ್ಮದ ರಂಧ್ರಗಳ ಮೂಲಕ ಕೂಡ ಪ್ರವೇಶಿಸುತ್ತವೆ. ಅವುಗಳಲ್ಲಿ ಕೆಲವು ಮನುಷ್ಯನಿಗೆ ಮಾರಕವಾಗಿರುತ್ತದೆ.*
===========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ