*##ಮಾಹಿತಿ ವೇದಿಕೆ##*
*ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರಶಸ್ತಿ ಹಿರಿಮೆ ಈ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ರಾಜ್ಯ ಕರ್ನಾಟಕ..!*
#################
*ಹೌದು ರಾಜ್ಯ ಸರ್ಕಾರದ ಹಿರಿಮೆಗೆ ಈಗ ಮೊತ್ತೊಂದು ಪ್ರಶಸ್ತಿ ಲಭಿಸಿದೆ ಈ ಪ್ರಶಸ್ತಿ ಪಡೆದ ಮೊದಲ ರಾಜ್ಯವಾಗಿ ನಮ್ಮ ಕರ್ನಾಟಕ ಗುರುತಿಸಿಕೊಂಡಿದೆ.*
################
*ಕೆಎಸ್ಆರ್‌ಟಿಸಿಗೆ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ರನ್ನರ್ ಅಪ್ ಪ್ರಶಸ್ತಿ ಲಭಿಸಿದ್ದು, ಐಆರ್‌ಯು ಅಂತಾರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಾಗಿ ಕೆಎಸ್‍ಆರ್‌ಟಿಸಿ ಹೊರಹೊಮ್ಮಿದೆ.*
##############
*ನವದೆಹಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಯದುವೀರ್ ಸಿಂಗ್ ಮಲ್ಲಿಕ್ ಮತ್ತು ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ಪ್ರಶಸ್ತಿ ಪ್ರದಾನ ಮಾಡಿದರು.*
###############
*ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸಣ್ಣ ಹಾಗೂ ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಯನ್ನು ಪ್ರಾರಂಭಿಸಿದ ಸಾರಿಗೆ ಸಂಸ್ಥೆ ಕೆಎಸ್‍ಆರ್‌ಟಿಸಿಯಾಗಿದ್ದು, ಪ್ರಸ್ತುತ 16 ನಗರಗಳಲ್ಲಿ ಒಟ್ಟು 795 ಬಸ್ಸುಗಳು ಕಾರ್ಯಾಚರಣೆ ನಡೆಸಯತ್ತಿವೆ. ಪ್ರತಿದಿನ ಸರಾಸರಿ 4.4 ಲಕ್ಷ ಪ್ರಯಾಣಿಕರು ನಗರ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿಗಮದ ಈ ಉಪ ಕ್ರಮಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ರನ್ನರ್ ಅಪ್ ಪ್ರಶಸ್ತಿ ಲಭಿಸಿದೆ.*
###############
*ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರು ಜಗತ್ತಿನ ಉತ್ತಮ ಉಪ ಕ್ರಮಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯ ಅಂತಿಮ ಸುತ್ತಿಗೆ ಕೆಎಸ್‍ಆರ್‌ಟಿಸಿಯ ಸದರಿ ಉಪ ಕ್ರಮ ಒಳಗೊಂಡಂತೆ ಜಗತ್ತಿನ 15 ಉಪ ಕ್ರಮಗಳು ಆಯ್ಕೆಯಾಗಿದ್ದವು. ಅದರಲ್ಲಿ ಮಾಲ್ಟಾ ದೇಶದ ಸಾರ್ವಜನಿಕ ಸಾರಿಗೆ ವಿಜೇತರಾಗಿದ್ದಾರೆ. ಒಮನ್ ಮತ್ತು ಕೆಎಸ್‍ಆರ್‌ಟಿಸಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿವೆ.*
################
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ