ಗುರುವಾರ, ಫೆಬ್ರವರಿ 22, 2018

ಡೇ ಸ್ಪೆಷಲ್‌: ವರ್ಲ್ಡ್‌ ಥಿಂಕಿಂಗ್‌ ಡೇ*

*==ಜ್ಞಾನ ಮಂದಿರ==*

*ಡೇ ಸ್ಪೆಷಲ್‌: ವರ್ಲ್ಡ್‌ ಥಿಂಕಿಂಗ್‌ ಡೇ*
==============
*ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವದಾದ್ಯಂತ ವರ್ಲ್ಡ್‌ ಥಿಂಕಿಂಗ್‌ ಡೇ ಸೆಲೆಬ್ರೇಟ್‌ ಮಾಡಲಾಗುತ್ತದೆ. ಇದನ್ನು ಸ್ಕೌಟ್‌ ಮತ್ತು ಗೈಡ್‌ ಸಂಘದ ವತಿಯಿಂದ ಎಲ್ಲಾ ಗರ್ಲ್‌ ಗೈಡ್‌ ಮತ್ತು ಗರ್ಲ್‌ ಸ್ಕೌಟ್ಸ್‌ಗಾಗಿ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಗರ್ಲ್‌ ಗೈಡ್‌ ಮತ್ತು ಸ್ಕೌಟ್‌ಗಳನ್ನು ಸಹೋದರತ್ವ ಭಾವನೆಯಿಂದ ಜಾಗತಿಕ ಮಾರ್ಗದರ್ಶಕರಾಗಿ ಯೋಚಿಸಬೇಕೆಂಬುದು ಈ ದಿನದ ಉದ್ದೇಶವಾಗಿದೆ.*
==============
*ವರ್ಲ್ಡ್‌ ಅಸೋಸಿಯೇಷನ್‌ ಗರ್ಲ್‌ ಗೈಡ್ಸ್‌ ಮತ್ತು ಗರ್ಲ್‌ ಸ್ಕೌಟ್ಸ್‌ ಪ್ರತಿ ವರ್ಷ ವಿಶ್ವ ಥಿಂಕಿಂಗ್‌ ಡೇ ಪ್ರಯುಕ್ತ ಒಂದು ಪ್ರಮುಖ ಅಂತಾರಾಷ್ಟ್ರೀಯ ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು ಈ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಇತರ ದೇಶಗಳ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ಪ್ರಶಂಸಿಸುವುದು ಈ ಸಂಘದ ಗುರಿಯಾಗಿದೆ.*
==============
*ಪ್ರಪಂಚದಾದ್ಯಂತ ಇರುವ ಗರ್ಲ್‌ ಗೈಡ್ಸ್‌ ಮತ್ತು ಸ್ಕೌಟ್ಸ್‌ ಗೆ ಸಹಾಯ ಮಾಡಲು ಹಾಗೂ ಯಾವ ಪ್ರದೇಶದಲ್ಲಿ ಈ ಗರ್ಲ್ಸ್ ಗೈಡ್ಸ್‌ ಮತ್ತು ಸ್ಕೌಟ್‌ ಇಲ್ಲವೋ ಅಲ್ಲಿ ಸಂಘವನ್ನು ಸ್ಥಾಪಿಸಲು ಈ ದಿನದಲ್ಲಿ ನಿಧಿಗಾಗಿ ದೇಣಿಗೆ ಸಂಗ್ರಹಿಸಲಾಗುತ್ತದೆ. ಫೆಬ್ರವರಿ 22 ಸ್ಕೌಟಿಂಗ್‌ ಮತ್ತು ಗೈಡಿಂಗ್‌ನ ಸ್ಥಾಪಕರಾದ ರಾಬರ್ಟ್‌ ಬೇಡನ್‌ ಪೊವೆಲ್‌ ಅವರ ಜನ್ಮದಿನವಾದ್ದರಿಂದ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಕೆಲ ಸ್ಕೌಟ್ಸ್‌ ಸಂಘಗಳು ಇದನ್ನು ಬಿ.ಪಿ. ದಿನ ಅಥವಾ ಸಂಸ್ಥಾಪಕರ ದಿನವೆಂದು ಆಚರಿಸುತ್ತವೆ. 1999ರಲ್ಲಿ, ಐರ್ಲೆಂಡ್ನಲ್ಲಿ ನಡೆದ 30 ನೇ ವಿಶ್ವ ಸಮ್ಮೇಳನದಲ್ಲಿ, ಈ ವಿಶೇಷ ದಿನದ ಜಾಗತಿಕ ಅಂಶವನ್ನು ಒತ್ತಿ ಹೇಳಲು ಥಿಂಕಿಂಗ್‌ ಡೇನಿಂದ ವಲ್ರ್ಡ ಥಿಂಕಿಂಗ್‌ ಡೇ ಗೆ ಹೆಸರನ್ನು ಬದಲಾಯಿಸಲಾಯಿತು.*
===============
   ==ಮಾಹಿತಿ ವೇದಿಕೆ==

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ