ಮಂಗಳವಾರ, ಫೆಬ್ರವರಿ 20, 2018

ಚೀನಾದ ’ಒನ್ ಬೆಲ್ಟ್ ಒನ್ ರೋಡ್’ಗೆ ಪರ್ಯಾಯ ಯೋಜನೆ ತರಲು ಮುಂದಾದ 4 ರಾಷ್ಟ್ರ*

*==ಜ್ಞಾನ ಮಂದಿರ==*

*ಚೀನಾದ ’ಒನ್ ಬೆಲ್ಟ್ ಒನ್ ರೋಡ್’ಗೆ ಪರ್ಯಾಯ ಯೋಜನೆ ತರಲು ಮುಂದಾದ 4 ರಾಷ್ಟ್ರ*
*=================*
*ನವದೆಹಲಿ: ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ಗೆ ಪರ್ಯಾಯವಾಗಿ ಭಾರತ ಸೇರಿದಂತೆ ನಾಲ್ಕು ದೇಶಗಳು ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ ಎನ್ನಲಾಗಿದೆ.*
================
*ಭಾರತ, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಜಪಾನ್ ಒಂದಾಗಿ ಪ್ರಾದೇಶಿಕ ಮೂಲಸೌಕರ್ಯ ಯೋಜನೆಯನ್ನು ಆರಂಭಿಸಲು ನಿರ್ಧರಿಸಿವೆ ಎಂದು ಆಸ್ಟ್ರೇಲಿಯಾದ ಪೈನಾನ್ಷಿಯಲ್ ರಿವ್ಯೂ ವರದಿ ತಿಳಿಸಿದೆ.*
==============
*ಚೀನಾ ‘ಒನ್ ಬೆಲ್ಟ್ ಒನ್ ರೋಡ್’ ಯೋಜನೆಯ ಮೂಲಕ ತನ್ನದೇ ಅಧಿಪತ್ಯ ಸ್ಥಾಪನೆಗೆ ಮುಂದಾಗಿದೆ, ಹೀಗಾಗೀ ಅದರ ಸೊಕ್ಕನ್ನು ಮುರಿಯಲು ನಾಲ್ಕು ರಾಷ್ಟ್ರಗಳು ಪರ್ಯಾಯ ಯೋಜನೆಗೆ ಮುಂದಾಗಿವೆ ಎನ್ನಲಾಗಿದೆ.*
==============
*ಬಂದರಿಗೆ ರಸ್ತೆ ಸಂಪರ್ಕ ಕಲ್ಪಿಸುವುದು ಅಥವಾ ರೈಲು ಸಂಪರ್ಕ ಹೀಗೆ ಯಾವುದಾದರೂ ಮುಲಸೌಕರ್ಯ ಯೋಜನೆಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ