*==ಜ್ಞಾನ ಮಂದಿರ==*
*ವಿಶ್ವ ಟೆನಿಸ್ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ಹಿರಿಯ ಆಟಗಾರ ಫೆಡರರ್*
*==============*
*ರೋಟರ್‌ಡಮ್, ಫೆ.17:* *ರೋಡರ್‌ಡಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ ಹಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.*
*===========*
*36ರ ಹರೆಯದ ಫೆಡರರ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಂಡ್‌ನ ರಾಬಿನ್ ಹಾಸೆ ಅವರನ್ನು 4-6, 6-1, 6-1 ಸೆಟ್‌ಗಳಿಂದ ಮಣಿಸಿದ್ದಾರೆ. ಈ ಮೂಲಕ ವಿಶ್ವ ರ್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್‌ರನ್ನು ಹಿಂದಿಕ್ಕಿ ನಂ.1 ಸ್ಥಾನ ತಲುಪಿದ್ದಾರೆ.*
=============
*ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಫೆಡರರ್ ಆ್ಯಂಡ್ರೆ ಅಗಾಸ್ಸಿ ದಾಖಲೆಯನ್ನು ಮುರಿದರು. 2003ರಲ್ಲಿ ಅಗಾಸ್ಸಿ ತನ್ನ 33ನೇ ಹರೆಯದಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದರು*
*============*
*ಫೆಡರರ್ 2012ರ ಅಕ್ಟೋಬರ್ ಬಳಿಕ ನಂ.1 ಸ್ಥಾನಕ್ಕೆ ವಾಪಸಾಗಿದ್ದಾರೆ. 2004ರ ಫೆಬ್ರವರಿಯಲ್ಲಿ ಮೊದಲ ಬಾರಿ ಅಗ್ರ ಸ್ಥಾನ ತಲುಪಿದ್ದರು.*
*=============*
*‘‘ನಂ.1 ಸ್ಥಾನಕ್ಕೇರುವುದು ಟೆನಿಸ್‌ನಲ್ಲಿನ ಮಹತ್ವದ ಸಾಧನೆ. ನಮಗೆ ವಯಸ್ಸಾಗಿದ್ದರೆ ಅಗ್ರಸ್ಥಾನಕ್ಕೇರಲು ಹೆಚ್ಚು ಶ್ರಮಿಸಬೇಕಾಗುತ್ತದೆ. 1998ರಲ್ಲಿ ಮೊದಲ ಬಾರಿ ವೈಲ್ಡ್‌ಕಾರ್ಡ್ ಪಡೆದು ಟೆನಿಸ್‌ಗೆ ಪ್ರವೇಶಿಸಿದ ನನ್ನ ವೃತ್ತಿಜೀವನ ಸುದೀರ್ಘವಾದುದು. ಇದೀಗ ನನ್ನ ಕನಸು ನನಸಾಗಿದೆ’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.*
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ