ಮಂಗಳವಾರ, ಫೆಬ್ರವರಿ 27, 2018

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( TET ) ಉಪಯುಕ್ತ ಮಾಹಿತಿ*

*==ಮಾಹಿತಿ ವೇದಿಕೆ==*

  *ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( TET ) ಉಪಯುಕ್ತ ಮಾಹಿತಿ*
##################
*ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳ ಸುಧಾರಣೆ*
÷÷÷÷÷÷÷÷÷÷÷÷÷÷÷÷
*1).ಮಾಹಿತಿ ಸಂವಹನ ತಂತ್ರಜ್ಞಾನ (ಐ ಸಿಟಿ) ಎಂದರೇನು ?*
••••••••••••••••••••
*2) ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ (ಐ ಸಿ ಟಿ) ದ ಪಾತ್ರ.ಕಾರ್ಯದಲ್ಲಿ ತಂತ್ರಜ್ಞಾನಗಳುರೆಡಿಯೋ ಮತ್ತು ಟೆಲಿವಿಷನ್ರೇಡಿಯೋ ಮತ್ತು ಟಿ.ವಿ ಯ ಪ್ರಸಾರ ಶಿಕ್ಷಣದಲ್ಲಿ ಹೇಗೆ ಉಪಯೋಗವಾಗಿದೆ?*
••••••••••••••••••••••
*3)ಐಸಿಟಿ ಯು ಕಲಿಕೆಯ ವಾತವರಣವನ್ನು ಕಲಿಯುವವನ ಕೇಂದ್ರೀಕೃತ ವಾಗಿಸಲು ಹೇಗೆ ಸಹಾಯಕ ವಾಗುವುದು ಸಾಧ್ಯ ?*
•••••••••••••••••••••••
*4)ಐಸಿಟಿ ಜೊತೆಗೂಡಿದ ಕಲಿಕೆಯು ಕಾರ್ಯ ಸಾಧುವೆಯೇ?*
•••••••••••••••••••••
*ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವಲ್ಲಿ ನಿಮ್ಮಶಾಲೆಗೆ ಸರಿ ಹೊಂದುವ ತಂತ್ರಜ್ಞಾನ ಉಪಕರಣದ ಆಯ್ಕೆಯು ನೀವು ತೆಗೆದುಕೊಳ್ಳುವ ಪ್ರಮುಖ ಹೆಜ್ಜೆಯಾಗಿದೆ. ಈ ವಿಭಾಗವು ನೀವು ಬಳಸಬಹುದಾದ ತಂತ್ರಜ್ಞಾನಗಳ ಮಾಹಿತಿಯನ್ನು ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ವನ್ನು ಶಿಕ್ಷಣದಲ್ಲಿ ಉಪಯೋಗಿಸುವಾಗ ಎದುರಾಗುವ ಸವಾಲುಗಳನ್ನು ಕುರಿತು ತಿಳಿಸುವುದು.*
÷÷÷÷÷÷÷÷÷÷÷÷÷÷÷
*ಮಾಹಿತಿ ಸಂವಹನ ತಂತ್ರಜ್ಞಾನ (ಐ ಸಿಟಿ) ಎಂದರೇನು ?*
##############
*ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ), ಈ ಶಬ್ದ ವು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಂಕ್ಷಿಪ್ತ ರೂಪ.  ಇದು ಮಾಹಿತಿಯನ್ನು ವಿದ್ಯುನ್ಮಾನದ ಮೂಲಕ  ಪ್ರಸರಿಸಲು, ಸಂಗ್ರಹಿಸಲು, ನಿರ್ಮಿಸಲು, ಹಂಚಲು ಮತ್ತು ವಿನಿಮಯ ಮಾಡಿಕೊಳ್ಳವ ತಂತ್ರಜ್ಞಾನದ ರೂಪಗಳನ್ನು ಸೂಚಿಸುವುದು.  ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ದ ಈ ಸ್ಥೂಲ ನಿರೂಪಣೆಯು, ರೆಡಿಯೋ, ಟೆಲಿವಿಷನ್, ವಿಡಿಯೋ, ಡಿವಿಡಿ, ದೂರವಾಣಿ (ಸ್ಥಿರ ಮತ್ತು ಮೊಬೈಲು ಎರಡೂ), ಉಪಗ್ರಹ ವ್ಯವಸ್ಥೆಗಳು. ಕಾಂಪ್ಯೂಟರ್ ಮತ್ತು ಅಂತರ್ ಜಾಲ, ಸಾಫ್ಟ ವೇರ್ ಹಾಗೂ ಹಾರ್ಡವೆರ್ ಗಳನ್ನು ಒಳಗೊಂಡಿದೆ. ಇದಲ್ಲದೆ ಇದಕ್ಕೆ ಸಂಬಂಧಿಸಿದ ಉಪಕರಣಗಳು ಮತ್ತು ತಂತ್ರಜ್ಞಾನಗಳಾದ  ವಾಯ್ಸ ಕಾನ್ ಫರೆನ್ಸ , ಈ- ಮೇಲ್ ಮತ್ತು  ಬ್ಲಾಗುಗಳನ್ನು ಸಹ ಹೊಂದಿರುವುದು. ಈ” ಮಾಹಿತಿ ಯುಗದ  ಶೈಕ್ಷಣಿಕ ಉದ್ದೇಶಗಳನ್ನು ಗಮನಿಸಿ  ಹೊಸ ಮಾದರಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು (ಐಸಿಟಿ) ಶಿಕ್ಷಣದಲ್ಲಿ ಅಳವಡಿಸಬೇಕಿದೆ. ಇದನ್ನು ಪರಿಣಾಮಕಾರಿಯಾಗಿ ಸಾಧಿಸಲು ಶೈಕ್ಷಣಿಕ ಯೋಜಕರು, ಪ್ರಾಂಶುಪಾಲರುಗಳು, ಶಿಕ್ಷಕರು ಮತ್ತು ತಂತ್ರಜ್ಞಾನ ಪರಿಣಿತರು ಅನೇಕ ರಂಗಗಳಲ್ಲಿ ಅಂದರೆ ತಂತ್ರಜ್ಞಾನ, ತರಬೇತಿ, ಆರ್ಥಿಕ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ದೃಢ ನಿರ್ಧಾರ ತೆಗೆದು  ಕೊಳ್ಳಬೇಕಿದೆ. ಅನೇಕರಿಗೆ ಇದು ಹೊಸ ಭಾಷೆಯನ್ನು ಕಲಿಯುವುದಷ್ಟೆ ಅಲ್ಲ , ಹೊಸ ಭಾಷೆಯಲ್ಲಿ ಬೋಧಿಸಲು ಕಲಿಯ ಬೇಕಾಗಿರುವಷ್ಟು ಸಂಕೀರ್ಣವಾಗಿದೆ. ಈ ವಿಭಾಗವು ಆ ಉಪಕರಣಗಳ  ಮೇಲೆಯೇ  ದೃಷ್ಟಿಯನ್ನು  ಕೇಂದ್ರೀಕರಿಸಿದೆ. ರಾಷ್ಟ್ರಗಳನ್ನು ಸೇರಿಸುವ ಉಪಗ್ರಹದಿಂದ ಹಿಡಿದು ತರಗತಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡುವ ಯಂತ್ರಗಳವರೆಗೆ ಇದರ ವ್ಯಾಪ್ತಿ ಇದೆ. ಇದು  ಶಿಕ್ಷಣ ನೀಡುವ, ಶಿಕ್ಷಣ ನೀತಿ ನಿರೂಪಿಸುವ, ಪಠ್ಯ ಕ್ರಮ ಅಭಿವೃದ್ಧಿಪಡಿಸುವ ಮತ್ತು  ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ)  ದ ಉಪಕರಣಗಳು, ಪಾರಿಭಾಷಿಕಗಳು ಮತ್ತು ಸಿಸ್ಟಮ್ ಗಳ  ಗೋಜಲಿನಿಂದ ಹೊರ ಬರಲಾರದ ಇತರ ಅನೇಕರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ.*
#################

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ