ಶುಕ್ರವಾರ, ಫೆಬ್ರವರಿ 16, 2018

ವಿಶ್ವ ಸುಸ್ಥಿರ ಅಭಿವೃದ್ಧಿ ಸಮಿತ್ 2018’ಗೆ ಮೋದಿ ಚಾಲನೆ*

*==ಜ್ಞಾನ ಮಂದಿರ==*

*ವಿಶ್ವ ಸುಸ್ಥಿರ ಅಭಿವೃದ್ಧಿ ಸಮಿತ್ 2018’ಗೆ ಮೋದಿ ಚಾಲನೆ*
*==============*
*ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನವದೆಹೆಲಿಯ ವಿಜ್ಞಾನ ಭವನದಲ್ಲಿ ‘ವಿಶ್ವ ಸುಸ್ಥಿರ ಅಭಿವೃದ್ಧಿ ಸಮಿತ್ 2018’ನನ್ನು ಉದ್ಘಾಟನೆಗೊಳಿಸಿದರು. ಎನರ್ಜಿ ಆಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಮೂರು ದಿನಗಳ ಸಮಿತ್‌ನ್ನು ಆಯೋಜಿಸಿದೆ.*
==========
*ಈ ಸಮಿತ್‌ನಲ್ಲಿ ವಿಶ್ವದ 41 ದೇಶಗಳು ಭಾಗಿಯಾಗಲಿದ್ದು, ಇದು ವಿವಿಧ ಷೇರುದಾರರನ್ನು ಸುಸ್ಥಿರ ಅಭಿವೃದ್ಧಿ, ಇಂಧನ, ಪರಿಸರ ವಲಯದ ಒಂದು ವೇದಿಕೆಯಲ್ಲಿ ತರಲಿದೆ. ಸಚಿವರಾದ ಡಾ.ಹರ್ಷವರ್ಧನ್, ಸುರೇಶ್ ಪ್ರಭು, ಹರ್‌ದೀಪ್ ಪುರಿ, ಜಯಂತ್ ಸಿನ್ಹಾ ಇದರಲ್ಲಿ ಭಾಗಿಯಾಗಲಿದ್ದಾರೆ.*
============
*ಹವಾಮಾನ ವೈಪರೀತ್ಯದಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಮಿತ್ ಬೆಳಕು ಚೆಲ್ಲಲಿದೆ. ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಬಳಸಬಹುದಾದ ಸುಧಾರಿತ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ‘ಗ್ರೀನೋವೇಶನ್ ಎಕ್ಸಿಬಿಷನ್’ ಜರುಗಲಿದೆ.*
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ