*==ಮಾಹಿತಿ ವೇದಿಕೆ==*
*ಖ್ಯಾತ ವಾಸ್ತುಶಿಲ್ಪಿಯಿಂದ 19 ರೈಲು ನಿಲ್ದಾಣಗಳಿಗೆ ಉಚಿತ ವಿನ್ಯಾಸ*
===============
*ನವದೆಹಲಿ: ಖ್ಯಾತ ವಾಸ್ತುಶಿಲ್ಪಿ ಹಫೀಝ್ ಕಾಂಟ್ರ್ಯಾಕ್ಟರ್ ಅವರು ದೇಶದ 19 ರೈಲು ನಿಲ್ದಾಣಗಳ ವಿನ್ಯಾಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ರೈಲ್ವೇ ಇಲಾಖೆಗೆ ತಿಳಿಸಿದ್ದಾರೆ.*
===============
*ರೈಲ್ವೇ ಇಲಾಖೆಯು ದೇಶದ 600 ರೈಲು ನಿಲ್ದಾಣಗಳನ್ನು ಮರು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ನಾಲ್ಕು ವಾಸ್ತು ಶಿಲ್ಪಿಗಳು ಇದಕ್ಕೆ ವಿನ್ಯಾಸ ಮಾಡಿಕೊಡಲು ಮುಂದಾಗಿದ್ದಾರೆ. ಅದರಲ್ಲಿ ಖ್ಯಾತ ವಾಸ್ತುಶಿಲ್ಪಿ ಹಫೀಝ್ ಕಾಂಟ್ರ್ಯಾಕ್ಟರ್ ಕೂಡ ಒಬ್ಬರಾಗಿದ್ದಾರೆ.*
############
*ಮುಂಬಯಿಯ ದಾದರ್, ಪರೆಲ್, ವಡಲ, ಬಾಂದ್ರ, ಖಾರ್ ರೈಲು ನಿಲ್ದಾಣಗಳಿಗೆ ಹಫೀಝ್ ವಿನ್ಯಾಸ ಮಾಡಿಕೊಡಲಿದ್ದಾರೆ.*
==============
*ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಲು ದೇಶದ ವೃತ್ತಿಪರರಿಗೆ ನಾವು ಬಹಿರಂಗ ಆಹ್ವಾನವನ್ನು ನೀಡಿದ್ದೇವೆ ಎಂದು ಭಾರತೀಯ ರೈಲ್ವೇ ಅಭಿವೃದ್ಧಿ ಕಾರ್ಪೋರೇಶನ್ ಮುಖ್ಯಸ್ಥ ಸಂಜಿವ್ ಕುಮಾರ್ ಲೋಹಿಯಾ ಹೇಳಿದ್ದಾರೆ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ