ಮಂಗಳವಾರ, ಫೆಬ್ರವರಿ 20, 2018

ಆಯೋಗ, ಮಂಡಳಿ ಹಾಗೂ ಇತರ ಪ್ರಮುಖ ಸ್ಥಾನಗಳು*

*==ಜ್ಞಾನ ಮಂದಿರ==*

*ಆಯೋಗ, ಮಂಡಳಿ ಹಾಗೂ ಇತರ ಪ್ರಮುಖ ಸ್ಥಾನಗಳು*
*=============*
*1. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್:*
============
*ಇದು ಸ್ವತಂತ್ರ ಹುದ್ದೆ. ಆಡಳಿತಾತ್ಮಕ ಮತ್ತು ಲೆಕ್ಕ ಪತ್ರಗಳಲ್ಲಿ ಅನುಭವವಿರುವ ವ್ಯಕ್ತಿಯನ್ನು ರಾಷ್ಟ್ರಪತಿಗಳು ಈ ಹುದ್ದೆಗೆ ನೇಮಿಸುತ್ತಾರೆ. ಈ ಹುದ್ದೆಯ ಅಧಿಕಾರವಧಿ 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಇವರು ಸಾರ್ವಜನಿಕ ಹಣಕಾಸಿನ ಪೋಷಕರಾದ್ದರಿಂದ, ಲೆಕ್ಕ ಪರಿಶೋಧನೆ ಮೂಲಕ ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಕೇಂದ್ರದ ಹಣಕಾಸು ಲೆಕ್ಕದ ವರದಿಯನ್ನು ರಾಷ್ಟ್ರಪತಿಗಳಿಗೂ, ರಾಜ್ಯದ ಹಣಕಾಸಿನ ಲೆಕ್ಕದ ವರದಿಯನ್ನು ಆಯಾ ರಾಜ್ಯದ ರಾಜ್ಯಪಾಕಲರಿಗೆ ಸಲ್ಲಿಸುತ್ತಾರೆ.*
================
*2. ಅಟಾರ್ನಿ ಜನರಲ್ :*
===========
*ಇವರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ರಾಷ್ಟ್ರಪತಿಯ ಸೂಚನೆಗಳಿಗೆ ಕಾನೂನು ಸಲಹೆ ನಿಡುವುದು, ಕೇಂದ್ರ ಸರ್ಕಾರದ ಶಾಸನೀಯ ವಿಷಯಗಳು ಹಾಗೂ ಶಾಸನೀಯ ಲಕ್ಷಣಗಳುಳ್ಳ ಇತರ ಕರ್ತವ್ಯವನ್ನು ನಿರ್ವಹಿಸುವುದು ಇವರ ಜವಾಬ್ದಾರಿ. ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಬೇಕಾದ ಅರ್ಹತೆಗಳು ಇವರಿಗಿರಬೇಕು. ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ಸಂಸತ್ತಿನಲ್ಲಿ ಮತ ಚಲಾವಣೆಯ ಅಧಿಕಾರವಿರುವುದಿಲ್ಲ.*
===============
*3. ರಾಜ್ಯಗಳ ಅಡ್ವೊಕೇಟ್ ಜನರಲ್ :*
==============
*ಹೈಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ಈ ಹುದ್ದೆಗೆ ರಾಜ್ಯದ ರಾಜ್ಯಪಾಲರು ನೇಮಕ ಮಾಡುತ್ತಾರೆ. ಇವರು ರಾಜ್ಯದ ಎರಡೂ ಸದನಗಳನ್ನು ಕುರಿತು ಮಾತನಾಡಬಹುದಾದರೂ, ಶಾಸಕಾಂಗಗಳಲ್ಲಿ ಮತ ಚಲಾಯಿಸುವ ಹಕ್ಕಿರುವುದಿಲ್ಲ.*
==============
*4. ಯೋಜನಾ ಆಯೋಗ :*
=================
*1950 ರಲ್ಲಿ ಕೇಂದ್ರ ಕ್ಯಾಬಿನೆಟ್‍ನ ನಿರ್ಣಯದ ಮೂಲಕ ಯೋಜನಾ ಆಯೋಗವನ್ನು ಅನುಷ್ಠಾನಗೊಳಿಸಲಾಯಿತು.ಇದು ಸಂವಿಧಾನವನ್ನು ಹೊರತುಪಡಿಸಿದ ಪ್ರತ್ಯೇಕ ವಿಭಾಗ. ಜವಾಹರ್‍ಲಾಲ್ ನೆಹರು ಯೋಜನಾ ಆಯೋಗದ ಪ್ರಥಮ ಅಧ್ಯಕ್ಷರಾಗಿದ್ದರು. ಪ್ರಧಾನಮಂತ್ರಿಗಳು ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.*
==============
*5. ಹಣಕಾಸು ಆಯೋಗ :*
=================
*ಸಂವಿಧಾನದ 280ನೇ ವಿಧಿ ಪ್ರಕಾರ 5 ವರ್ಷಕ್ಕೊಮ್ಮೆ ರಾಷ್ಟ್ರಪತಿಗಳು ಹಣಕಾಸು ಆಯೋಗವನ್ನು ರಚಿಸುತ್ತಾರೆ. ಇದರಲ್ಲಿ ಒಬ್ಬ ಅಧ್ಯಕ್ಷ ಹಾಗೂ 4 ಜನ ಸದಸ್ಯರಿರುತ್ತಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ಬಗ್ಗೆ ಸೂಕ್ತ ಸಲಹೆ ಕೊಡುವುದು ಹಣಕಾಸು ಆಯೋಗದ ಪ್ರಮುಖ ಕಾರ್ಯವಾಗಿರುತ್ತದೆ.*
================
*6. ಚುನಾವಣಾ ಆಯೋಗ :*
================
*ಸಂವಿಧಾನದ 324ನೇ ವಿಧಿ ಚುನಾವಣಾ ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಿದೆ. ಚುನಾವಣಾ ಆಯೋಗವು ರಾಷ್ಟ್ರಪತಿಗಳಿಂದ ನೇಮಕ ಮಾಡಲ್ಪಟ್ಟ ಮುಖ್ಯ ಚುನಾವನಾ ಆಯುಕ್ತರು ಮತ್ತು ಇನ್ನಿತರ ಇಬ್ಬರು ಆಯುಕ್ತರನ್ನೊಳಗೊಂಡಿರುತ್ತದೆ. ಇವರ ಅಧಿಕಾರವಧಿ 6 ವರ್ಷಗಳಾಗಿದ್ದು, ಒಂದು ವೇಳೆ ಅವಧಿ ಮುಗಿಯುವುದಕ್ಕೆ ಮೊದಲೇ 65 ವರ್ಷಗಳಾದರೆ ನಿವೃತ್ತಿಯಾಗಬೇಕಾಗುತ್ತದೆ. ಸಂಸತ್ತಿಗೆ, ರಾಜ್ಯ ಶಾಸಕಾಂಗಗಳಿಗೆ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆ ನಡೆಸುವುದು, ಉಸ್ತುವಾರಿ ನೋಡಿಕೊಲ್ಳುವುದು ಮತ್ತು ನಿಯಂತ್ರಿಸುವುದು ಇವರ ಮುಖ್ಯ ಕಾರ್ಯವಾಗಿರುತ್ತದೆ.*
================
*7. ಲೋಕಸೇವಾ ಆಯೋಗ :*
==============
*ಸಂವಿಧಾನದ 315ನೇ ವಿಧಿ ಕೇಂದ್ರ ಮತ್ತು ಪ್ರತಿಯೊಂದು ರಾಜ್ಯಗಳಿಗೂ ಒಂದು ಸೇವಾ  ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಿದೆ. ರಾಜ್ಯಗಳು ಒಪ್ಪಿದಲ್ಲಿ ಎರಡೂ ಅಥವಾ ಹೆಚ್ಚಿನ ರಾಜ್ಯಗಳಿಗೆ   ಒಂದೇ ಆಯೋಗವನ್ನು ರಚಿಸಬಹುದು. ಆಯೋಗವು ಅಧ್ಯಕ್ಷ ಮತ್ತು ಇನ್ನಿತರ ಸದಸ್ಯರನ್ನು ಒಳಗೊಂಡಿರುತ್ತದೆ.*
*ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ರಾಷ್ಟ್ರಪತಿಗಳು, ರಾಜ್ಯ ಆಯೋಗದ ಅಧ್ಯಕ್ಷರನ್ನು ರಾಜ್ಯಪಾಲರು ನೇಮಿಸುತ್ತಾರೆ. ಕೇಂದ್ರ ಆಯೋಗದ ಅಧ್ಯಕ್ಷರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ  ವಯಸ್ಸಿನವರಿಗೆ. ರಾಜ್ಯ ಆಯೋಗದ ಅಧಿಕಾರಾವಧಿ 6 ವರ್ಷ ಅಥವಾ 62 ವರ್ಷ ವಯಸ್ಸಿನವರಿಗೆ.* *ಸರ್ಕಾರಿ  ಸೇವೆಗಳಿಗೆ ನೇಮಕಾತಿ ಮಾಡಲಿಕ್ಕಾಗಿ ಸ್ಪರ್ದಾತ್ಮಕ ಪರಿಕ್ಷೆಗಳನ್ನು ನಡೆಸುವುದು ಮತ್ತು ಸಂದರ್ಶನ ಮಾಡುವುದು*
*ಇವರ ಮುಖ್ಯ ಕಾರ್ಯವಾಗಿರುತ್ತದೆ.*
==============
    *==ಜ್ಞಾನ ಮಂದಿರ==*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ