*==ಜ್ಞಾನ ಮಂದಿರ==*
*ವಿಶ್ವದ ಅತೀ ಚಿಕ್ಕ ಪೆನ್ಸಿಲ್ ತಯಾರಿಸಿದ ಕಲಾವಿದ*
=================
*ಹಲ್‌ದ್ವಾನಿ: ಉತ್ತರಾಖಂಡ ಹಲ್‌ದ್ವಾನದ ವ್ಯಕ್ತಿಯೊಬ್ಬರು ಜಗತ್ತಿನ ಅತೀ ಚಿಕ್ಕ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ಮಾಡಿದ್ದಾರೆ.*
===========
*ವೃತ್ತಿಯಲ್ಲಿ ಕಲಾವಿದರಾಗಿರುವ ಪ್ರಕಾಶ್ ಚಂದ್ರ ಉಪಧ್ಯಾಯ ಅವರು ಪೆನ್ಸಿಲ್ ತಯಾರಿಸಿದ್ದು, ಇದು 5 ಮಿಲಿ ಮೀಟರ್ ಉದ್ದ ಮತ್ತು 0.5 ಮಿಲಿ ಮೀಟರ್ ಅಗಲವಿದೆ.*
============
*ಮರದ ಸಿಂಗಲ್ ಪೀಸ್‌ನ್ನು ಡ್ರಿಲ್ ಮಾಡುವ ಮೂಲಕ ಪೆನ್ಸಿಲ್‌ನ್ನು ರಚಿಸಲಾಗಿದ್ದು, ಬಳಿಕ ಅದಕ್ಕೆ ಎಚ್.ಬಿ.ಲಿಡ್ ಅಂಟಿಸಲಾಗಿದೆ. ಇದರನ್ನು ತಯಾರಿಸಲು ಪ್ರಕಾಶ್ ಚಂದ್ರ ಅವರು 3ರಿಂದ 4 ಗಂಟೆ ತೆಗೆದುಕೊಂಡಿದ್ದಾರೆ.*
===========
*ಇದಕ್ಕೂ ಮೊದಲು 3x3x4 ಮಿಮಿ ಮೀಟರ್ ಅಳತೆಯ ಹನುಮಾನ್ ಚಾಲಿಸ ಮತ್ತು ಮಿನಿಯೇಚರ್ ಚರಕವನ್ನು ಅವರು ತಯಾರಿಸಿದ್ದರು.*
============
*ಇವರ ವಿಭಿನ್ನ ಸಾಧನೆಗೆ ಅಸಿಸ್ಟ್ ವರ್ಲ್ಡ್ ರೆಕಾರ್ಡ್ಸ್ ರಿಸರ್ಚ್ ಫೌಂಡೇಶನ್‌ನ ಪ್ರಶಸ್ತಿ ದೊರೆತಿದೆ.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ