*==ಜ್ಞಾನ ಮಂದಿರ==*
*ಕತರ್ ಓಪನ್: ಕ್ವಿಟೋವಾಗೆ ಚಾಂಪಿಯನ್ ಕಿರೀಟ*
*==============*
*ದೋಹಾ,ಫೆ.19: ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಕತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.*
===============
*ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕ್ವಿಟೋವಾ ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು 3-6, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.*
============
*ಕ್ವಿಟೋವಾ ದೋಹಾದಲ್ಲಿ ಎರಡನೇ ಬಾರಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ವೃತ್ತಿಜೀವನದಲ್ಲಿ 22ನೇ ಪ್ರಶಸ್ತಿ ತನ್ನದಾಗಿಸಿಕೊಂಡರು. ಸತತ 13 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಮುಂದುವರಿಸಿದ ಕ್ವಿಟೋವಾ ಈ ವಾರ ವಿಶ್ವದ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸಹಿತ ನಾಲ್ವರು ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಕತರ್ ಓಪನ್ ಫೈನಲ್ ತಲುಪಿದ್ದರು.*
==============
*2016ರ ಡಿಸೆಂಬರ್‌ನಲ್ಲಿ ಮನೆಯಲ್ಲಿದ್ದಾಗಲೇ ಅಪರಿಚಿತನಿಂದ ಕೈಗೆ ಚೂರಿ ದಾಳಿಗೊಳಗಾಗಿ ದೀರ್ಘ ಸಮಯ ಟೆನಿಸ್‌ನಿಂದ ದೂರ ಉಳಿದಿದ್ದ ಕ್ವಿಟೋವಾ ಇದೀಗ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.*
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ