*==ಜ್ಞಾನ ಮಂದಿರ==*
*ಮುಂದಿನ 5ವರ್ಷ ರಾಷ್ಟ್ರೀಯ ಹಾಕಿ ತಂಡದ ಪ್ರಾಯೋಜಕತ್ವ ವಹಿಸಲಿದೆ ಒರಿಸ್ಸಾ*
================
*ನವದೆಹಲಿ: ಮುಂದಿನ ಐದು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಹಾಕಿ ತಂಡಗಳ ಪ್ರಾಯೋಜಕತ್ವವನ್ನು ಒರಿಸ್ಸಾ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.*
==============
*ಒರಿಸ್ಸಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ಭಾರತೀಯ ಆಟಗಾರರ ನೂತನ ಜೆರ್ಸಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.*
==============
*‘ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳಿಗೆ ಬೆಂಬಲ ಮತ್ತು ಸಹಾಯ ಮಾಡುವ ಸಲುವಾಗಿ 5 ವರ್ಷಗಳ ಕಾಲ ಪ್ರಾಯೋಜಕತ್ವವನ್ನು ವಹಿಸುತ್ತೇವೆ. ಇದು ನಮಗೆ ಐತಿಹಾಸಿಕ ಹೆಜ್ಜೆಯಾಗಿದೆ. ಇದು ದೇಶಕ್ಕೆ ಒರಿಸ್ಸಾ ನೀಡುವ ಉಡುಗೊರೆ. ಇಂದಿನಿಂದ ಹಾಕಿ ತಂಡದಲ್ಲಿ ಒರಿಸ್ಸಾದ ಲೋಗೋ ಇರಲಿದೆ, ಇದಕ್ಕೆ ಪ್ರತಿಯೊಬ್ಬ ಒರಿಸಿಗರು ಹೆಮ್ಮೆ ಪಡಬೇಕು’ ಎಂದು ಪಟ್ನಾಯಕ್ ಹೇಳಿದ್ದಾರೆ.*
==============
*ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಕ್ರೀಡೆಗೆ ಪ್ರಾಯೋಜಕತ್ವವನ್ನು ನೀಡುತ್ತಿದೆ.*
=============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ