*###ಮಾಹಿತಿ ವೇದಿಕೆ###*
*ಆಸ್ಮಿತಾ ಯೋಜನೆ*
###########
*ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಂದರೆ 2018ರ ಮಾರ್ಚ್ 18ರಂದು ಆಸ್ಮಿತ ಎಂಬ ವಿಶೇಷ ಯೋಜನೆಗೆ ಚಾಲನೆ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದು ರಿಯಾಯ್ತಿದರದಲ್ಲಿ ಅಂದರೆ ಅಗ್ಗವಾಗಿ ಸ್ಯಾನಿಟರಿ ಪ್ಯಾಡ್‍ಗಳನ್ನು ಶಾಲಾ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ವಿತರಿಸುವ ಯೋಜನೆಯಾಗಿದೆ. ಈ ಯೋಜನೆಯಡಿ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಅಧ್ಯಯನ ನಡೆಸುವ ಶಾಲಾ ಬಾಲಕಿಯರು ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಕೆಟ್‍ಗಳನ್ನು ಕೇವಲ ಐದು ರೂಪಾಯಿ ವೆಚ್ಚದಲ್ಲ ಪಡೆಯಲಿದ್ದಾರೆ. ಅಂತೆಯೇ ಗ್ರಾಮೀಣ ಮಹಿಳೆಯರು 24 ರೂಪಾಯಿ ಹಾಗೂ 29 ರೂಪಾಯಿ ಸಬ್ಸಿಡಿ(subsidy) ದರದಲ್ಲಿ ಇದನ್ನು ಪಡೆಯಲಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಉಮೇದ್ ಹೆಸರಿನ ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನಾಧಾರ ಮಿಷನ್ ಎಂಬ ವಿಶೇಷ ನೋಡಲ್ ಏಜೆನ್ಸಿಯನ್ನು ನೇಮಕ ಮಡಿದ್ದು, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಹೊಣೆ ಈ ಸಂಸ್ಥೆಯದ್ದಾಗಿರುತ್ತದೆ. ಈ ಯೋಜನೆಯಡಿ, ಫಲಾನುಭವಿ ಬಾಲಕಿಯರಿಗೆ ಅಸ್ಮಿತಾ ಕಾರ್ಡ್‍ಗಳನ್ನು ವಿತರಿಸಲಾಗುವುದು. ಪಾಲ್ಗೊಳ್ಳುವ ಸ್ವಯಂಸೇವಾ ಗುಂಪುಗಳಗೆ ಈ ನ್ಯಾಪ್ಕಿನ್‍ಗಳನ್ನು ಪೂರೈಸುವ ಹೊಣೆಯನ್ನು ಮತ್ತು ಮಹಿಳೆಯರು ಹಾಗೂ ಬಾಲಕಿಯರಿಗೆ ಸಲಹಾ ಸೇವೆಯನ್ನು ಒದಗಿಸುವ ಕೆಲಸವನ್ನು ನಿಯೋಜಿಸಲಾಗುವುದು.*
#############
*ಸ್ವಸಹಾಯ ಗುಂಪುಗಳು ಇಂಥ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಪೂರೈಕೆದಾರರಿಂದಅಸ್ಮಿತಾ ಮೊಬೈಲ್ ಅಪ್ಲಿಕೇಶನ್ ಮೂಲಕ ಖರೀದಿಸಲು ಅವಕಾಶವಿದೆ. ಬಳಿಕ ಇವನ್ನು ಗ್ರಾಮೀಣ ಮಹಿಳೆಯರು ಹಾಗೂ ಬಾಲಕಿಯರಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತವೆ. ಸ್ವಸಹಾಯಗುಂಪುಗಳು ಪ್ರತಿ ಸ್ಯಾನಿಟರಿ ಪ್ಯಾಕ್ ಮೇಲೆ ಐದು ರೂಪಾಯಿ ಲಾಭವನ್ನು ಪಡೆಯುತ್ತವೆ. ಈ ಯೋಜನೆಯು ಋತುಸ್ರಾವದ ಅವಧಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ್ದಾಗಿದ್ದು, ಯುವತಿಯರಲ್ಲಿ ಮತ್ತು ಶಾಲಾ ಬಾಲಕಿಯರಲ್ಲಿ ನ್ಯಾಪ್ಕಿನ್ ಪ್ಯಾಡ್ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಜಾಗೃತಿಯನ್ನು ಮೂಡುಸುವಲ್ಲಿಯೂ ಸಹ ನೆರವಾಗಲಿದೆ. ಇದು ಶಾಲೆಗಳಲ್ಲಿ ಬಾಲಕಿಯರ ಗೈರುಹಾಜರಿಯನ್ನು ಕಡಿಮೆ ಮಾಡುವಲ್ಲೂ ಮಹತ್ವದ ಪಾತ್ರ ವಹಿಸಲಿದ್ದು, ಶಾಲೆಗಳಲ್ಲಿ ಬಾಲಕಿಯರ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಅಂತೆಯೇ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅದರಲ್ಲೂ ಮುಖ್ಯವಾಗಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಲು ನೆರವಾಗುತ್ತದೆ.*
÷÷÷÷÷÷÷÷÷÷÷÷
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ