*==ಜ್ಞಾನ ಮಂದಿರ==*
*ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ*
*============*
*ಬೆಂಗಳೂರು, ಫೆಬ್ರವರಿ 16: ಕನ್ನಡಿಗರ ಜೀವನದಿ ಕಾವೇರಿ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಒಲಿದಿದ್ದಾಳೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು- ತಮಿಳುನಾಡು ಪಾಲಿಗೆ ಕಹಿಯಾಗಿದ್ದರೆ, ಕರ್ನಾಟಕದ ಪಾಲಿಗೆ ಸಿಹಿಯಾಗಿದೆ.*
*==============*
*ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ನ್ಯಾ ದೀಪಕ್ ಮಿಶ್ರಾ ಅವರು ಅಂತಿಮ ತೀರ್ಪು ಓದಿದರು.*
===============
*ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬಂದಿದೆ.*
===============
*ಅಂತಿಮ ತೀರ್ಪಿನ ಮುಖ್ಯಾಂಶಗಳು:*
============
*ಕಾವೇರಿ ನೀರು ಹರಿದು ಹಂಚಿಕೊಳ್ಳುವ ಲೆಕ್ಕಾಚಾರ:
* *30 ಟಿಎಂಸಿ ಕೇರಳಕ್ಕೆ, 7 ಟಿಎಂಸಿ ಪುದುಚೇರಿಗೆ ಲಭಿಸಲಿದೆ.*
* *270 ಇಂದ 284 ಟಿಎಂಸಿ ಅಡಿಗೆ ಏರಿಕೆ ಕರ್ನಾಟಕಕ್ಕೆ ಭರ್ಜರಿ ಲಾಭ*
* *419 ಟಿಎಂಸಿ ಇಂದ 404 ಟಿಎಂಸಿಗೆ ಇಳಿಕೆ ತಮಿಳುನಾಡು.*
* *20 ಟಿಎಂಸಿ ಅಂತರ್ಜಲ ನೀರು ಪರಿಗಣಿಸಿ ಎಂದು ಸುಪ್ರೀಂಕೋರ್ಟ್ ಸೂಚನೆ.*
* *ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯ*
* *ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು*
* *ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.*
* *1892, 1924ರ ಒಪ್ಪಂದ ಸಂವಿಧಾನ ಬದ್ಧವಾಗಿದೆ.*
================
* *ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು: ಸುಪ್ರೀಂಕೋರ್ಟ್*
===========
* *4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.*
* *20ಟಿಎಂಸಿ ಅಡಿ ನೀರಿನ ಪೈಕಿ 10 ಟಿಎಂಸಿ ಅಂತರ್ಜಲ ನೀರು ಕರ್ನಾಟಕ ಬಳಕೆ ಮಾಡಬಹುದು. ಒಟ್ಟಾರೆ, ಬೆಂಗಳೂರಿನ ನೀರಿನ ದಾಹಕ್ಕೆ ಬೆಲೆ ಸಿಕ್ಕಿದ್ದು, ಪರೋಕ್ಷವಾಗಿ ಕಾವೇರಿ ಕೊಳ್ಳದ ಎಲ್ಲಾ ಪ್ರದೇಶಗಳಿಗೂ ಲಾಭವಾಗಿದೆ. ಈ ಎಲ್ಲಾ ಆದೇಶಗಳು ಮುಂದಿನ 15 ವರ್ಷಗಳ ಕಾಲಕ್ಕೆ ಅನ್ವಯವಾಗಲಿದೆ.*
==============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ