*==ಜ್ಞಾನ ಮಂದಿರ==*
*#ಮಹಿಳಾ ವಿಶೇಷತೆ#*
***********
*ಏಷ್ಯಾದಲ್ಲೇ ಅತೀ ಕಿರಿಯ ಸ್ನಾತಕೋತ್ತರ ಪದವೀಧರೆ ಎಂಬ ಹೆಗ್ಗಳಿಕೆ ಸಾಧಿಸಿದವರು ನೈನಾ ಜೈಸ್ವಾಲ್. 2000ದ ಮಾರ್ಚ್ 22ರಂದು ಹೈದರಾಬಾದ್ನಲ್ಲಿ ಜನಿಸಿದ ಅವರು, ಎಂಟನೇ ವಯಸ್ಸಿನಲ್ಲೇ ಬೋರ್ಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಹತ್ತನೇ ವಯಸ್ಸಿನಲ್ಲಿ ಸೇಂಟ್ ಮೇರಿಸ್ ಕಾಲೇಜಿನಿಂದ 12ನೇ ತರಗತಿ ಪೂರ್ಣಗೊಳಿಸಿದ್ದ ನೈನಾ, 13ನೇ ವಯಸ್ಸಿನಲ್ಲಿ ಭಾರತದ ಅತಿ ಕಿರಿಯ ಪತ್ರಿಕೋದ್ಯಮ ಪದವೀಧರೆಯಾದರು. 16ನೇ ವಯಸ್ಸಿನಲ್ಲೇ ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಹೈದರಾಬಾದ್ನಲ್ಲಿ ಪಿಎಚ್ಡಿ ಮಾಡುತ್ತಿರುವ ನೈನಾ ಬೋಯಿಂಗ್ 777 ವಿಮಾನಕ್ಕೆ ಜಗತ್ತಿನಲ್ಲೇ ಅತಿ ಕಿರಿಯ ವಯಸ್ಸಿನ ಕಮಾಂಡರ್ ಆದರು. ಓದಿನ ಜೊತೆಗೆ ಟಾಪ್ ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿರುವ ನೈನಾ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ*
*ಮಾಹಿತಿ ವೇದಿಕೆ*
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ