ಸೋಮವಾರ, ಫೆಬ್ರವರಿ 26, 2018

ಯಮುನೆಯ ಸ್ವಚ್ಛತೆಗಾಗಿ ಕೈಜೋಡಿಸಲಿವೆ ಕೇಂದ್ರ, ದೆಹಲಿ, ಯುಪಿ, ಹರಿಯಾಣ ಸರ್ಕಾರ*

*==ಮಾಹಿತಿ ವೇದಿಕೆ==*

*ಯಮುನೆಯ ಸ್ವಚ್ಛತೆಗಾಗಿ ಕೈಜೋಡಿಸಲಿವೆ ಕೇಂದ್ರ, ದೆಹಲಿ, ಯುಪಿ, ಹರಿಯಾಣ ಸರ್ಕಾರ*
==============
*ಮಥುರಾ: ಯಮುನಾ ನದಿಯ ಸ್ವಚ್ಛತಾ ಕಾರ್ಯಕ್ಕಾಗಿ ಕೇಂದ್ರ, ಉತ್ತರಪ್ರದೇಶ ಮತ್ತು ದೆಹಲಿ ಸರ್ಕಾರಗಳ ಸಹಕಾರವನ್ನು ಕೇಳಿರುವುದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.*
============
*ಬರ್ಸಾನದಲ್ಲಿ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಲತ್ತ್‌ಮಾರ್ ಹೋಳಿಯನ್ನು ಆಚರಿಸುವ ಸಲುವಾಗಿ ಯುಪಿ ಸರ್ಕಾರ ರಂಗೋತ್ಸವವನ್ನು ಆಯೋಜನೆಗೊಳಿಸಿದೆ.*
=============
*ಕೇಂದ್ರ, ಯುಪಿ, ದೆಹಲಿ ಮತ್ತು ಹರಿಯಾಣ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಯಮುನಾ ನದಿಯನ್ನು ಮಾಲಿನ್ಯಮುಕ್ತಗೊಳಿಸುತ್ತೇವೆ ಎಂದು ಖಟ್ಟರ್ ಹೇಳಿದ್ದಾರೆ.*
==============
*ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರೂ, ರಾಜ್ಯಗಳ ಜಂಟಿ ಸಹಕಾರದಿಂದ ಯಮುನೆ ಶುದ್ಧಳಾಗುತ್ತಾಳೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ