ಗುರುವಾರ, ಫೆಬ್ರವರಿ 22, 2018

ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿ ಇತಿಹಾಸ ಬರೆದ ಅವನಿ ಚತುರ್ವೇದಿ

*=

*ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿ ಇತಿಹಾಸ ಬರೆದ ಅವನಿ ಚತುರ್ವೇದಿ*
===============
*ಜಮ್ನಾಗರ್: ಏಕಾಂಗಿ ಹಾರಾಟ ನಡೆಸಿದ ಭಾರತದ ಮೊಟ್ಟ ಮೊದಲ ಮಹಿಳಾ ಫೈಟರ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ.*
===============
*ಗುಜರಾತಿನ ಜಮ್ನಾಗರ್‌ನಲ್ಲಿ ತರಬೇತಿ ಪಡೆಯುತ್ತಿರುವ ಅವನಿಯವರು ಮಿಗ್-21 ಬಿಸನ್‌ನನ್ನು ಏಕಾಂಗಿಯಾಗಿ ಹಾರಿಸಿದರು.*
===============
*ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್ ತಂಡದ ಮೂರು ಜನ ಸದಸ್ಯರಲ್ಲಿ ಅವನಿ ಕೂಡ ಒಬ್ಬರು. ಭಾವನಾ ಕಾಂತ್ ಮತ್ತು ಮೋಹನ ಸಿಂಗ್‌ರೊಂದಿಗೆ ಇವರು ತರಬೇತಿಯನ್ನು ಪಡೆಯುತ್ತಿದ್ದಾರೆ, 2016ರ ಜೂನ್ 18ರಂದು ಇವರನ್ನು ವಾಯುಸೇನೆಗೆ ಸೇರ್ಪಡೆಗೊಳಿಸಲಾಗಿತ್ತು.*
=============
*ಅವನಿ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಕಮಾಂಡರ್ ಪ್ರಶಾಂತ್ ದೀಕ್ಷಿತ್ ಅವರು, ‘ಇದು ಭಾರತ ಮತ್ತು ವಾಯುಸೇನೆಯ ಒಂದು ವಿಭಿನ್ನ ಸಾಧನೆಯಾಗಿದೆ’ ಎಂದರು.*
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ