ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಖುಷಿ ಸುದ್ದಿ; ಏಕದಿನದಲ್ಲೂ ಭಾರತ ನಂ.1
=============
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಾದ ಐತಿಹಾಸಿಕ ಏಕದಿನ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮಗದೊಂದು ಖುಷಿ ಸುದ್ದಿ ಬಂದಿದೆ.
============
ಭಾರತವೀಗ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ನಂ.1 ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಹಿಂದಕ್ಕೆ ತಳ್ಳಿರುವ ವಿರಾಟ್ ಕೊಹ್ಲಿ ಪಡೆ ಅಗ್ರಪಟ್ಟ ಆಲಂಕರಿಸಿದೆ.
==========
ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲೂ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 4-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.
============
ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲುವು ದಾಖಲಿಸಿದೆ.
============
ಇದೀಗ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ 122 ರೇಟಿಂಗ್ ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗಿಂತಲೂ ನಾಲ್ಕು ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
-===========
ಈ ಮೊದಲು ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಸೋಲಿನ ಹೊರತಾಗಿಯೂ ಭಾರತ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು. *
ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ:
==========
1. ಭಾರತ - 122
2. ದ.ಆಫ್ರಿಕಾ - 118
3. ಇಂಗ್ಲೆಂಡ್ - 116
4. ನ್ಯೂಜಿಲೆಂಡ್ - 115
5. ಆಸ್ಟ್ರೇಲಿಯಾ - 112
6. ಪಾಕಿಸ್ತಾನ - 96
7. ಬಾಂಗ್ಲಾದೇಶ - 90
8. ಶ್ರೀಲಂಕಾ - 84
9. ವೆಸ್ಟ್‌ಇಂಡೀಸ್ - 76
10. ಅಪಘಾನಿಸ್ತಾನ - 53
===============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ