ಇ-ಟೂರಿಸ್ಟ್ ವೀಸಾ ಮೂಲಕ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಶೇ.58.5ರಷ್ಟು ಏರಿಕೆ
=================
ನವದೆಹಲಿ: 2017ರ ಜನವರಿಗೆ ಹೋಲಿಸಿದರೆ 2018ರ ಜನವರಿಯಲ್ಲಿ ಇ-ಟೂರಿಸ್ಟ್ ವೀಸಾದ ಮೂಲಕ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.58.5ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
==========
ಬ್ಯುರೋ ಆಫ್ ಇಮಿಗ್ರೇಶನ್ (ಬಿಓಐ)ಯ ಅಂಕಿಅಂಶದ ಪ್ರಕಾರ, 2018ರ ಜನವರಿಯಲ್ಲಿ ಒಟ್ಟು 10.66 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಇದರಲ್ಲಿ 2.44 ಲಕ್ಷ ಜನರು ಇ-ಟೂರಿಸ್ಟ್ ವಿಸಾ ಮೂಲಕ ಆಗಮಿಸಿದ್ದಾರೆ.
==========
2017ರಲ್ಲಿ ಒಟ್ಟು 9.83 ಲಕ್ಷ ಪ್ರವಾಸಿಗರು ಆಗಮಿಸಿದ್ದರು, ಇ-ಟೂರಿಸ್ಟ್ ವೀಸಾ ಮೂಲಕ ಆಗಮಿಸಿದವರ ಸಂಖ್ಯೆ 1.52ಲಕ್ಷ ಆಗಿತ್ತು.
=========
ಯುಕೆ, ಯುಎಸ್‌ಎ, ರಷ್ಯಾ, ಫ್ರಾನ್ಸ್, ಕೆನಡಾಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಮಂಗಳವಾರ, ಫೆಬ್ರವರಿ 13, 2018
ಇ-ಟೂರಿಸ್ಟ್ ವೀಸಾ ಮೂಲಕ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಶೇ.58.5ರಷ್ಟು ಏರಿಕೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ