ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಂಬಾರ
==================
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಅಧ್ಯಕ್ಷರಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ.
==============
ಒಟ್ಟು 89 ಮತಗಳಲ್ಲಿ 56 ಮತಗಳು ಕಂಬಾರ ಅವರಿಗೆ ಬಂದಿವೆ. ಕಣದಲ್ಲಿದ್ದ ಮರಾಠಿಯ ಖ್ಯಾತ ಲೇಖಕ ಡಾ. ಬಾಲಚಂದ್ರ ನೆಮದೆ ಅವರಿಗೆ ನಾಲ್ಕು, ಒರಿಯಾದ ಲೇಖಕಿ ಪ್ರತಿಭಾ ರಾಯ್ ಅವರಿಗೆ 29 ಮತಗಳು ಸಿಕ್ಕಿವೆ.
===============
ಕಂಬಾರರು 1937 ಜನವರಿ 2ರಂದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದವರು. ಇವರ ಸಮಗ್ರ ಕೃತಿಗೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದ್ದು, ಇದು ಕನ್ನಡ ಭಾಷೆಗೆ ಬಂದ ಎಂಟನೇ ಜ್ಞಾನಪೀಠ ಪ್ರಶಸ್ತಿ.
===========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ