ಗುರುವಾರ, ಫೆಬ್ರವರಿ 15, 2018

ಮಾಹಿತಿಗಾಗಿ

ಮಾಹಿತಿಗಾಗಿ
==============
ವೈರಸ್ ಗಳ ಅಧ್ಯಯನ : ಹೆಚ್‍ಐವಿ ಅಥವಾ ಏಡ್ಸ್
===============
> ಹ್ಯುಮನ್ ಇಮ್ಯುನೋ ಡಿಫೀಷಿಯೆನ್ಸಿ ವೈರಸ್ (ಹೆಚ್‍ಐವಿ) ಎಂಬ ವೈರಾಣುವು ಅಕ್ವೈರ್ಡ್ ಇಮ್ಯುನೋ ಡಿಫೀಷಿಯೆನ್ಸಿ ಸಿಂಡ್ರೋಮ್ (ಏಡ್ಸ್) ಎಂಬ ಭಯಾನಕ ರೋಗಕ್ಕೆ ಕಾರಣವಾಗಿದೆ.
> ಅದೇ ರೀತಿ, ಹೆಪಟೈಟಿಸ್ ‘ಬಿ’ ವೈರಸ್ (ಹೆಚ್‍ಬಿವಿ) ಪಿತ್ತಕೋಶದಲ್ಲಿ ತೀವ್ರವಾದ ಅಪಸಾಮಾನ್ಯತೆಯನ್ನು ಉಂಟು ಮಾಡುತ್ತದೆ.
> ರೋಗಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಬಲ್ಲ ದೇಹದ ಸಾಮಥ್ರ್ಯಕ್ಕೆ ಅಭಾದತೆ ಎಂದು ಹೆಸರಿದೆ.
===============
ಏಡ್ಸ್ – ಅಕ್ವೈರ್ಡ್ ಇಮ್ಯುನೋ ಡಿಫೀಷಿಯೆನ್ಸಿ ಸಿಂಡ್ರೋಮ್
================
• ರೋಗವು ಬಹಳ ಹಿಂದಿನಿಂದಲೂ ಇದ್ದು, ಕೇವಲ 80ರ ದಶಕದಲ್ಲಿ ಬೆಳಕಿಗೆ ಬಂದಿತು ಎಂಬುದೋಂದು ಸಾಮಾನ್ಯ ನಂಬಿಕೆ.
• ಏಡ್ಸ್ ಎನ್ನುವುದು ದೇಹದ ಸ್ವನಿರ್ಮಿತ ರಕ್ಷಣಾ ವ್ಯವಸ್ಥೆಯು ಕ್ರಮೇಣ ನಾಶವಾಗುವ ಒಂದು ಪರಿಸ್ಥಿತಿಯನ್ನು ಬಿಂಬಿಸುತ್ತದೆ.
• ಏಡ್ಸ್ ರೋಗಕ್ಕೆ ತುತ್ತಾದ ವ್ಯಕ್ತಿಯು ನ್ಯುಮೋನಿಯಾ, ಆಮಶಂಕೆ, ಕ್ಷಯ ಮುಂತಾದ ರೋಗಗಳನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡು ಕೊನೆಗೆ ಇವುಗಳಲ್ಲಿ ಯಾವುದಾದರೊಂದು ಸೋಂಕಿನಿಂದಾಗಿ ಸಾವಿಗೆ ಈಡಾಗುತ್ತಾನೆ.
• ಮೊಟ್ಟಮೊದಲ ಬಾರಿಗೆ ಏಡ್ಸ್ ಅನ್ನು ಅಮೆರಿಕಾದಲ್ಲಿ 1981ರಲ್ಲಿ ಗುರುತಿಸಲಾಯಿತು.
• ವಿಶ್ವ ಏಡ್ಸ್ ದಿನ – ಡಿಸೆಂಬರ್ 1
==============
ವಿಶ್ವ ಏಡ್ಸ್ ದಿನ – ಡಿಸೆಂಬರ್ 1
=================
• ಪ್ರಮುಖವಾಗಿ ಇದನ್ನು ನ್ಯುಮೋನಿಯ & ಚರ್ಮದ ಕ್ಯಾನ್ಸರಿನ ಜೊತೆಗೆ ಗುರುತಿಸಲಾಗುತ್ತಿತ್ತು. ನಂತರ ಈ ರೋಗವನ್ನು ಚಿಕ್ಕ ವಯಸ್ಸಿನ ಸಲಿಂಗಿಗಳಲ್ಲಿ ಹಾಗೂ ಮಾದಕ ದ್ರವ್ಯ ವ್ಯಸನಿಗಳಲ್ಲಿ ಪತ್ತೆ ಹಚ್ಚಲಾಯಿತು. ಏಡ್ಸ್ ವೈರಸ್‍ನ ಸಂಶೋಧನೆ
• ಏಡ್ಸ್ ವೈರಸ್ ಅನ್ನು 1983ರಲ್ಲಿ ಮೊದಲಿಗೆ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್‍ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರ ಮಾಹಿತಿ ನೀಡಿದರು.
• ವೈರಸ್‍ಗಳನ್ನು ಹೆಸರಿಸುವ ಅಂತರರಾಷ್ಟ್ರೀಯ ಸಂಸ್ಥೆಯು, ಹೆಚ್‍ಐವಿ ಎಂಬ ಹೆಸರನ್ನು ಸೂಚಿಸಿತು.
ಏಡ್ಸ್ ಪತ್ತೆಯಾಗುವುದಕ್ಕೆ ಮುಂಚೆ..
• ಅನುವಂಶೀಯ (ತಂದೆ, ತಾಯಿಯಿಂದ ಮಕ್ಕಳಿಗೆ)
• ಪ್ರೇರೇಪಿತ (ಕಸಿ ಮಾಡುವಿಕೆಯಿಂದ)
• ಗಳಿಸಿದ (ಲೈಂಗಿಕ ಸಂಪರ್ಕದ ಮೂಲಕ ಉಂಟಾಗುವ)
================
# ಭಾರತದಲ್ಲಿ ಈ ರೋಗ ಮೊದಲಿಗೆ 1986ರಲ್ಲಿ ಚೆನ್ನೈನಲ್ಲಿ ಅಧಿಕೃತವಾಗಿ ಪತ್ತೆಯಾಯಿತು.
ಹೆಚ್‍ಐವಿಯ ರಚನೆ
# ಹೆಚ್‍ಐವಿ ಕಣವು ದುಂಡಾಕಾರವಾಗಿದ್ದು, ಆರ್‍ಎನ್‍ಎಯನ್ನು ಅನುವಂಶೀಯ ವಸ್ತುವಾಗಿ ಹೊಂದಿದೆ. ಕೊಬ್ಬಿನ ಪದಾರ್ಥದಿಂದಾದ ಇಪ್ಪದರದ ಪೊರೆಯಿಂದ ಇದು ಆವೃತವಾಗಿದೆ. ಈ ಪೊರೆಯ ಒಳಗೆ ಪ್ರೋಟೀನ್‍ನಿಂದ ಉಂಟಾದ ಕೋಶವೊಂದಿದೆ, ಇದರ ಮಧ್ಯೆ ವೈರಸ್‍ನ ಆರ್‍ಎನ್‍ಎನಿಂದ ಪೋಷಕ ಜೀವಕೋಶದಲ್ಲಿ ಡಿಎನ್‍ಎ ಸಂಶ್ಲೇಷಣೆ ಆಗುವುದಕ್ಕೆ ಸಹಯಕವಾಗಿದೆ.
# ವೈರಸ್‍ಗಳಲ್ಲಿ ರೆಟ್ರೋ ವೈರಸ್ ಎಂಬ ಗುಂಪಿಗೆ ಸೇರುವ ಹೆಚ್‍ಐವಿ, ಡಿಎನ್‍ಎ ಅನ್ನು ಸಂಶ್ಲೇಷಿಸುವ ಶಕ್ತಿ ಹೊಂದಿದೆ. ಪೋಷಕ ಜೀವಕೋಶಗಳಲ್ಲಿ ಇದು ಡಿಎನ್‍ಎ ಸಂಶ್ಲೇಷಣೆಯಲ್ಲಿ ತೊಡಗಿದಂತೆಲ್ಲಾ ಈ ವೈರಾಣುವನ್ನು ನಿಯಂತ್ರಿಸುವ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು ದುಸ್ತರವಾಗುತ್ತಲೇ ಹೋಗುತ್ತದೆ.
# ಸಾಮಾನ್ಯವಾಗಿ ದೇಹದ ಬಿಳಿರಕ್ತಕಣಗಳು ಅಪರಿಚಿತ ವಸ್ತುಗಳನ್ನು ಗುರುತಿಸಿ ನಾಶಪಡಿಸುತ್ತವೆ.
# ದೇಹದಲ್ಲಿ ವೈರಸ್‍ಗಳ ಪ್ರವೇಶವು ಲಿಂಪೋಸೈಟ್ ಗಳೆಂಬ ಬಿಳಿ ರಕ್ತಕಣಗಳ ಉತ್ಪಾದನೆಗೆ ಕಾರಣವಾಗುತ್ತವೆ. ‘ಬಿ’ & ‘ಟಿ’
================
ಎಚ್ ಐ ವಿ ಸೊಂಕಿತ ರೋಗಿಯಲ್ಲಿ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
==================
1. ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.  2. ಪ್ರತಿತಿಂಗಳು 10% ರಷ್ಟು ತೂಕ ಕಡಿಮೆಯಾಗುವುದು.  3. ಚರ್ಮದಲ್ಲಿ ತುರಿಕೆ, ಉಸಿರ್ನಾಳದಲ್ಲಿ ಉರಿಯೂತ, ಕೆಮ್ಮು ಹಾಗೂ ಕಫ ಉಂಟಾಗುವಿಕೆ.  4. ದೀರ್ಘಕಾಲ ಉಳಿಯುವ ಜ್ವರ & ಮೈ, ಕೈ ನೋವು.  5. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.  6. ಒಂದು ತಿಂಗಳಿಗೂ ದೀರ್ಘಕಾಲ ಅತಿಸಾರ ಭೇದಿಯಾಗುವುದು.  7. ವ್ಯಕ್ತಿಯ ನೆನಪಿನ ಶಕ್ತಿ ಕುಂದುತ್ತದೆ.
=============
ಸೋಂಕು ತಗುಲುವ ರೀತಿ : 
===============
1. ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ  2. ಸೋಂಕು ತಗುಲಿದ ರಕ್ತವನ್ನು ದಾನ ಪಡೆಯುವ ಮೂಲಕ  3. ಸೋಂಕು ತಗುಲಿದ ತಾಯಿಯಿಂದ ಮಗುವಿಗೆ   ಎ. ಜರಾಯುವಿನ ಮೂಲಕ ಭ್ರೂಣಕ್ಕೆ   ಬಿ. ಹೆರಿಗೆಯಾಗುವ ಸಂದರ್ಭದಲ್ಲಿ  ಸಿ. ಮೊಲೆಯೂಡಿಸುವ ಮೂಲಕ
4. ಸೋಂಕು ತಗುಲಿದ ವ್ಯಕ್ತಿಗಳು ಬಳಸಿದ ಸಿರಿಂಜ್ ಹಾಗೂ ಸೂಜಿಗಳನ್ನು ಮತ್ತೆ ಬಳಸುವುದರಿಂದ.
================
ಏಡ್ಸ್ ಹೀಗೆ ಹರಡಲ್ಲ :  
==============
ಏಡ್ಸ್ ಒಂದು ಸಾಂಕ್ರಾಮಿಕ ರೋಗವಾದರೂ ಅದು ಗಾಳಿ, ನೀರು, ಆಹಾರಗಳ ಮೂಲಕ ಹರಡುವುದಿಲ್ಲ.   ನೆಗಡಿ, ಇನ್‍ಫ್ಲೂಯೆಂಜ, ದಡಾರ ಮುಂತಾದ ರೋಗಗಳಂತೆ ಇದು ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಏಡ್ಸ್ ರೋಗಿಯ ಜೊತೆಯ ಹಸ್ತಲಾಘವ ಮಾಡುವ ಮೂಲಕ,  ಆಲಿಂಗನ ಮಾಡಿಕೊಳ್ಳುವ ಮೂಲಕ, ಏಡ್ಸ್ ರೋಗಿ ಬಳಸಿದ ತಟ್ಟೆ, ಲೋಟ ಪಾತ್ರೆಗಳನ್ನು ಬಳಸುವುದರಿಂದ, ರೋಗಿಯ ಜೊತೆಗೆ ಆಹಾರ ಸೇವಿಸುವುದರಿಂದ, ಸಾರ್ವಜನಿಕ ಶೌಚಾಲಯಗಳನ್ನು, ಈಜುಕೊಳಗಳನ್ನು ಹಮಚಿಕೊಳ್ಳುವುದರಿಂದ, ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ
===============
ಎಚ್ಚರಿಕೆಯ ಕ್ರಮಗಳು
===============
1. ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಪೂರ್ಣವಾಗಿ ತಡೆಯುವುದು.
2. ಏಡ್ಸ್ ರೋಗಿ ಬಳಸಿದ ಸೂಜಿ, ಸಿರಿಂಜ್‍ಗಳನ್ನು ಬೇರೆಯವರು ಬಳಸದೇ ಇರುವುದು.
3. ರಕ್ತದಾನ ಮಾಡುವುದಕ್ಕೆ ಇಲ್ಲವೇ ಪಡೆಯುವುದಕ್ಕೆ ಮುಂಚೆ ಹೆಚ್‍ಐವಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುವುದು.
4. ಹೆಚ್ ಐವಿ ಸೋಂಕು ತಗುಲಿರುವ ತಾಯಿಯು ತನ್ನ ಮಗುವಿಗೆ ಮೊಲೆಹಾಲು ನಿಡುವುದನ್ನು ತಡೆಯುವುದು.
5. ಮಾದಕ ದ್ರವ್ಯ ವ್ಯಸನಿಯಾಗದಂತೆ ವ್ಯಕ್ತಿಗಳನ್ನು ತಡೆಯುವುದು. ಅಂಥವರಿಗೆ ದ್ರವ್ಯಸೇವನೆಯ ಹಂತದಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ.
=============
ಹೆಚ್‍ಐವಿ ಪತ್ತೆಗೆ ಪರೀಕ್ಷೆಗಳು
===============
1. ಎಲಿಸಾ (ಎಂಜೈಮ್ ಲಿಂಕ್‍ಡ್ ಇಮ್ಯುನೋ ಸಾರ್ಬೆಂಟ್ ಆ್ಯಸ್ಸೆ)
2. ಪಿಸಿಆರ್ (ಪಾಲಿಮರೇಸ್ ಚೈನ್ ರಿಯಾಕ್ಷನ್)  3. ವೆಸ್ಟರ್ನ್ ಬ್ಲಾಟ್
============
# ಡಬ್ಲ್ಯೂ.ಎ.ಎಫ್ ವಲ್ರ್ಡ್ ಏಡ್ಸ್ ಫೌಂಡೇಶನ್ (ಸ್ವಿಟ್ಜರ್‍ಲೆಂಡ್) 1988ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಏಡ್ಸ್‍ಗೆ ಸಂಬಂಧಿಸಿದ ಶಿಕ್ಷಣ ಹಾಗೂ ಸಂಶೋಧನೆಗಳಿಗೆ ಅನುದಾನ ನೀಡುತ್ತದೆ.
#ನಮ್ಮ ದೇಶದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) 1992ರಲ್ಲಿ ಸ್ಥಾಪಿತವಾಯಿತು.
#1992ರಲ್ಲಿ ಪುಣೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಶ್ರಯದಲ್ಲಿ ನ್ಯಾಷನಲ್ ಏಡ್ಸ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ