ಮಾಹಿತಿಗಾಗಿ
ಇಟಲಿ, ಸ್ವೀಡನ್, ಅರ್ಜೇಂಟೀನಾ: ಇವು ಮೇಘಾಲಯ ಗ್ರಾಮಸ್ಥರ ಹೆಸರು!
===========
ಮೇಘಾಲಯ: ಇಟಲಿ, ಅರ್ಜೆಂಟೀನಾ, ಸ್ವೀಡನ್ ಮತ್ತು ಇಂಡೋನೇಷ್ಯಾ ಫೆ.27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ!
==========
ಹೌದು! ನಿಜಕ್ಕೂ ಇವರುಗಳು ವೋಟ್ ಮಾಡಲಿದ್ದಾರೆ. ಈ ದೇಶಗಳಿಗೆ ಮೇಘಾಲಯದಲ್ಲಿ ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ಎಂಬ ಯೋಚನೆಯೇ? ಅಸಲಿಗೆ ಇವು ದೇಶಗಳ ಹೆಸರಲ್ಲ ಮತದಾನ ಮಾಡುವ ಜನರ ಹೆಸರು. ಮೇಘಾಲಯದವರ ಹೆಸರು.
==========
ಮೇಘಾಲಯದ ಶೆಲ್ಲಾ ಕ್ಷೇತ್ರದಡಿ ಬರುವ ಉಮ್ನಿಹು-ತ್ಮಾರ್ ಇಲಕ ಗ್ರಾಮದ ಜನರ ಹೆಸರುಗಳಿವು. ವಿಪರೀತ ಇಂಗ್ಲೀಷ್ ವ್ಯಾಮೋಹ ಇವರನ್ನು ಇಂತಹ ಹೆಸರು ಇಡುವಂತೆ ಪ್ರೇರೇಪಿಸಿದೆ. ಪ್ರಾಮೀಸ್‌ಲ್ಯಾಂಡ್, ಹೋಲಿಲ್ಯಾಂಡ್, ಜೆರುಸಲೇಂ ಎಂಬಿತ್ಯಾದಿ ಹೆಸರುಗಳೂ ಈ ಗ್ರಾಮಸ್ಥರಿಗಿದೆ.
==========
ಮತದಾರರ ಪಟ್ಟಿಯಲ್ಲಿ ಇಂತಹ ನೂರಾರು ಹೆಸರುಗಳನ್ನು ಕಂಡು ಅಧಿಕಾರಿಗಳೇ ಆಶ್ಚರ್ಯಚಕಿತಗೊಂಡಿದ್ದಾರೆ. ಶೇ.50ರಷ್ಟು ಗ್ರಾಮಸ್ಥರು ಇಂಗ್ಲೀಷ್ ವ್ಯಾಮೋಹದಿಂದ ಇಂತಹ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ, ಅವರಿಗೆ ಇದರ ನಿಜವಾದ ಅರ್ಥಗಳು ತಿಳಿದಿಲ್ಲ ಎಂಬುದು ಅಧಿಕಾರಿಗಳ ಮಾತು.
============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ