ಭಾನುವಾರ, ಫೆಬ್ರವರಿ 11, 2018

ಮಹಿಳಾ ವಿಶೇಷ


           ಮಾಹಿತಿ ವೇದಿಕೆ

2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಸಾಧಕರಲ್ಲೊಬ್ಬರು ಅರೇಬಿಕ್ ಯೋಗಾಚಾರ್ಯ ಎಂದೇ ಹೆಸರಾದ ನೌಫ್ ಮಾರ್ವಾಯಿ. 1980ರಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದ ನೌಫ್ ಅವರಿಗೆ ಬಾಲ್ಯದಿಂದಲೇ ರೋಗನಿರೋಧಕ ಶಕ್ತಿ ಕಡಿಮೆ ಇತ್ತು. ಏಳು ವರ್ಷ ಯಾವುದೇ ಶಿಕ್ಷಕರಿಲ್ಲದೆ ಯೋಗಾಭ್ಯಾಸ ಮಾಡಿದ ಅವರು ಅತ್ಯುತ್ತಮ ಆರೋಗ್ಯವನ್ನು ಪಡೆದರು. 2010ರಲ್ಲಿ ಅರಬ್ ಯೋಗ ಫೌಂಡೇಶನ್ ಸ್ಥಾಪಿಸಿರುವ ನೌಫ್; ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯೋಗ ಕಲಿಸಿದ್ದು, ಐದುನೂರಕ್ಕೂ ಅಧಿಕ ಯೋಗಗುರುಗಳನ್ನು ರೂಪಿಸಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಯೋಗ ಮತ್ತು ಭಾರತೀಯ ಆಯುರ್ವೇದ ಪದ್ಧತಿಯನ್ನು ಪಸರಿಸುತ್ತಿರುವ ನೌಫ್, ಸೌದಿ ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನಾಚರಣೆ ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ