ಭಾನುವಾರ, ಫೆಬ್ರವರಿ 11, 2018

ದುಬೈನಲ್ಲಿ ವಿಶ್ವದ ಅತಿ ಎತ್ತರ ಹೊಟೇಲ್ ಆರಂಭ*

ಮಾಹಿತಿ ವೇದಿಕೆ

*ದುಬೈನಲ್ಲಿ ವಿಶ್ವದ ಅತಿ ಎತ್ತರ ಹೊಟೇಲ್ ಆರಂಭ*

 ದುಬೈ,ಫೆ.11: ವಿಶ್ವದಾಖಲೆಗಳನ್ನು ಮುರಿಯುವ ತನ್ನ ಸಾಧನೆ ಯನ್ನು ಮುಂದುವರಿಸಿರುವ ದುಬೈ ಮಹಾನಗರವು ರವಿವಾರ, ಜಗತ್ತಿನ ಅತ್ಯಂತ ಎತ್ತರದ ಹೊಟೇಲ್‌ನ ಆರಂಭವನ್ನು ಘೋಷಿಸಿದೆ.
==============
 75 ಅಂತಸ್ತುಗಳ ಗೆವೊರಾ ಹೊಟೇಲ್ 356 ಮೀಟರ್ ಎತ್ತರವಿದ್ದು, ಇದು ಕಾಲು ಮೈಲು ವಿಸ್ತೀರ್ಣಕ್ಕೆ ಸರಿಸಮವಾಗಿದೆ.  ಈವರೆಗೆ ದುಬೈನ ಜೆಡಬ್ಲ್ಯು ಮ್ಯಾರಿಯೊಟ್ ಮಾರ್ಕಿಸ್, ಜಗತ್ತಿನ ಅತಿ ಎತ್ತರದ ಹೊಟೇಲ್ ಎಂಬ ದಾಖಲೆಯನ್ನು ಹೊಂದಿತ್ತು. ಇಂದು ಆರಂಭಗೊಂಡಿರುವ ಗೆವೊರಾ ಮಾರ್ಕಿಸ್ ಅದಕ್ಕಿಂತ ಒಂದು ಮೀಟರ್‌ನಷ್ಟು ಅಧಿಕ ಎತ್ತರವಿದೆ.
===========
ಗೆವೊರಾ ಹೊಟೇಲ್ ಸೋಮವಾರದಿಂದ ಸಾರ್ವಜನಿಕರಿಗಾಗಿ ತೆರೆಯುವ ನಿರೀಕ್ಷೆಯಿದೆಯೆಂದು ಎಮಿರೇಟಿ ದಿನಪತ್ರಿಕೆ ‘ದಿ ನ್ಯಾಶನಲ್’ ವರದಿ ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ